ADVERTISEMENT

ಸನಾತನ ಸಂಸ್ಕೃತಿ ಪಾಲಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 9:08 IST
Last Updated 11 ಜನವರಿ 2017, 9:08 IST

ಹೂವಿನಹಡಗಲಿ: ತಾಲ್ಲೂಕಿನ ಸುಕ್ಷೇತ್ರ  ಕೊಟ್ನಿಕಲ್ ಶಂಕರಲಿಂಗೇಶ್ವರ ಸ್ವಾಮಿಯ 9ನೇ ವರ್ಷದ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ  ‘ಜಾನುವಾರು ಜಾತ್ರೆ’ ವಿಧ್ಯುಕ್ತವಾಗಿ ಆರಂಭವಾಯಿತು.

ಪ್ರತಿ ಸೋಮವಾರ ಪಟ್ಟಣದಲ್ಲಿ ನಡೆ ಯುತ್ತಿದ್ದ ದನದ ಸಂತೆ ಈ ಬಾರಿ ಜಾನು ವಾರು ಜಾತ್ರೆಗೆ ಸ್ಥಳಾಂತರಗೊಂಡಿದ್ದ ರಿಂದ ತುಂಗಭದ್ರಾ ತಟದಲ್ಲಿರುವ ಕೊಟ್ನಿ ಕಲ್‌ ಕ್ಯಾಂಪಿನ ಹುಣಸೆ ತೋಪು ದನ ಗಳಿಂದ ತುಂಬಿ ಹೋಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಗವಿ ಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ತಂತ್ರಜ್ಞಾನ ಬೆಳವಣಿಗೆ ಹೊಂದಿರುವ ಕಾಲದಲ್ಲೂ ಜಾನುವಾರು ಗಳು ರೈತರ ಒಡನಾಡಿಗಳಾಗಿವೆ. ಸನಾ ತನ ಕೃಷಿ ಸಂಸ್ಕೃತಿ, ಆಚಾರ– ವಿಚಾರ ಎಲ್ಲರೂ ಪಾಲಿಸಬೇಕು ಎಂದರು.

ಹಂಪಸಾಗರದ ಶಿವಲಿಂಗೇಶ್ವರ ರುದ್ರಮುನಿ ಸ್ವಾಮೀಜಿ, ಮೈನಹಳ್ಳಿಯ ಸಿದ್ದೇಶ್ವರ ಸ್ವಾಮೀಜಿ, ಕಡಲಬಾಳು ಮಠದ ಸೋಮಶೇಖರ ದೇವರು ಇದ್ದರು. ‘15 ದಿನಗಳ ಕಾಲ ಇಲ್ಲಿ ಜಾನು ವಾರು ಜಾತ್ರೆ ನಡೆಯುತ್ತಿದ್ದು, ದೇವಸ್ಥಾನ ಸಮಿತಿಯಿಂದ ಮೇವು, ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂದು ಸಮಿತಿಯ ಅಧ್ಯಕ್ಷ ಆರ್.ಪ್ರಕಾಶಗೌಡ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಎಸ್.ಎಂ. ಲಲಿತಾಬಾಯಿ ಸೋಮಿನಾಯ್ಕ, ದೇವ ಸ್ಥಾನ ಸಮಿತಿಯ ಜೆ.ಧನಂಜಯರೆಡ್ಡಿ, ಎಸ್.ವೀರಭದ್ರಗೌಡ, ಓಲಿ ಈಶಪ್ಪ, ಗುಣಂ ಸತ್ಯನಾರಾಯಣ, ಗಡ್ಡಿ ಸಿದ್ದ ಲಿಂಗಪ್ಪ, ಎಚ್.ಹನುಮಂತಪ್ಪ, ಷಣ್ಮು ಖಪ್ಪ, ಸೀತಾರಾಮರಾಜು ಇದ್ದರು.

ಕಳೆಗುಂದಿದ ಜಾತ್ರೆ: ಬರಗಾಲ ಮತ್ತು ಗರಿಷ್ಠ ಮುಖಬೆಲೆ ನೋಟುಗಳ ರದ್ದತಿ ಪರಿಣಾಮ ಜಾನುವಾರು ಜಾತ್ರೆ ಕಳೆ ಗುಂದಿದೆ. ‘ರೈತರ ಕೈಯಲ್ಲಿ ದುಡ್ಡಿಲ್ಲ, ಹೊಟ್ಟು ಮೇವಿನ ಸಂಗ್ರಹವೂ ಇಲ್ಲ. ಅಷ್ಟಿಷ್ಟು ಭತ್ತ, ಮೆಕ್ಕೆಜೋಳ ಫಸಲು ಬಂದಿದ್ದರೂ ವ್ಯಾಪಾರಿಗಳು ಖರೀದಿಗೆ ಬರುತ್ತಿಲ್ಲ. ಹೀಗಾಗಿ ಜಾನುವಾರು ಜಾತ್ರೆ ಯಲ್ಲಿ ನಿರೀಕ್ಷಿತ ವಹಿವಾಟು ನಡೆಯು ವುದು ಅನುಮಾನ’ ಎಂದು ಕೊಯಿ ಲಾರಗಟ್ಟಿಯ ರೈತ ನಿಂಗಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.