ADVERTISEMENT

ಲಕ್ಷ ಮಹಿಳೆಯರಿಗೆ ಅಡುಗೆ ಅನಿಲ ಸೌಕರ್ಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 6:39 IST
Last Updated 12 ಸೆಪ್ಟೆಂಬರ್ 2017, 6:39 IST
ಲಕ್ಷ ಮಹಿಳೆಯರಿಗೆ ಅಡುಗೆ ಅನಿಲ ಸೌಕರ್ಯ
ಲಕ್ಷ ಮಹಿಳೆಯರಿಗೆ ಅಡುಗೆ ಅನಿಲ ಸೌಕರ್ಯ   

ಬಳ್ಳಾರಿ: ‘ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆಯಲಿರುವ ಬಳ್ಳಾರಿ ಅಭಿವೃದ್ಧಿ ಮತ್ತು ಸಾಧನಾ ಸಮಾವೇಶದಲ್ಲಿ ಜಿಲ್ಲೆಯ 1 ಲಕ್ಷ ಮಹಿಳೆಯರಿಗೆ ಜಿಲ್ಲಾ ಖನಿಜ ನಿಧಿಯಿಂದ ಅಡುಗೆ ಅನಿಲ ಸೌಕರ್ಯವನ್ನು ಒದಗಿಸಲಾಗುವುದು’  ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ತಿಳಿಸಿದರು.

ಸಮಾವೇಶದ ಕುರಿತು ಮಾಹಿತಿ ನೀಡಲು ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಗಣಿಗಾರಿಕೆಯಿಂದ ಪ್ರತ್ಯಕ್ಷವಾಗಿ ಬಾಧಿತರಾದವರು ಮತ್ತು ಪರೋಕ್ಷವಾಗಿ ಬಾಧಿತರಾದವರಿಗೆ ಕ್ರಮವಾಗಿ ಶೇ 60: 40ರ ಅನುಪಾತದಲ್ಲಿ ಸೌಲಭ್ಯ ಒದಗಿಸಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಅದಿರು ಗಣಿಗಾರಿಕೆ ಯಷ್ಟೇ ಅಲ್ಲದೆ, ಕಲ್ಲು, ಮರಳು ಗಣಿಗಾರಿಕೆಯಿಂದಲೂ ಬಾಧಿತರಾದವ ರಿದ್ದಾರೆ. ಅವರಿಗೂ ಸೌಲಭ್ಯ ಕಲ್ಪಿಸು ವುದು ಜಿಲ್ಲಾಡಳಿತದ ಜವಾಬ್ದಾರಿ ಯಾಗಿದೆ’ ಎಂದರು.

ADVERTISEMENT

‘ಅಂಗವಿಕಲರಿಗೆ ಉಚಿತ ವಾಹನ ಗಳು, ಅಕ್ರಮ–ಸಕ್ರಮ ಯೋಜನೆ ಅಡಿ 10,148 ಮಂದಿಗೆ ಹಕ್ಕು ಪತ್ರ, ವಸತಿ ಹೀನರಿಗೆ ನಿವೇಶನ ಹಕ್ಕುಪತ್ರ ವಿತರಿಸ ಲಾಗುವುದು. ಒಟ್ಟು 16 ಇಲಾಖೆಗಳು, 7 ನಿಗಮಗಳು, ನಗರಾಭಿವೃದ್ಧಿ ಪ್ರಾಧಿ ಕಾರ, ಪಾಲಿಕೆಯ ವ್ಯಾಪ್ತಿಯ ಹಲವು ಯೋಜನೆಗಳ ಫಲಾನುಭವಿಗಳಿಗೆ ಸಮಾವೇಶ ಅನುಕೂಲ ಕಲ್ಪಿಸಲಿದೆ’ ಎಂದರು.

ಉಚಿತ ಬಸ್‌: ‘ಜಿಲ್ಲೆಯ ಎಲ್ಲೆಡೆಯ ಜನ ಸಮಾವೇಶದಲ್ಲಿ ಪಾಲ್ಗೊಳ್ಳಲು ಅನುಕೂಲವಾಗಿ ಎಂಬ ಕಾರಣದಿಂದ ಸಾರಿಗೆ ನಿಗಮದ 1000 ಬಸ್‌ ಮತ್ತು 168 ಖಾಸಗಿ ಬಸ್‌ಗಳು ಸಂಚರಿಸಲಿವೆ. ಎಲ್ಲರೂ ಉಚಿತವಾಗಿ ಪ್ರಯಾಣಿಸ ಬಹುದು. ಖಾಸಗಿ ಸಹಭಾಗಿತ್ವದಲ್ಲಿ ಬಸ್‌ ಸಂಚಾರದ ವೆಚ್ಚವನ್ನು ಭರಿಸಲಾಗು ವುದು’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉಪಸ್ಥಿತರಿದ್ದರು. ಫಲಾನುಭವಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೌಲಭ್ಯಗಳನ್ನು ವಿತರಿಸಲಿದ್ದಾರೆ ಎಂದು ಸಚಿವ ಲಾಡ್‌ ತಿಳಿಸಿದರು.

‘ಮನವಿ ಸಲ್ಲಿಸಲು ಮುಖಂಡರಿಗೆ ಅವಕಾಶ’
‘ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಯನ್ನು ಆಗ್ರಹಿಸಿ ಪ್ರತಿಭಟನೆ, ಧರಣಿ ನಡೆಸಲು ನಿರ್ಧರಿಸಿದ್ದ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿ ಸಂಧಾನ ಏರ್ಪಡಿಸಲಾಗಿದೆ. ಮನವಿ ಸಲ್ಲಿಸಲು ನಗರದ ಬಿಡಿಎಎ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಸಮಾವೇಶ ಮುಗಿದ ಬಳಿಕ ಯಾರು ಬೇಕಾದರೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಬ ಹುದು’ ಎಂದು ಎಂದು ಎಸ್ಪಿ ಚೇತನ್‌ ತಿಳಿಸಿದರು.

ಸಮಾವೇಶದಲ್ಲಿ ಇಂದು
ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ: ಬಳ್ಳಾರಿ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಧನಾ ಸಮಾವೇಶ, ಕಾರ್ಮಿಕ ಇಲಾಖೆಯ ನೂತನ ಕಾರ್ಯಕ್ರಮ ಗಳಿಗೆ ಚಾಲನೆ,ಜಾಗೃತಿ ಆಂದೋಲನ, ಮಾಜಿ ದೇವದಾಸಿ ಮಹಿಳೆಯರ ಸಮಾವೇಶ. ಉದ್ಘಾ ಟನೆ: ಮುಖ್ಯ ಮಂತ್ರಿ ಸಿದ್ದರಾಮಯ್ಯ, ಅಧ್ಯಕ್ಷತೆ: ಶಾಸಕ ಅನಿಲ್ ಲಾಡ್, ಉಪಸ್ಥಿತಿ: ಉಸ್ತುವಾರಿ ಸಚಿವ ಎಸ್. ಸಂತೋಷ್ ಲಾಡ್, ಸಚಿವರಾದ ಕಾಗೋಡು ತಿಮ್ಮಪ್ಪ, ರೋಷನ್ ಬೇಗ್, ಉಮಾಶ್ರೀ, ಎಂ.ಕೃಷ್ಣಪ್ಪ, ತನ್ವೀರ್ ಸೇಠ್, ಯು.ಟಿ. ಖಾದರ್, ಜಿ.ಪಂ. ಅಧ್ಯಕ್ಷೆ ಸಿ.ಭಾರತಿ, ಮೇಯರ್ ಜಿ.ವೆಂಕಟರಮಣ. ಮುನ್ಸಿ ಪಲ್ ಕಾಲೇಜು ಮೈದಾನ, ಬೆಳಿಗ್ಗೆ 11

ಬಳ್ಳಾರಿ: ಸಮಾವೇಶ ನಡೆಯ ಲಿರುವ ಕಾಲೇಜು ಸುತ್ತಮುತ್ತ ಭದ್ರತೆ ಸಲುವಾಗಿ 30 ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸ ಲಾಗಿದೆ. ಕಂಟ್ರೋಲ್‌ ರೂಂನ ಸಿಬ್ಬಂದಿ ಕಣ್ಗಾವಲು ಇಡಲಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ತಿಳಿಸಿದರು. ‘ಭದ್ರತೆ ಸಲುವಾಗಿ ಜಿಲ್ಲೆಯ ಪೊಲೀಸ ರೊಂದಿಗೆ ಕೊಪ್ಪಳ ಮತ್ತು ರಾಯ ಚೂರು ಜಿಲ್ಲೆಯ ಪೊಲೀಸರನ್ನೂ ನಿಯೋ ಜಿಸಲಾಗಿದೆ’ ಎಂದು ತಿಳಿಸಿದರು.

ಅಂಕಿ ಅಂಶ
₹1.20ಕೋಟಿ ಸಾಧನಾ ಸಮಾವೇಶದ ವೆಚ್ಚ

1168 ಜಿಲ್ಲೆಯಾದ್ಯಂತ ಉಚಿತ ಬಸ್‌

3.42ಲಕ್ಷ ಮಂದಿಗೆ ಸೌಲಭ್ಯಗಳ ವಿತರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.