ADVERTISEMENT

ಭೂ ವಿವಾದ: ಮುಂದುವರಿದ ಮುನಿಸು

ನಿವೇಶನಗಳ ನಡುವೆ ಮಾಹಿತಿ ಫಲಕ ಅಳವಡಿಸಿದ ಬಿಜೆಪಿ ಮುಖಂಡ ಕರುಣಾಕರ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 6:47 IST
Last Updated 24 ಮಾರ್ಚ್ 2017, 6:47 IST

ಬಳ್ಳಾರಿ: ಬಿಜೆಪಿ ಮುಖಂಡ ಜಿ.ಕರುಣಾಕರ ರೆಡ್ಡಿ ತಮ್ಮ ನಿವೇಶನ ವಿರುವ ‘ಸುಷ್ಮಾ ಸ್ವರಾಜ್‌ ಕಾಲೊನಿ’ ಯಲ್ಲಿ ಕೆಲವು ದಿನಗಳ ಹಿಂದೆ ಕೋರ್ಟ್‌ ದಾವೆಯ ಮಾಹಿತಿಯುಳ್ಳ ಫಲಕವನ್ನು ಅಳವಡಿಸಿದ್ದಾರೆ. ಹೀಗಾಗಿ ಸಂಸದ ಬಿ.ಶ್ರೀರಾಮುಲು ಹಾಗೂ ರೆಡ್ಡಿ  ನಡು ವಿನ ನಿವೇಶನ ವಿವಾದ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ.

‘ಇಬ್ಬರ ನಡುವೆ ಶೀಘ್ರವೇ ಸಂಧಾನ ನಡೆಸಲಾಗುವುದು. ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿ ಕೊಳ್ಳುವಂತೆ ಮನವೊಲಿಸ ಲಾಗು ವುದು’ ಎಂದು ರೆಡ್ಡಿ ಸಹೋದರ ಜಿ. ಸೋಮಶೇಖರ ರೆಡ್ಡಿ ಇದೇ ಮಾರ್ಚ್‌ 1ರಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿ ದ್ದರು. ಆ ನಂತರ ಅವರು ಕರುಣಾಕರ ರೆಡ್ಡಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದು ಬಿಟ್ಟರೆ ಸಂಧಾನ ಸಭೆ ನಡೆದಿಲ್ಲ.

‘ಸಂಧಾನಕಾರನಾಗಿ ಕರುಣಾಕರ ರೆಡ್ಡಿ ಅವರ ಮನೆಗೆ ಹೋಗುವುದಿಲ್ಲ’ ಎಂದು ರೆಡ್ಡಿ ಸುದ್ದಿಗೋಷ್ಠಿಯಲ್ಲೇ  ಸ್ಪಷ್ಟ ಪಡಿಸಿ, ಶ್ರೀರಾಮುಲು ಅವರನ್ನು ಹೊಗ ಳಿ, ರೆಡ್ಡಿ ಅವರನ್ನು ಜರಿದಿದ್ದರು. ಅದಾಗಿ 23 ದಿನಗಳಾಗಿದ್ದು, ಬಿಕ್ಕಟ್ಟು ಮುಂದು ವರಿಯುವ ಲಕ್ಷಣಗಳೇ ಕಂಡುಬರುತ್ತಿವೆ.

‘ರೆಡ್ಡಿ ಅವರಿಗೆ ಅನಾರೋಗ್ಯ ಇದೆ. ಶ್ರೀರಾಮುಲು ಅವರು ನಂಜನಗೂಡು ಉಪ ಚುನಾವಣೆ ಪ್ರಚಾರ ಕಾರ್ಯದಲ್ಲಿ  ತೊಡಗಿಕೊಂಡಿದ್ದಾರೆ. ಹೀಗಾಗಿ ಇಬ್ಬರ ನಡುವೆ ಸಂಧಾನ ಯತ್ನ ಇನ್ನೂ ನಡೆದಿಲ್ಲ’ ಎಂದು  ಜಿ.ಸೋಮಶೇಖರ ರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಫಲಕದಲ್ಲಿ ಏನಿದೆ?: ‘ಈ ಕಾಲೊನಿ ಯಲ್ಲಿರುವ ಸರ್ವೆ ನಂಬರ್‌ 67/3ರ 2.85 ಎಕರೆ ಪ್ರದೇಶವು ಕರುಣಾಕರ ರೆಡ್ಡಿಯವರಿಗೆ ಸೇರಿದ್ದು, ನ್ಯಾಯಾಲ ಯದ ಆದೇಶದಂತೆ ಇದನ್ನು ಯಾರೂ ಪರಭಾರೆ ಮಾಡಬಾರದು.

ನಿವೇಶನ ಸಂಖ್ಯೆ 19ರಿಂದ33, 73ರಿಂದ 88, 122ರಿಂದ 131ರ ವರೆಗಿನ ಜಾಗದ ಕುರಿತು ಪ್ರಧಾನ ಸಿವಿಲ್‌ ನ್ಯಾಯಾಲಯ ದಲ್ಲಿ ದಾವೆ ಇದೆ. ಈ ಆಸ್ತಿಯನ್ನು ಪರ ಭಾರೆ ಮಾಡಬಾರದು ಎಂದು ನ್ಯಾಯಾ ಲಯ ಆದೇಶಿಸಿರುವುದರಿಂದ, ಯಾರಿಂ ದಲೂ ನಿವೇಶನಗಳನ್ನು ಖರೀದಿ ಸಬಾ ರದು’ ಎಂದು ಕರುಣಾಕರೆ ರೆಡ್ಡಿ ಅಳವಡಿ ಸಿರುವ ಫಲಕದಲ್ಲಿ ತಿಳಿಸಲಾಗಿದೆ.

ಪ್ರಕರಣ ಹಿನ್ನೆಲೆ: ಕಾಲೊನಿಯ ಆಸ್ತಿ ಮಾಲೀಕತ್ವದ ಘೋಷಣೆ ಕೋರಿ ಕರುಣಾಕರ ರೆಡ್ಡಿ ಅವರು ಶ್ರೀರಾಮುಲು, ಬಳ್ಳಾರಿಯ ತಿಮ್ಮರಾಜು ಹಾಗೂ ಭೈರದೇವನಹಳ್ಳಿಯ ಡಿ.ರಾಘವೇಂದ್ರ ವಿರುದ್ಧ ಸಿವಿಲ್‌ ನ್ಯಾಯಾಲಯದಲ್ಲಿ 10 ದಾವೆ ಹೂಡಿದ್ದಾರೆ.

ಆ ಸಂಬಂಧ ಮೂವರಿಗೂ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿತ್ತು. ಅದಾಗಿ ಕೆಲವು ದಿನಗಳ ನಂತರ ಕರುಣಾಕರ ರೆಡ್ಡಿ ವಿರುದ್ಧ ಜಾತಿನಿಂದನೆ ದೂರು ದಾಖ ಲಾಗಿತ್ತು. ಈ ದೂರು–ಪ್ರತಿ ದೂರು, ಭೂ ವಿವಾದವನ್ನು ತೀವ್ರ ನೆಲೆಗೆ ಕೊಂಡೊ ಯ್ದಿತ್ತು. ಫಲಕ ಅಳವಡಿಕೆ ಸಂಬಂಧ ಪ್ರತಿಕ್ರಿಯೆಗಾಗಿ ಶ್ರೀರಾಮುಲು ಅವರಾ ಗಲೀ, ರೆಡ್ಡಿ ಅವರಾಗಲೀ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.

*
ಕರುಣಾಕರ ರೆಡ್ಡಿ  ಮಂಡಿ ನೋವಿನಿಂದ ಬಳಲುತ್ತಿದ್ದು , ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಅವರು ಬಳ್ಳಾರಿಗೆ ಬಂದ ಬಳಿಕ  ಸಂಧಾನ ನಡೆಸಲಾಗುವುದು.
-ಜಿ.ಸೋಮಶೇಖರ ರೆಡ್ಡಿ,
ಮಾಜಿ ಶಾಸಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.