ADVERTISEMENT

ಹೊಸಪೇಟೆ: ಎರಡು ಗಂಟೆ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2017, 5:55 IST
Last Updated 28 ಆಗಸ್ಟ್ 2017, 5:55 IST

ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಭಾನು ವಾರ ಮಧ್ಯಾಹ್ನ ಬಿರುಸಿನ ಮಳೆಯಾಗಿದೆ. ಮಧ್ಯಾಹ್ನ ಒಂದುವರೆ ಸುಮಾರಿಗೆ ಆರಂಭವಾದ ಮಳೆ ಸಂಜೆ ನಾಲ್ಕುವರೆ ತನಕ ಎಡಬಿಡದೇ ಸುರಿಯಿತು. ಬಿರುಸಾಗಿ ಮಳೆ ಬಿದ್ದ ಕಾರಣ ನಗರದ ಸಿದ್ದಲಿಂಗಪ್ಪ ಚೌಕಿ, ಚಿತ್ತವಾಡ್ಗಿ, ಅಮರಾವತಿ, ಬಸವೇಶ್ವರ ಬಡಾವಣೆ, ರಾಣಿಪೇಟೆ ಬಡಾವಣೆಯ ರಸ್ತೆಗಳಲ್ಲಿ ನೀರು ಜಮಾಯಿಸಿತ್ತು. ಇದರಿಂದ ಜನ ಹಾಗೂ ವಾಹನ ಓಡಾಟಕ್ಕೆ ಅಡಚಣೆ ಉಂಟಾಯಿತು.

ತಾಲ್ಲೂಕಿನ ಹೊಸೂರು, ಬಸವನ ದುರ್ಗ, ನಾಗೇನಹಳ್ಳಿ, ಕಡ್ಡಿರಾಂಪುರ, ಹಂಪಿ, ಕಮಲಾಪುರ, ಮಲಪನಗುಡಿ, ಬೈಲುವದ್ದಿಗೇರಿ, ಕಾಕುಬಾಳು, ಧರ್ಮಸಾಗರ, ಡಣಾಪುರ ಸೇರಿದಂತೆ ಹಲವು ಕಡೆ ಉತ್ತಮ ಮಳೆಯಾಗಿದೆ.

ವಾರದಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಸ್ಥಗಿತ ಗೊಂಡಿದ್ದ ಬಿತ್ತನೆ ಕೆಲಸ ಚುರುಕು ಗೊಂಡಿದೆ. ಮೇಲಿಂದ ಮೇಲೆ ಮಳೆ ಯಾಗುತ್ತಿರುವ ಕಾರಣ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ADVERTISEMENT

ಹಂಪಿಯಲ್ಲಿ ಪ್ರವಾಸಿಗರು ಮಳೆ ಯಲ್ಲೇ ನೆನೆದುಕೊಂಡು ಸ್ಮಾರಕಗಳನ್ನು ವೀಕ್ಷಿಸಿದರು. ಸಾಲು ಸಾಲು ರಜೆ ಬಂದ ಕಾರಣ ಹಂಪಿಯಲ್ಲಿ ಭಾನುವಾರ ಪ್ರವಾ ಸಿಗರ ದಂಡು ಕಂಡು ಬಂತು. ತುಂಗ ಭದ್ರಾ ಜಲಾಶಯದಲ್ಲಿ ಇದೇ ಸ್ಥಿತಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.