ADVERTISEMENT

‘ಕುಶಲತೆ ಬೆಂಬಲ ಯುವ ಕೈಗಳಿಗೆ ಬಲ’

​ಪ್ರಜಾವಾಣಿ ವಾರ್ತೆ
Published 17 ಮೇ 2017, 6:32 IST
Last Updated 17 ಮೇ 2017, 6:32 IST

ದೇವನಹಳ್ಳಿ: ಸರ್ಕಾರ ನಿರುದ್ಯೋಗಿ ಯುವ ಪೀಳಿಗೆಗೆ ಕುಶಲತೆಯ ತರಬೇತಿ ಮೂಲಕ ಯುವ ಕೈಗಳಿಗೆ ಬಲ ನೀಡಲು ಮುಂದಾಗಿದ್ದು ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತ ಕುಮಾರಿ ಸಲಹೆ ನೀಡಿದರು.

ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳ ವಾರ ನಡೆದ ಕೌಶಲ ಕರ್ನಾಟಕ ಉಚಿತ ತರಬೇತಿ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಾಂತರ ಜಿಲ್ಲೆಗೆ ಕನಿಷ್ಠ 50 ಸಾವಿರ ಅರ್ಹರಿಗೆ ಉದ್ಯೋಗ ಕಲ್ಪಿಸುವ ಗುರಿ ನೀಡಲಾಗಿದೆ ಎಂದರು.

ಜತೆಗೆ ಅರ್ಥಿಕತೆಯ ಮೂರು ವಲಯಗಳಲ್ಲಿ ಉತ್ಪಾದಕತೆ ಮತ್ತು ಬೆಳೆವಣಿಗೆಯಲ್ಲಿ ಹೆಚ್ಚಳ ಸಾಧಿಸುವು ದಾಗಿದೆ. ಮೇ15 ರಿಂದ 22 ರವರೆಗೆ ಗ್ರಾಮ ಪಂಚಾಯಿತಿಗಳಲ್ಲಿ ನೋಂದಾ ಯಿಸಬೇಕು. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಇಡೀ ವರ್ಷ ನೋಂದಣಿ ಮಾಡಿಸಿ ತರಬೇತಿಯಲ್ಲಿ ಪಾಲ್ಗೊಳ್ಳಬೇಕು ಎಂದರು .

ADVERTISEMENT

ತಾ.ಪಂ.ಸಹಾಯಕ ನಿರ್ದೆಶಕ ಪ್ರದೀಪ್ ಮಾತನಾಡಿ, ಕೌಶಲ ತರಬೇತಿ ಪಡೆದ ಸ್ಥಳಿಯರಿಗೆ ಸಾಲ ಮತ್ತು ಉದ್ಯೋಗದಲ್ಲಿ ಮೊದಲ ಅದ್ಯತೆ ನೀಡ ಲಾಗುತ್ತಿದೆ. ಶಾಲೆ ಬಿಟ್ಟವರು, ಪದವಿ ವ್ಯಾಸಂಗ ಸ್ಥಗಿತಗೊಳಿಸಿರುವವರು, ತಾಂತ್ರಿಕ ಕೌಶಲ ಹೊಂದಿರದವರು ತರಬೇತಿಗೆ ಅರ್ಹರಾಗಿರುತ್ತಾರೆ. ಪರಿಶಿಷ್ಟ ಜಾತಿಗೆ ಶೇ20 ರಷ್ಟು, ಪರಿಶಿಷ್ಠ ವರ್ಗಕ್ಕೆ ಶೇ7ರಷ್ಟು, ಅಲ್ಪಸಂಖ್ಯಾತರಿಗೆ ಶೇ15 ರಷ್ಟು, ಮಹಿಳೆಯರಿಗೆ ಶೇ33 ರಷ್ಟು, ಅಂಗವಿಕಲರಿಗೆ ಶೇ3ರಷ್ಟು ಅದ್ಯತೆ ನೀಡಲಾಗುವುದು ಎಂದು  ತಿಳಿಸಿದರು.

ತಾ.ಪಂ. ಅಧ್ಯಕ್ಷೆ ಭಾರತಿ ಲಕ್ಷಣ್‌ಗೌಡ ಮಾತನಾಡಿ, ನಿರುದ್ಯೋಗ  ಎಂಬುದು ಸಾಮಾಜಿಕ ಪಿಡುಗು, ಕಟ್ಟ ಕಡೆ ವ್ಯಕ್ತಿಯೂ ಉದ್ಯೋಗದಲ್ಲಿ ತೊಡಗಿಸಿ ಕೊಳ್ಳ ಬೇಕೆಂಬ  ಉದ್ದೇಶದಿಂದ ಸರ್ಕಾರ  ಉತ್ತಮ ಯೋಜನೆ ಕಾರ್ಯ ರೂಪಕ್ಕೆ ತಂದಿದೆ ತರಬೇತಿಗೆ ಮಾಸಿಕ ಪ್ರೋತ್ಸಾಹ ಧನ ನೀಡುತ್ತಿದೆ. ಯುವ ಸಮುದಾಯ ಸದುಪಯೋಗ ಪಡೆದು ಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ತಹಶೀಲ್ದಾರ್ ಜಿ.ಎ. ನಾರಾಯಣ ಸ್ವಾಮಿ ಮಾತನಾಡಿ, ಅವಶ್ಯ ಇರುವ ಹಾಲಿ ಕಾರ್ಮಿಕ ಬಲ ಹಾಗೂ ಹೊಸದಾಗಿ ಮಾರುಕಟ್ಟೆಗೆ ಸೇರ್ಪಡೆಯಾಗಿರುವವರಿಗೆ ವೇತನ, ಉದ್ಯೋ ಗದ ಅವಕಾಶಗಳೊಂದಿಗೆ ಸುಸ್ಥಿತ ಜೀವನೋ ಪಾಯಕ್ಕೆ ಕೌಶಲ ತರಬೇತಿ ನೀಡುವುದು ಇದರ ಪ್ರಮುಖ ಗುರಿ. ರಾಜ್ಯದ 6.61 ಕೋಟಿ ಜನಸಂಖ್ಯೆ ಪೈಕಿ 3.44 ಕೋಟಿ ಯುವ ಸಮುದಾಯವಿದೆ. ತಾಲ್ಲೂಕಿನಲ್ಲಿ 2 ಲಕ್ಷ ಜನಸಂಖ್ಯೆಗೆ  40 ಸಾವಿರಕ್ಕಿಂತ ಹೆಚ್ಚು ಯುವ ಸಮುದಾಯವಿದ್ದು 18 ರಿಂದ 35 ವರ್ಷದವರು ಲಿಂಗ ತಾರತಮ್ಯ ಇಲ್ಲದೆ ನೋಂದಣಿಗೆ ಮುಂದಾಗಬೇಕು ಎಂದರು . ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ ಮಾತನಾಡಿದರು.

ಜಿ.ಪಂ ಸದಸ್ಯರಾದ ಕೆ.ಸಿ ಮಂಜುನಾಥ್, ರಾಧಮ್ಮ ಮುನಿರಾಜು, ತಾ.ಪಂ ಉಪಾ ಧ್ಯಕ್ಷೆ ನಂದಿನಿ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ ಮೂರ್ತಿ ಮತ್ತು ತಾ.ಪಂ ಸದಸ್ಯರು ಇದ್ದರು.

**

‘ಒಂದು ವರ್ಷಕ್ಕೆ ಸೀಮಿತ ಅಲ್ಲ’
ಇದು ಒಂದು ವರ್ಷಕ್ಕೆ ಸಿಮಿತವಲ್ಲ. ರಾಜ್ಯದಲ್ಲಿ ಕೌಶಲಾಭಿವೃದ್ಧಿಯಲ್ಲಿ ಶ್ರೇಷ್ಠತೆ ಮತ್ತು ಅಂತರರಾಷ್ಠೀಯ ಗುಣ ಮಟ್ಟ ಸಾಧಿಸಲು ಇದೊಂದು ಮಹತ್ತರ ಯೋಜನೆ. ಸರ್ಕಾರದ ವಿವಿಧ ಇಲಾಖೆಗಳ ಸಂಪನ್ಮೂಲ ಸಾಂಸ್ಥಿಕ ಸಾಮರ್ಥ್ಯ ಕೈಗಾರಿಕೆ ಮತ್ತು ನಾಗರಿಕ ಸಮಾಜದ ನಡುವೆ ಉತ್ತಮ ಸಮನ್ವಯ ಪುನರಾ ವರ್ತನೆ ಮತ್ತು ಸಂಪನ್ಮೂಲ ವಿರಳವಾದ ಹಂಚಿಕೆ ತಡೆಗಟ್ಟಿ ನಿರುದ್ಯೋಗ ಸಮುದಾಯಕ್ಕೆ ಅವಕಾಶ ನೀಡಿ ಸ್ವಾವಲಂಬಿ ಸಮಾಜ ನಿರ್ಮಾಣ ಮಾಡುವುದು ಸರ್ಕಾರದ ಮುಖ್ಯ ಉದ್ದೇಶ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತ ಕುಮಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.