ADVERTISEMENT

ಆನೇಕಲ್‌ ಅಭಿವೃದ್ಧಿಗೆ ಕ್ರಮ–ಶಾಸಕ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 10:02 IST
Last Updated 23 ಸೆಪ್ಟೆಂಬರ್ 2017, 10:02 IST

ಆನೇಕಲ್‌: ಪಟ್ಟಣದಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಅನುದಾನಗಳನ್ನು ತರಲು ಪ್ರಯತ್ನ ನಡೆಸಲಾಗಿದೆ. ಕ್ರಿಯಾ ಯೋಜನೆ ತಯಾರಿಸಿ ಪಟ್ಟಣದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಬಿ.ಶಿವಣ್ಣ ತಿಳಿಸಿದರು. ಅವರು ಪಟ್ಟಣದ ಚನ್ನಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ಹೈಮಾಸ್ಟ್‌ ದೀಪವನ್ನು ಉದ್ಘಾಟಿಸಿ ಮಾತನಾಡಿದರು.

ತಿಲಕ್‌ ವೃತ್ತ ಸೇರಿದಂತೆ ಮುಖ್ಯ ರಸ್ತೆಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬೆಳಕಿನ ವ್ಯವಸ್ಥೆಗಾಗಿ ಚನ್ನಕೇಶವಸ್ವಾಮಿ ದೇವಾಲಯ, ತಿಮ್ಮರಾಯಸ್ವಾಮಿ ದೇವಾಲಯದ ಸಮೀಪ ಹಾಗೂ ನಾರಾಯಣಪುರದಲ್ಲಿ ಹೈಮಾಸ್‌ ದೀಪ ಗಳನ್ನು ಅಳವಡಿಸಲಾಗಿದೆ ಎಂದರು. ಹಲವು ವರ್ಷಗಳಿಂದ ನನೆಹಾರ ಹಣ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಪುರಸಭೆಯ ಸಹಕಾರದಿಂದ ಪಟ್ಟಣದಲ್ಲಿ ಮುಖ್ಯರಸ್ತೆಗಳ ಡಾಂಬರೀಕರಣ, ಕುಡಿಯುವ ನೀರಿಗಾಗಿ ಕಾವೇರಿ ನೀರು ಯೋಜನೆಯನ್ನು ಕೆಲ ದಿನಗಳಲ್ಲಿ ಪಟ್ಟಣದ ಜನತೆಗೆ ಸಮರ್ಪಿಸುವುದಾಗಿ ತಿಳಿಸಿದರು. ಪುರಸಭಾ ಅಧ್ಯಕ್ಷ ಲಕ್ಷ್ಮೀಕಾಂತರಾಜು, ಉಪಾಧ್ಯಕ್ಷೆ ಹೇಮ ಲತಾ ಸುರೇಶ್, ಮುಖಂಡ ಎನ್‌.ಎಸ್. ಅಶ್ವಥ್‌ನಾರಾಯಣ, ಪಿ.ಶಂಕರ್‌ ಕುಮಾರ್‌, ಸದಸ್ಯರಾದ ಮಲ್ಲಿ ಕಾರ್ಜುನ್, ಪದ್ಮನಾಭ್‌, ವಿ.ಮೋಹನ್, ರೇಣುಕಾ ಮಲ್ಲಿಕಾರ್ಜುನ್, ಚಂದ್ರಿಕಾ ಹನುಮಂತರಾವ್, ರೇಣುಕಾ ಶೇಷಾದ್ರಪ್ಪ, ನರೇಂದ್ರಕುಮಾರ್, ಕುಮಾರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.