ADVERTISEMENT

ಭೂಮಿ, ನಿರುದ್ಯೋಗ ಭತ್ಯೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 8:54 IST
Last Updated 22 ಜುಲೈ 2017, 8:54 IST

ಬಳ್ಳಾರಿ: ತಾಲ್ಲೂಕಿನಲ್ಲಿ ಮಿತ್ತಲ್‌ ಮತ್ತು ಬ್ರಹ್ಮಿಣಿ ಸ್ಟೀಲ್‌ ಕಾರ್ಖಾನೆ ಸ್ಥಾಪನೆ ಸಲುವಾಗಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ ಜಮೀನು ನೀಡಿದ ತಾಲ್ಲೂಕಿನ ಕುಡುತಿನಿ, ಹರಗಿನದೋಣಿ, ವೇಣಿವೀರಾಪುರ ಮತ್ತು ಕೊಳಗಲ್ಲು ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

2010ರಲ್ಲಿ ಬಲವಂತವಾಗಿ ಭೂಸ್ವಾಧೀನ ಮಾಡಿಕೊಂಡ ಪ್ರದೇಶ ದಲ್ಲಿ ಇನ್ನೂ ಕೈಗಾರಿಕೆಗಳನ್ನು ಸ್ಥಾಪಿಸದೇ ಇರುವುದರಿಂದ, ಭೂಮಿಯನ್ನು ವಾಪಸು ನೀಡಬೇಕು ಇಲ್ಲವೇ ಮಾಸಿಕ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಆಗ್ರಹಿಸಿ ಇದೇ 24ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಭೂಸಂತ್ರಸ್ತರ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಯು.ಬಸವರಾಜ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭೂಸ್ವಾಧೀನ ಸಂದರ್ಭದಲ್ಲಿ ದರ ನಿಗದಿ ಮಾಡುವಲ್ಲಿ ಮಂಡಳಿ ನಾಲ್ಕೂ ಗ್ರಾಮಗಳ 2.500ಕ್ಕೂ ಹೆಚ್ಚು ರೈತರನ್ನು ವಂಚಿಸಿದೆ. ಆ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು. ದರ ನಿಗದಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ 15 ರೈತರಿಗೆ ಹೆಚ್ಚಿನ ಪರಿಹಾರ ದೊರಕಿದೆ. ಹೀಗಾಗಿ ಸಮಿತಿಯೂ ನ್ಯಾಯಾಲಯದ ಮೆಟ್ಟಿಲು ಏರಲು ನಿರ್ಧರಿಸಿದೆ. ಈ ಬಗ್ಗೆ ಕುಡುತಿನಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ADVERTISEMENT

ನಿಯಮ ಉಲ್ಲಂಘನೆ: 2013ರ ಭೂ ಸ್ವಾಧೀನ ಕಾಯ್ದೆ ಪ್ರಕಾರ, ಭೂ ಸ್ವಾಧೀನ ಮಾಡಿಕೊಂಡ ಐದು ವರ್ಷದೊಳಗೆ ಕಾರ್ಖಾನೆಯನ್ನು ಸ್ಥಾಪಿಸಬೇಕು. ಇಲ್ಲದಿ ದ್ದರೆ ರೈತರಿಗೆ ಜಮೀನು ವಾಪಸು ನೀಡ ಬೇಕು. ಏಳು ವರ್ಷ ಪೂರ್ಣಗೊಂಡರೂ ಕಾರ್ಖಾನೆಗಳು ಸ್ಥಾಪನೆ ಆಗಿಲ್ಲ. ಹೀಗಾಗಿ ಜಮೀನು ವಾಪಸು ಮಾಡಬೇಕು ಅದಾಗದಿದ್ದರೆ ಮಾಸಿಕ ₹20 ಸಾವಿರ ನಿರುದ್ಯೋಗ ಭತ್ಯೆಯನ್ನ ನೀಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಲಾಗುವುದು ಎಂದರು.

ಸೌರ ಘಟಕ ಬೇಡ: ಮಿತ್ತಲ್‌ ಕಂಪೆನಿಯು ಮೊದಲು ಹೇಳಿದ್ದಂತೆ ಸ್ಟೀಲ್‌ ಉತ್ಪಾ ದನಾ ಘಟಕವನ್ನು ಸ್ಥಾಪಿಸಬೇಕಾ ಗಿತ್ತು. ಆದರೆ ಅದನ್ನು ಕೈ ಬಿಟ್ಟು ಸೌರ ವಿದ್ಯುತ್‌ ಉತ್ಪಾದನಾ ಘಟಕವನ್ನು ಆರಂಭಿಸಲು ಪ್ರಯತ್ನ ನಡೆಸಿದೆ. ಆ ಘಟಕದಿಂದ, ಜಮೀನು ಕಳೆದುಕೊಂಡ ಎಲ್ಲರಿಗೂ ಉದ್ಯೋಗ ದೊರಕುವ ಖಾತರಿ ಇಲ್ಲ.

ಇನ್ನು ಎಲ್ಲ ಸ್ಥಳೀಯರಿಗೂ ಉದ್ಯೋಗದ ದೊರಕುವ ಮಾತು ದೂರವೇ ಉಳಿಯು ತ್ತದೆ. ಹೀಗಾಗಿ ಸೌರ ಘಟಕವನ್ನು ಸ್ಥಾಪಿಸ ಬಾರದು ಎಂದು ಒತ್ತಾಯಿಸಿದರು.
ಸಮಿತಿಯ ಅಧ್ಯಕ್ಷ ವೆಂಕಟ ರಮಣಬಾಬು, ಪದಾಧಿಕಾರಿಗಳಾದ ದೊಡ್ಡಬಸಪ್ಪ, ಜಂಗ್ಲಿಸಾಬ್‌, ವೀರೇಶಗೌಡ, ಗೋಪಾಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.