ADVERTISEMENT

‘ಅಮೆರಿಕ ಸಂವಿಧಾನ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2018, 11:32 IST
Last Updated 17 ಆಗಸ್ಟ್ 2018, 11:32 IST
ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೀರ್ತಿ ಕಿರಣ್‌ ಪೂಜಾರ್‌ (ಎಡದಿಂದ ನಾಲ್ಕನೆಯವರು) ‘ಅಮೆರಿಕ ಸಂವಿಧಾನ’ ಕನ್ನಡ ಹಾಗೂ ಇಂಗ್ಲಿಷ್‌ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು
ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೀರ್ತಿ ಕಿರಣ್‌ ಪೂಜಾರ್‌ (ಎಡದಿಂದ ನಾಲ್ಕನೆಯವರು) ‘ಅಮೆರಿಕ ಸಂವಿಧಾನ’ ಕನ್ನಡ ಹಾಗೂ ಇಂಗ್ಲಿಷ್‌ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು   

ಹೊಸಪೇಟೆ: ಪ್ರಾಧ್ಯಾಪಕ ಕಿಚಡಿ ಚನ್ನಪ್ಪ ಅವರು ಕನ್ನಡದಲ್ಲಿ ಬರೆದಿರುವ ‘ಅಮೆರಿಕ ಸಂವಿಧಾನ’ ಮತ್ತು ‘ದಿ ಕಾನ್‌ಸ್ಟಿಟ್ಯೂಶನ್‌ ಆಫ್‌ ಅಮೆರಿಕ’ ಆಂಗ್ಲ ಕೃತಿಗಳ ಬಿಡುಗಡೆ ಸಮಾರಂಭ ಬುಧವಾರ ಸಂಜೆ ನಗರದಲ್ಲಿ ನಡೆಯಿತು.

ಕೇಂದ್ರ ಲೋಕಸೇವಾ ಆಯೋಗ ನಡೆಸುವ ಐ.ಎ.ಎಸ್‌. ಪರೀಕ್ಷೆಯಲ್ಲಿ ಪಾಸಾಗಿರುವ ನಗರದ ಕೀರ್ತಿ ಕಿರಣ್‌ ಪೂಜಾರ್‌ ಅವರು ಪುಸ್ತಕ ಬಿಡುಗಡೆಗೊಳಿಸಿ, ‘ದೇಶದ ಸಂವಿಧಾನದ ಬಗ್ಗೆ ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳಬೇಕು. ಅದರಿಂದ ನಮ್ಮ ಹಕ್ಕುಗಳು ಹಾಗೂ ಕರ್ತವ್ಯಗಳು ಏನು ಎಂಬುದನ್ನು ಅರಿಯಬಹುದು’ ಎಂದರು.

‘ಅಮೆರಿಕವು ಸಂವಿಧಾನವು ಜಗತ್ತಿನಲ್ಲಿ ಮೊದಲ ಲಿಖಿತ ಸಂವಿಧಅನವಾಗಿದೆ. ಅದು ಇಡೀ ವಿಶ್ವಕ್ಕೆ ಒಂದು ಮಾದರಿ ಸಂವಿಧಾನ ಅನಿಸಿಕೊಂಡಿದೆ. ನಮ್ಮ ದೇಶದ ಸಂವಿಧಾನಕ್ಕೆ 67 ವರ್ಷಗಳು ತುಂಬಿದರೆ, ಅಮೆರಿಕ ಸಂವಿಧಾನ ರಚನೆಯಾಗಿ 200 ವರ್ಷಗಳಾಗಿವೆ’ ಎಂದು ತಿಳಿಸಿದರು.

ADVERTISEMENT

ಪ್ರಾಧ್ಯಾಪಕ ಎಂ. ಹನುಮಂತಪ್ಪ ಮಾತನಾಡಿ, ‘ಅಮೆರಿಕದ ಸಂವಿಧಾನದ ನಿಯಮಗಳಿಗೆ ಅನುಗುಣವಾಗಿ ಆ ದೇಶದ ಜನತೆ ನಡೆದುಕೊಳ್ಳುತ್ತಿದ್ದಾರೆ. ಅಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಗೂ ನಮ್ಮ ದೇಶದಲ್ಲಿರುವ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ’ ಎಂದರು.

‘ಅಮೆರಿಕ ಸಂವಿಧಾನವನ್ನು ಬಹಳ ಸರಳವಾದ ಭಾಷೆಯಲ್ಲಿ ಬರೆಯಲಾಗಿದೆ. ಎಂತಹವರು ಓದಿ ಅರ್ಥ ಮಾಡಿಕೊಳ್ಳಬಹುದು. ನಿಜಕ್ಕೂ ಅದೊಂದು ಆಕರ ಗ್ರಂಥ’ ಎಂದು ತಿಳಿಸಿದರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಮರಡಿ ಜಂಬಯ್ಯ ನಾಯಕ, ನಿವೃತ್ತ ಪ್ರಾಧ್ಯಾಪಕ ಕಡ್ಲಬಾಲ ಪನ್ನಂಗಧರ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸಿದ್ರಾಮ, ಭಾರತೀಯ ಜೀವ ವಿಮಾ ನಿಗಮದ ವ್ಯವಸ್ಥಾಪಕ ನಾಣಿಕೇರಿ ಯಂಕಪ್ಪ, ಗಾಯತ್ರಿ ಪ್ರಕಾಶನದ ಕೆ. ಬಸಪ್ಪ, ಪ್ರಾಧ್ಯಾಪಕ ಕಿಚಡಿ ಚನ್ನಪ್, ಕನ್ನಡ ಸಾಹಿತ್ಯ ಪರಿಷತ್ತಿನ ಕಮಲಾಪುರ ಹೋಬಳಿ ಘಟಕದ ಅಧ್ಯಕ್ಷ ದಯಾನಂದ ಕಿನ್ನಾಳ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.