ADVERTISEMENT

ಪಶುಗಳು ರೈತರ ಬಹುಮುಖ್ಯ ಸಂಪತ್ತು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 11:20 IST
Last Updated 25 ಅಕ್ಟೋಬರ್ 2016, 11:20 IST

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಎರಡು ವರ್ಷಗಳಿಂದಲು ಕಾಲುಬಾಯಿ ಜ್ವರ ನಿಯಂತ್ರಣದಲ್ಲಿದೆ. ಇದಕ್ಕೆ ಸಾಮೂಹಿಕವಾಗಿ ಎಲ್ಲ ರೈತರು  ಲಸಿಕೆ ಹಾಕಿಸಿದ್ದೇ ಕಾರಣವಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ತಾಲ್ಲೂಕಿನ ದೊಡ್ಡತುಮಕೂರು ಗ್ರಾಮದಲ್ಲಿ ಕಾಲುಬಾಯಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಶುಗಳೆ ಇವತ್ತಿಗೂ ರೈತರ ಬಹುಮುಖ್ಯ ಆರ್ಥಿಕ ಸಂಪತ್ತಾಗಿವೆ. ರೈತರಿಗೆ ಹೈನುಗಾರಿಕೆಯಿಂದಲೇ ನಿಶ್ಚಿತ ಹಣ ಬರುತ್ತಿದೆ ಎಂದರು. ಕಾಲುಬಾಯಿ ಲಸಿಕಾ ಅಭಿಯಾನ ಕುರಿತು ಡಾ.ವಿಶ್ವನಾಥ್‌, ಮಾಹಿತಿ ನೀಡಿದರು.

ಕಾಲುಬಾಯಿ ಜ್ವರ ತಡೆಗೆ ಮುಂಜಾಗ್ರತೆಯಾಗಿ ಲಸಿಕೆ ಹಾಕಿಸುವುದೇ ಏಕೈಕ ಮಾರ್ಗವಾಗಿದೆ ಎಂದಯ ಅವರು ತಿಳಿಸಿದರು. ಬಮೂಲ್‌ ನಿರ್ದೇಶಕ ಎಚ್‌.ಅಪ್ಪಯ್ಯಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಚುಂಚೇಗೌಡ, ದೊಡ್ಡತುಮಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾವೆಂಕಟೇಶ್‌, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮೀನಾಕ್ಷಿಕೆಂಪಣ್ಣ, ದೊಡ್ಡತುಮಕೂರು ಎಂಪಿಸಿಎಸ್‌ ಅಧ್ಯಕ್ಷ ಪ್ರಭಾಕರ್‌, ಕಾರ್ಯದರ್ಶಿ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಶಂಕರಪ್ಪ, ಸಹಾಯಕ ಪಶುಸಂಗೋಪನ ಇಲಾಖೆ ತಾಲ್ಲೂಕು ನಿರ್ದೇಶಕ ಡಾ.ರಾಜೇಂದ್ರ, ನಗರದ ಬಮೂಲ್‌ ಶೀಥಲ ಕೇಂದ್ರದ ಉಪವ್ಯವಸ್ಥಾಪಕ ಡಾ.ಶ್ರೀನಿವಾಸ್‌, ಮುಖಂಡರಾದ ಬಿ.ಎಚ್‌.ಕೆಂಪಣ್ಣ, ರಾಮಕೃಷ್ಣ,ಮಂಜುನಾಥ್‌,ಚಿಕ್ಕಣ್ಣಪ್ಪ, ಮುನಿರಾಜಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.