ADVERTISEMENT

ವಿಜಯಪುರ: ರಾಗಿ ಬೆಳೆಗೆ ಬಂದಿತು ಜೀವ ಕಳೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 9:48 IST
Last Updated 8 ಸೆಪ್ಟೆಂಬರ್ 2017, 9:48 IST
ವಿಜಯಪುರ ಸಮೀಪದ ಅಂಕತಟ್ಟಿ ಬಳಿ ಹುಲುಸಾಗಿ ಬೆಳೆದು ನಿಂತಿರುವ ರಾಗಿ ಬೆಳೆ
ವಿಜಯಪುರ ಸಮೀಪದ ಅಂಕತಟ್ಟಿ ಬಳಿ ಹುಲುಸಾಗಿ ಬೆಳೆದು ನಿಂತಿರುವ ರಾಗಿ ಬೆಳೆ   

ವಿಜಯಪುರ: ತಾಲ್ಲೂಕಿನಲ್ಲಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸಂಪೂರ್ಣವಾಗಿ ಕೈಕೊಟ್ಟು ರೈತರಲ್ಲಿ ನಡುಕ ಹುಟ್ಟಿಸಿದ್ದ ಮುಂಗಾರು ಮಳೆ ಈಗ ಮತ್ತೆ ಸುಧಾರಿಸಿದೆ.
ಆಗಸ್ಟ್ ತಿಂಗಳಿನ ಕೊನೆ ಹಾಗೂ ಸೆಪ್ಟೆಂಬರ್ ತಿಂಗಳಿನ ಮೊದಲ ವಾರದಲ್ಲಿ ಸತತವಾಗಿ ಮಳೆ ಸುರಿಯುವ ಮೂಲಕ ಸಂತಸದ ವಾತಾವರಣ ಮೂಡಿಸಿದೆ.

ಸಂಕಷ್ಟದಲ್ಲಿರುವ ರೈತರನ್ನು ಮಳೆರಾಯ ರಕ್ಷಿಸಿದ್ದಾನೆ. ಹೋದ ವಾರ ಹದವಾಗಿ ಮಳೆಯಾಗಿದ್ದು, ರೈತರು ಬಿತ್ತನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿ ದ್ದರಿಂದ ಬಿತ್ತನೆ ಪ್ರಮಾಣ ಹೆಚ್ಚಳವಾಗಿದೆ.

ಜುಲೈ ಮೊದಲ ವಾರದವರೆಗೂ ಶೇ 10ರಷ್ಟಿದ್ದ ಬಿತ್ತನೆ ಪ್ರಮಾಣ ಆಗಸ್ಟ್ ಅಂತ್ಯದ ವೇಳೆಗೆ ಶೇ70 ರಷ್ಟು ದಾಟಿತ್ತು. ಸೆಪ್ಟೆಂಬರ್ 10ರ ವರೆಗೂ ರಾಗಿ, ನಂತರ ಹುರಳಿ ಬಿತ್ತನೆ ಮಾಡಬಹುದಾಗಿದ್ದು, ಜಿಪಿ 28ತಳಿ ಉತ್ತಮವೆಂದು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಮುಂಗಾರಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಮುಸುಕಿನ ಜೋಳ, ಸಿರಿಧಾನ್ಯ, ತೊಗರಿ, ಕಡಲೆ, ಹೆಸರು, ಹುರುಳಿ ಅಲಸಂದೆ, ಅವರೆ ಜತೆಗೆ ಎಣ್ಣೆಕಾಳು ಧಾನ್ಯಗಳಾದ ನೆಲಗಡಲೆ, ಸೂರ್ಯಕಾಂತಿ, ಎಳ್ಳು, ಹರಳು, ಹುಚ್ಚೆಳ್ಳು, ಸಾಸಿವೆ ಎಲ್ಲಾ ರೀತಿಯ ಧಾನ್ಯಗಳ ಉತ್ಪಾದನೆ ಕುಸಿದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.