ADVERTISEMENT

ವೃತ್ತಿಯಲ್ಲಿ ಪ್ರಶಸ್ತಿಗಿಂತ ಸೇವೆ ಮುಖ್ಯ

ರಾಷ್ಟ್ರಪತಿ ಪದಕ ವಿಜೇತ ಡಿವೈಎಸ್ ಪಿ ಉಮೇಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 5:09 IST
Last Updated 22 ಸೆಪ್ಟೆಂಬರ್ 2017, 5:09 IST

ಆನೇಕಲ್‌: ‘ವೃತ್ತಿಯಲ್ಲಿ ಪ್ರಾಮಾಣಿಕತೆ, ನಿಷ್ಠೆ ಇದ್ದರೆ ಪ್ರಶಸ್ತಿಗಳು ಹುಡು ಕಿಕೊಂಡು ಬರುತ್ತವೆ. ಪ್ರಶಸ್ತಿಗಳ ಹಿಂದೆ ಹೋಗಬಾರದು ವೃತ್ತಿ ಗೌರವ ಕಾಪಾಡು ವುದರ ಜೊತೆಗೆ ವೃತ್ತಿಯಲ್ಲಿ ತೃಪ್ತಿ ಪಡೆಯ ಬೇಕು ಎಂದು ಆನೇಕಲ್ ಉಪವಿಭಾಗದ ಡಿವೈಎಸ್ಪಿ ಎಸ್.ಕೆ.ಉಮೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಅತ್ತಿಬೆಲೆ ಸಮೀಪದ ಗೆಸ್ಟ್‌ಲೈನ್ ಹೋಟಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ಅನೇಕ ನುರಿತ ಪರಿಣತರಿದ್ದಾರೆ. ಅವರನ್ನು ಗುರು ತಿಸುವ ಕೆಲಸವಾಗಬೇಕು. ಇದರಿಂದ ಅವರ ಸೇವೆ ಪಡೆಯಲು ಸಾಧ್ಯ. ಎಂದಿಗೂ ಪ್ರಶಸ್ತಿಗಳ ಬೆನ್ನತ್ತಿ ಕೆಲಸ ಮಾಡಬಾರದು. ಪೊಲೀಸಿಂಗ್ ಒಂದು ರೀತಿ ಕ್ರೀಡೆ ಇದ್ದಂತೆ. ಅದರಲ್ಲಿ ತಲ್ಲೀನ ರಾಗಿಬಿಟ್ಟರೆ ಬೇರೆ ಲೋಕದತ್ತ ಗಮನ ವಿರಬಾರದು. ಆಗ ಮಾತ್ರ ನಿಜ ವಾದ ಅಪರಾಧಿ ಪತ್ತೆ ಹಚ್ಚಲು ಸಾಧ್ಯ ವಾಗುತ್ತದೆ ಎಂದರು.

ADVERTISEMENT

ಅಪರಾಧಿಗಳ ಮನೋಭಾವ ಹಾಗೂ ಚಟುವಟಿಕೆ ಬದಲಾಗುತ್ತಿದ್ದಂತೆ ತನಿಖೆ ಶೈಲಿಯೂ ಬದಲಾಗಬೇಕು. ಕೇವಲ ಆರೋಪಿ ಥಳಿಸುವುದರಿಂದ ಬಾಯಿ ಬಿಡಿಸಲು ಸಾಧ್ಯವಿಲ್ಲ. ಚಾಕಚಕ್ಯತೆಯಿಂದ ಅವರಿಂದ ನಿಜ ಹೊರ ತೆಗೆಯಬೇಕು. ಪೊಲೀಸರು ಅಂತಹ ಕೌಶಲ ಬೆಳೆಸಿ ಕೊಳ್ಳಬೇಕು. ಯಾವುದೇ ಕಾರಣಕ್ಕೂ ಎದೆಗುಂದದೆ ಕಾರ್ಯ ಮಾಡಿದರೆ ಕೀರ್ತಿ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಅತ್ತಿಬೆಲೆ ಸಿಪಿಐ ಎಲ್.ವೈ.ರಾಜೇಶ್ ಮಾತನಾಡಿ, ‘ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಭಾಜನರಾಗಿರುವ ಡಿವೈಎಸ್‌ಪಿ ನಮಗೆ ಆದರ್ಶ. ಇಂತಹ ಉತ್ತಮ ಅಧಿಕಾರಿಗಳ ಜತೆ ಕೆಲಸ ಮಾಡುವುದು ನಮ್ಮ ಸುಯೋಗ. ಅವರ ಮಾರ್ಗದರ್ಶನದಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗಿದೆ’ ಎಂದರು.

ಹೆಬ್ಬಗೋಡಿ ಪೊಲೀಸ್ ಸರ್ಕಲ್‌ ಇನ್‌ಸ್ಪೆಕ್ಟರ್ ಕೆ.ವಿಶ್ವನಾಥ್, ಸೂರ್ಯ ನಗರ ಪೊಲೀಸ್ ಇನ್‌ಸ್ಪೆಕ್ಟರ್‌ ಕೃಷ್ಣ, ಸಬ್‌ಇನ್‌್ಸಸ್ಪೆಕ್ಟರ್‌ಗಳಾದ ಗಜೇಂದ್ರ, ನವೀನ್‌ಕುಮಾರ್, ಹೇಮಂತ್‌ ಕುಮಾರ್, ನವೀನ್, ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.