ADVERTISEMENT

ಸಂಘಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 10:00 IST
Last Updated 18 ಸೆಪ್ಟೆಂಬರ್ 2017, 10:00 IST

ವಿಜಯಪುರ: ‘ಸಂಘಟನೆಗಳು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು. ಸಮಾಜದ ಬೇಕು, ಬೇಡಗಳ ಧ್ವನಿ ಎತ್ತುವ ಕೆಲಸ ಮಾಡಬೇಕು’ ಎಂದು ಜಯಕರ್ನಾಟಕ ಸಂಘಟನೆಯ ನೂತನ ವಿಜಯಪುರ ನಗರ ಅಧ್ಯಕ್ಷ ಪ್ರಮೋದ್ (ಪಮ್ಮಿ) ಹೇಳಿದರು.

ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಗೌಡ ಅವರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದ್ದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರು ಮಾತನಾಡಿದರು. ‘ಸಮಾಜಕ್ಕೆ ನೆರವಾಗುವ ಹಾಗೂ ಜನತೆಗೆ ಹತ್ತಿರವಾಗುವ ಸಂಘಟನೆಗಳ ಕೊರತೆ ಇಂದಿನ ದಿನಮಾನದಲ್ಲಿ ಕಂಡು ಬರುತ್ತಿದೆ’ ಎಂದರು.

ತಾಲ್ಲೂಕು ಕಾರ್ಯದರ್ಶಿಯನ್ನಾಗಿ ವಿಜಯಪುರ ಕೆ.ಮಂಜುನಾಥ್, ಮಂಜುನಾಥಾಚಾರಿ, ತಾಲ್ಲೂಕು ಉಪಾಧ್ಯಕ್ಷರಾಗಿ ಕಿರಣ್ ಕುಮಾರ್ ನೇಮಕವಾಗಿದ್ದಾರೆ.
ವಿಜಯಪುರದ ಯುವ ಸಂಘಟಕರು ನೂತನ ಅಧ್ಯಕ್ಷ ಪ್ರಮೋದ್ (ಪಮ್ಮಿ) ಅವರನ್ನು ಅಭಿನಂದಿಸಿದರು.

ADVERTISEMENT

ವಿಜಯಪುರ ಹೋಬಳಿ ಅಧ್ಯಕ್ಷ ಮಂಜು, ಕುಮಾರ್, ನಾಗೇಶ್, ಮುನಿಕೃಷ್ಣ, ಬೈರೇಗೌಡ, ಚ. ಮಂಜುನಾಥ್, ಮೋಹನ್ ಶ್ರೀವತ್ಸ, ಜೀತೇಂದ್ರ, ರಾಜು, ಮಂಡಿಬೆಲೆ ವಿಜಯ್ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.