ADVERTISEMENT

‘ನವಭಾರತ ನಿರ್ಮಾಣಕ್ಕೆ ಕೈ ಜೋಡಿಸಿ’

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 11:29 IST
Last Updated 19 ಜುಲೈ 2017, 11:29 IST

ದೇವನಹಳ್ಳಿ: ‘2014ರ ಲೋಕಸಭೆ  ಚುನಾವಣೆಯಿಂದ ಬಿಜೆಪಿ ಪರ್ವ ಆರಂಭಗೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ನವಭಾರತ ನಿರ್ಮಾ ಣದ ಕನಸು ನನಸು ಮಾಡಬೇಕಾಗಿದೆ’ ಎಂದು ಹೆಬ್ಬಾಳ ಶಾಸಕ ಹಾಗೂ ತಾಲ್ಲೂಕು ವಿಸ್ತಾರಕ ವೈ.ಎ.ನಾರಾಯಣ ಸ್ವಾಮಿ ತಿಳಿಸಿದರು.

ತಾಲ್ಲೂಕಿನ ಕೊಯಿರಾ ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಪಕ್ಷದ ವತಿ ಯಿಂದ ನಡೆದ  ಪರಿಶಿಷ್ಟ ಜಾತಿ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕಾಂಗ್ರೆಸ್ 50ವರ್ಷ, ಜನತಾ ಪರಿವಾರ 10ವರ್ಷ ದೇಶದಲ್ಲಿ ಆಡಳಿತ  ನಡೆಸಿದೆ. ಈ ಎಲ್ಲರೂ ದೇಶದಲ್ಲಿರುವ ಪರಿಶಿಷ್ಟ ಜಾತಿಗೆ ಏನು ಮಾಡಿದ್ದಾರೆ ಎಂಬುದು ಎಲ್ಲರೂ ತಿಳಿಯಬೇಕು’ ಎಂದರು.

ಮಾಜಿ ಗೃಹಸಚಿವ ಆರ್.ಅಶೋಕ್ ಮಾತನಾಡಿ, ‘ನಾನು ಆರೋಗ್ಯ ಸಚಿವ ನಾದಾಗ ಮಡಿಲು ಕಿಟ್, ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತರಲಾಯಿತು. ಅದನ್ನು ಮುಂದುವರಿಸಲು ಸರ್ಕಾರದಲ್ಲಿ ಹಣವಿಲ್ಲ. ಪಡಿತರ ವಿತರಣೆ ಕಾಳಧನಿಕರ ಪಾಲಾಗುತ್ತಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಒಬ್ಬ ಮೇಸ್ತ್ರಿ ಬಳಿ ಇರುವ ರೈಟರ್ ರಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಮುಖಂಡ ಡಿ.ಆರ್. ನಾರಾಯಣ ಸ್ವಾಮಿ ಮಾತನಾಡಿದರು, ಮಾಜಿ ಶಾಸಕ ಜಿ.ಚಂದ್ರಣ್ಣ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಗುರುಸ್ವಾಮಿ, ಪ್ರಭಾರಿ ವಿಸ್ತಾರಕ ನಾರಾಯಣಗೌಡ, ಸಹ ವಿಸ್ತಾರಕ ರಘುನಾಥ್, ಎಸ್ಸಿ ಮೊರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ನಾಗೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ರಾಜಣ್ಣ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್, ಕಾರ್ಯದರ್ಶಿ ಕೆ.ಎಸ್.ರಮೇಶ್ ಬಾಬು, ಹಾಪ್ ಕಾಮ್ ನಿರ್ದೆಶಕ ಪಿ.ನಂಜಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗರಾಜ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್, ಕೇಶವ, ಉಪಾಧ್ಯಕ್ಷ ಕೆ.ಸಿ.ಮುನಿರಾಜು, ಮಹಿಳಾ ಮೊರ್ಚ ಜಿಲ್ಲಾ ಕಾರ್ಯದರ್ಶಿ ಗಾಯಿತ್ರಿ, ತಾಲ್ಲೂಕು ಮಹಿಳಾ ಮೊರ್ಚ ಅಧ್ಯಕ್ಷೆ ನಾಗವೇಣಿ,  ಎಸ್ಟಿ ಮೊರ್ಚ ಜಿಲ್ಲಾ ಘಟಕ ಅಧ್ಯಕ್ಷ ತಮ್ಮಯ್ಯ, ಮುಖಂಡ ರಮೇಶ್ ಕುಮಾರ್, ಯುವ ಮೊರ್ಚ ಅಧ್ಯಕ್ಷ ಆನಂದ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.