ADVERTISEMENT

ಜಾಲಿಗೆ ಗ್ರಾ.ಪಂ: ಬಿಜೆಪಿ ಬೆಂಬಲಿಗರ ಮೇಲುಗೈ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 10:12 IST
Last Updated 4 ಜುಲೈ 2015, 10:12 IST

ದೇವನಹಳ್ಳಿ: ತಾಲ್ಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅನಿರೀಕ್ಷಿತ ಬೆಳವಣಿಗೆಯಲ್ಲಿ ಕೇವಲ ಮೂರು ಸ್ಥಾನ ಪಡೆದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸೌಮ್ಯ ಅಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ.

ಇದರಿಂದ ನಿಚ್ಚಳ ಬಹುಮತ ಹೊಂದಿದ್ದ ಕಾಂಗ್ರೆಸ್ ಬೆಂಬಲಗರಿಗೆ ಮುಖಭಂಗವಾಗಿದೆ.  ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತರು 13, ಜೆಡಿಎಸ್ ಬೆಂಬಲಿತರು 7, ಹಾಗೂ ಬಿಜೆಪಿ ಬೆಂಬಲಿತರು ಕೇವಲ ಮೂವರು ಸದಸ್ಯರಿದ್ದರು. ಆದರೂ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಪ್ರವಾಸ ಭಾಗ್ಯವು ಲಭಿಸಿತ್ತು.

ಅದೇ ರೀತಿ ಗೆಲುವು ನಮ್ಮದೆ ಎನ್ನುವ ಭಾವನೆಯು ಗಟ್ಟಿಯಾಗಿತ್ತು. ಅದಕ್ಕೆ ಪೂರಕವೆಂಬಂತೆ ಸಕಲ ಸಿದ್ಧತೆಯಿಂದಿಗೆ  ಅಧ್ಯಕ್ಷೆ,  ಉಪಾಧ್ಯಕ್ಷೆ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ವಿಜಯಮ್ಮ ಮತ್ತು ಉಪಾಧ್ಯಕ್ಷೆ ಆಕಾಂಕ್ಷಿಯಾಗಿ ರತ್ನಮ್ಮ ನಾಮಪತ್ರ ಸಲ್ಲಿಸಿದರು. ಪ್ರತಿ ಸ್ವರ್ಧಿಯಾಗಿ ಅಧ್ಯಕ್ಷೆ ಸ್ಥಾನಕ್ಕೆ ಸೌಮ್ಯಬಾಬು ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕಾಗಿ ಭಾಗ್ಯಮ್ಮ ನಾಮಪತ್ರ ಸಲ್ಲಿಸಿದರು. ಅನಿರೀಕ್ಷಿತ ಬೆಳವಣಿಗೆಯಲ್ಲಿ ಸೌಮ್ಯ ಬಾಬು 12 ಮತಗಳಿಸಿ ಆಯ್ಕೆಗೊಂಡರೆ ಉಪಾಧ್ಯಕ್ಷೆ ಕಾಂಗ್ರೆಸ್‌ನ ರತ್ನಮ್ಮ 13 ಮತ ಪಡೆದು ವಿಜಯಿಯಾಗಿದ್ದಾರೆ.

ಕಾಂಗ್ರೆಸ್ ಬೆಂಬಲಿತ ವಿಜಯಮ್ಮ ಮತ್ತು ಭಾಗ್ಯಮ್ಮ ಕುರುಬ ಸಮುದಾಯದವರು. ಆಯ್ಕೆಗೊಂಡ ಇಬ್ಬರು ಒಕ್ಕಲಿಗ ಸಮುದಾಯದವರು. ಈ ಬೆಳವಣಿಗೆಯಿಂದ ಕಸಿವಿಸಿಗೊಂಡ ಕಾಂಗ್ರೆಸ್ ಮುಖಂಡರು ಬೆಂಬಲಿತ 13 ಸದಸ್ಯರನ್ನು ಮುಖಂಡರೊಬ್ಬರ ಮನೆಯಲ್ಲಿ ಹಾಲಿನ ಚಂಬು ಕೈಗಿಟ್ಟು ಪ್ರಮಾಣ ಮಾಡಿಸಿ ಯಾರು ಮತ ಹಾಕಿಲ್ಲ ಒಪ್ಪಿಕೊಳ್ಳಿ ಎರಡು ಹೆಚ್ಚುವರಿ  ಮತ ಹೇಗೆ ಇತರೆ ಪಕ್ಷದ ಬೆಂಬಲಿಗರಿಗೆ ಬಿತ್ತು ಎಂದರೂ ಎಲ್ಲಾ ಸದಸ್ಯರು ಪ್ರಮಾಣ ಮಾಡಿ ಮತ ಹಾಕಿದ್ದೇವೆ ಎಂದು ಹೇಳಿದ್ದಾರೆ. ಅದರೆ ಇತ್ತ ತಂದಿದ್ದ ಹಾರ ತುರಾಯಿ, ಪಟಾಕಿ ಮೂಲೆ ಗುಂಪಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.