ADVERTISEMENT

ಮಂಗಳೂರು ಚಲೋ: ಬಿಜೆಪಿ ಕಾರ್ಯಕರ್ತರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 8:54 IST
Last Updated 6 ಸೆಪ್ಟೆಂಬರ್ 2017, 8:54 IST

ದೇವನಹಳ್ಳಿ: ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಮಂಗಳವಾರ ಕರೆ ನೀಡಿದ ಮಂಗಳೂರು ಚಲೋಗೆ ಮುಂದಾಗಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಬೆಳಿಗ್ಗೆ 9 ರಿಂದ ಒಬ್ಬೊಬ್ಬರಾಗಿ ಆಗಮಿಸಿದ ಬಿಜೆಪಿ ವಿವಿಧ ಘಟಕದ ಪದಾಧಿಕಾರಿಗಳು ಮತ್ತು ಮುಖಂಡರು 10.30ಕ್ಕೆ ಪ್ರವಾಸಿ ಮಂದಿರದಿಂದ ಬೈಕ್ ಮೂಲಕ ಕಾಂಗ್ರೆಸ್ಗೆ ಧಿಕ್ಕಾರ ಬಿಜೆಪಿ ಜೈಕಾರ ಎಂದು ಘೋಷಣೆ ಕೂಗಿ ಮುನ್ನುಗ್ಗುತ್ತಿದ್ದಂತೆ ತಕ್ಷಣ ಪೊಲೀಸರು ತಡೆದು ಎಚ್ಚರಿಕೆ ನೀಡಿದರು.

ನಂತರ ವಾಗ್ವಾದಕ್ಕಿಳಿದ ಕಾರ್ಯಕರ್ತರ ಮತ್ತು ಪೊಲೀಸರ ನಡುವೆ ಸುಮಾರು 20 ನಿಮಿಷ ಮಾತಿನ ಚಕಮಕಿ ನಡೆಯಿತು. ನಂತರ ಅವರನ್ನು ಬಂಧಿಸಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ರಾಜಣ್ಣ, ಉಪಾಧ್ಯಕ್ಷ ಎಚ್. ಎಂ.ರವಿಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುನಿಲ್, ಬಿಜೆಪಿ ರಾಜ್ಯ ಪರಿಷದ್ ಸದಸ್ಯ ದೇ.ಸು ನಾಗರಾಜ್, ಮುಖಂಡ ಡಿ.ಆರ್.ನಾರಾಯಣಸ್ವಾಮಿ, ಕೆ.ನಾಗೇಶ್ ಸೇರಿದಂತೆ 22 ಮುಖಂಡರನ್ನು ಬಂಧಿಸಿ ಬೆಂಗಳೂರು ನಗರದ ಕಡೆ ಕರೆದೊಯ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.