ADVERTISEMENT

ಬುಕ್ಕಸಾಗರ ಸೇತುವೆ ಮೇಲೆ ಬಸ್‌ ಸಂಚಾರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 8:53 IST
Last Updated 19 ಜುಲೈ 2017, 8:53 IST

ಹೊಸಪೇಟೆ: ತಾಲ್ಲೂಕಿನ ಹಂಪಿ ಹಾಗೂ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಆನೆಗುಂದಿ ನಡುವೆ ಸಂಪರ್ಕ ಬೆಸೆಯುವ ಬುಕ್ಕಸಾಗರ ಸಮೀಪ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ಕೊನೆಗೂ ಸಾರಿಗೆ ಸಂಸ್ಥೆ ಬಸ್‌ ಸಂಚಾರ ಆರಂಭಿಸಿದೆ. ‘ಸೇತುವೆ ಸಿದ್ಧವಾದರೂ ಬಸ್‌ ಸಂಚಾರ ಮರೀಚಿಕೆ’ ಶೀರ್ಷಿಕೆ ಅಡಿ ಯಲ್ಲಿ ಜೂನ್‌ 15ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.

ಏಪ್ರಿಲ್‌ನಲ್ಲಿಯೇ ಸೇತುವೆ ನಿರ್ಮಾಣ ಪೂರ್ಣಗೊಂಡಿತ್ತು. ಖಾಸಗಿ ವಾಹನಗಳ ಸಂಚಾರ ಆರಂಭ ಗೊಂಡಿತ್ತು. ಆದರೆ, ಹೊಸಪೇಟೆ–ಗಂಗಾವತಿ ನಡುವೆ ಸಾರಿಗೆ ಸಂಸ್ಥೆ ಬಸ್ಸುಗಳು ಕಂಪ್ಲಿ ಮಾರ್ಗವಾಗಿಯೇ ಓಡಾಡುತ್ತಿದ್ದವು. ಒಟ್ಟು 45 ಕಿ.ಮೀ ಅಂತರ ಕ್ರಮಿಸಲು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಹಿಡಿಯುತ್ತಿತ್ತು.

ಅಷ್ಟೇ ಅಲ್ಲ, ₹45 ಟಿಕೆಟ್‌ ಪಾವತಿ ಸಬೇಕಿತ್ತು. ಈಗ ಬುಕ್ಕಸಾಗರ ಸೇತುವೆ ಮೇಲಿನಿಂದ ಬಸ್ಸುಗಳು ಸಂಚರಿಸುತ್ತಿ ರುವುದರಿಂದ ಪ್ರಯಾಣದ ಅವಧಿ 40 ನಿಮಿಷಕ್ಕೆ ತಗ್ಗಿದೆ. ₹33 ಟಿಕೆಟ್‌ ನಿಗದಿ ಪಡಿಸಲಾಗಿದೆ. ಕಡಿಮೆ ಅವಧಿಯಲ್ಲಿ ಸಂಚರಿಸುವುದರ ಜತೆಗೇ ಪ್ರಯಾಣಿಕರ ಮೇಲಿನ ಆರ್ಥಿಕ ಹೊರೆಯೂ ಕಡಿಮೆಯಾಗಿದೆ.

ADVERTISEMENT

‘ಸಾರಿಗೆ ಸಂಸ್ಥೆಯ ಗಂಗಾ ವತಿ ವಿಭಾಗವು ಜುಲೈ ಎಂಟ ರಿಂದಲೇ ಮೂರು ಬಸ್ಸುಗ ಳನ್ನು ಸೇತುವೆ ಮಾರ್ಗ ವಾಗಿ ಓಡಿಸುತ್ತಿದೆ. ಹೊಸಪೇಟೆ ವಿಭಾಗದಿಂದ ಜು. 12ರಿಂದ ಮೂರು ಬಸ್‌ ಗಳನ್ನು ಓಡಿಸಲಾಗುತ್ತಿದೆ. ನಿತ್ಯ ಆರು ಬಸ್ಸುಗಳು 32 ಟ್ರಿಪ್‌ ಸಂಚಾರ ಮಾಡುತ್ತಿವೆ’ ಎಂದು ಈಶಾನ್ಯ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ಮಹಮ್ಮದ್‌ ಫಯಾಜ್‌ ಮಂಗಳವಾರ ‘ಪ್ರಜಾ ವಾಣಿ’ಗೆ ತಿಳಿಸಿದರು.

‘ಸೇತುವೆ ಮೇಲಿನಿಂದ ಬಸ್‌ ಸಂಚಾರ ಆರಂಭಿಸಬೇಕು ಎನ್ನುವುದು ಜನರ ಬೇಡಿಕೆಯಾಗಿತ್ತು. ಅದಕ್ಕೆ ಸ್ಪಂದಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.‘ನಾನು ಗಂಗಾವತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಿತ್ಯ ಹೊಸಪೇಟೆ ಯಿಂದ ಅಲ್ಲಿಗೆ ಹೋಗಿ ಬರುತ್ತೇನೆ. ಸೇತುವೆ ಪೂರ್ಣಗೊಂಡಿದ್ದರೂ ಸಾರಿಗೆ ಸಂಸ್ಥೆ ಬಸ್ಸುಗಳನ್ನು ಓಡಿಸುತ್ತಿರಲಿಲ್ಲ.

ಇದರಿಂದಾಗಿ ಕಂಪ್ಲಿ ಸುತ್ತು ಹಾಕಿ ಹೋಗ ಬೇಕಿತ್ತು. ಈ ವಿಷಯವನ್ನು ‘ಪ್ರಜಾ ವಾಣಿ’ ಪತ್ರಿಕೆಯ ಗಮನಕ್ಕೆ ತಂದಾಗ ಜನರಿಗೆ ಆಗುತ್ತಿರುವ ಸಮಸ್ಯೆ ಯನ್ನು ಪರಿಗಣಿಸಿ ವರದಿ ಪ್ರಕಟಿಸಿತ್ತು. ಆ ವರದಿ ಮೇಲೆ ಸಾರಿಗೆ ಸಂಸ್ಥೆ ಕ್ರಮ ಕೈಗೊಂಡಿ ರುವುದು ಒಳ್ಳೆಯ ಸಂಗತಿ’ ಎಂದು ಸಂತಸ ವ್ಯಕ್ತಪಡಿ ಸುತ್ತಾರೆ ಭಾರತೀಯ ಸ್ಟೇಟ್‌ ಬ್ಯಾಂಕಿನಲ್ಲಿ ಹಣಕಾಸು ವಿಷಯದ ಕೌನ್ಸಿಲರ್‌ ಆಗಿರುವ ಪ್ರಭುದೇವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.