ADVERTISEMENT

ಪಾಳು ಬಿಡದೆ ಅರಣ್ಯ ಕೃಷಿ ಮಾಡಿ

​ಪ್ರಜಾವಾಣಿ ವಾರ್ತೆ
Published 24 ಮೇ 2017, 10:27 IST
Last Updated 24 ಮೇ 2017, 10:27 IST

ಮಾಗಡಿ: ತಾಲ್ಲೂಕಿನ ರೈತರು ಹೊಲಗದ್ದೆಗಳಲ್ಲಿ ಸಸಿಗಳನ್ನು ನೆಡಬೇಕು. ಭೂಮಿಯನ್ನು ಪಾಳು ಬಿಡದೆ ಎಲ್ಲೆಡೆ ಅರಣ್ಯ ಕೃಷಿ ಮಾಡಬೇಕು ಎಂದು ಚಂದೂರಾಯನ ಹಳ್ಳಿ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ಸಂಯೋಜಕ ಡಾ.ನಾಗರಾಜು ಕೆಂಕೆರೆ ತಿಳಿಸಿದರು.

ಕೆವಿಕೆಯಲ್ಲಿ ಬೆಳೆಸಿರುವ ವಿವಿಧ ಬಗೆಯ ದೇಶೀಯ ಸಸಿಗಳನ್ನು ರೈತರಿಗೆ ಪರಿಚಯಿಸಿ ಅವರು ಮಾತನಾಡಿದರು. ಕೇಂದ್ರದಲ್ಲಿ ನೂರಾರು  ಗಂಧದ ಸಸಿ, ತೇಗ, ಹಲಸು, ಜಂಬುನೇರಳೆ, ಪಪ್ಪಾಯ, ನೆಲ್ಲಿ, ಮಾವು, ಹತ್ತಿ, ಮತ್ತಿ, ಬೇವು, ಬೇಲ, ನುಗ್ಗೆ, ಬೆಟ್ಟದ ನೆಲ್ಲಿ, ಲಾವಂಚ ಬೇರು ಇನ್ನಿತರ ಸಸಿ ಬೆಳೆಸಲಾಗಿದೆ ಎಂದರು.

ಸಾಂಪ್ರದಾಯಿಕ ಕೃಷಿ ಪದ್ಧತಿಯ ಜೊತೆಗೆ ಅರಣ್ಯ ಕೃಷಿ ರೂಢಿ ಮಾಡಿದರೆ ಲಾಭ ಸಿಗಲಿದೆ ಎಂದು ಅವರು  ತಿಳಿಸಿದರು. ‘ಹಚ್ಚಹಸಿರಿನಿಂದ ಕೂಡಿರುವ ಕೆವಿಕೆ ಫಾರಂನಲ್ಲಿ ನೂರಾರು ಪಕ್ಷಿಗಳ ಕಲರವ ಕೇಳುವುದು ಸಂತಸದಾಯಕವಾಗಿದೆ.

ADVERTISEMENT

ಒಂದಿಂಚು ಭೂಮಿಯನ್ನೂ ಪಾಳು ಬಿಡದೆ ನೀರಿನ ಹೊಂಡ, ಸಸಿಗಳನ್ನು ಬೆಳೆಸಿರುವುದನ್ನು ನೋಡಿದಾಗ ನಾವು ನಮ್ಮ ಭೂಮಿಯನ್ನು ವ್ಯರ್ಥ ಮಾಡಿಕೊಂಡಿದ್ದೇವೆ ಎಂಬ ವ್ಯಥೆಯಾಗುತ್ತಿದೆ’ ಎಂದು ರೈತ ತಿಮ್ಮೇಗೌಡ, ಹನುಮಯ್ಯ ತಿಳಿಸಿದರು, ಕಲ್ಯ, ಚಂದೂರಾಯನ ಹಳ್ಳಿ, ಹನುಮಾಪುರ ಸುತ್ತಲಿನ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.