ADVERTISEMENT

ಆರೋಗ್ಯ ಸೇವೆಗೆ ಸಹಾಯವಾಣಿ ಆರಂಭ

ಆರೋಗ್ಯ ಕಾರ್ಯಕ್ರಮ ರಾಜ್ಯ ಸರ್ಕಾರದಿಂದ ವಿವಿಧ ಕಾರ್ಯಕ್ರಮ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:28 IST
Last Updated 9 ಮಾರ್ಚ್ 2017, 11:28 IST
ಚಿಕ್ಕೋಡಿ: ‘ಪ್ರತಿಯೊಬ್ಬ ಪ್ರಜೆಗೂ ಉತ್ತಮವಾದ ಆರೋಗ್ಯ ಸೇವೆ ಒದಗಿಸಲು ಸರ್ಕಾರ ನಾನಾ ಯೋಜನೆ ಜಾರಿಗೊಳಿಸುತ್ತಿದೆ.

ಸಾರ್ವಜನಿಕ ಆಸ್ಪತ್ರೆಗಳಲ್ಲಿ ದೊರೆಯುವ ಸೇವೆಗಳು ಮತ್ತು ಯಾವುದೇ ಸಮಸ್ಯೆಗಳಿಲ್ಲದೇ ಅವುಗಳನ್ನು ಪಡೆದುಕೊಳ್ಳುವ ಕುರಿತು ರೋಗಿ ಮತ್ತು ಸಂಬಂಧಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಇದೀಗ ನಾಗರಿಕ ಸಹಾಯವಾಣಿ ಕೇಂದ್ರವನ್ನು ಆರಂಭಿಸಿದ್ದು, ಸಾರ್ವಜನಿಕರು ಅದರ ಸದ್ಬಳಕೆ ಮಾಡಿಕೊಂಡು ಆರೋಗ್ಯಯುತ ಬದುಕು ನಡೆಸಬೇಕು’ ಎಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಎಸ್‌.ಎಸ್‌.ಗಡೇದ ಹೇಳಿದರು.
 
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿಯ ಯುನೈ ಟೆಡ್‌ ಸಮಾಜ ಕಲ್ಯಾಣ ಸಂಸ್ಥೆ ಹಾಗೂ ಸಾರ್ವಜನಿಕ ಆಸ್ಪತ್ರೆಗಳ ನಿರ್ವಹಣೆಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರಂಭಿಸ ಲಾದ ನಾಗರಿಕ ಸಹಾಯವಾಣಿ ಕೇಂದ್ರದ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು.
 
‘ನಾಗರಿಕ ಸಹಾಯವಾಣಿ ಕೇಂದ್ರವು ದಿನದ 24 ಗಂಟೆಯೂ ಕಾರ್ಯ ನಿರ್ವ ಹಿಸುತ್ತಿದ್ದು, ಆಸ್ಪತ್ರೆಯಲ್ಲಿ ಉಚಿತ ಮತ್ತು ಶುಲ್ಕ ಸಹಿತ ದೊರೆಯುವ ಆರೋಗ್ಯ ಸೇವೆಗಳ ಕುರಿತು ಮಾಹಿತಿ ನೀಡಲಿದೆ. ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿ ಹಾಗೂ ಅವರ ಸಂಬಂಧಿಕರ ಮಧ್ಯೆದ ಘರ್ಷಣೆ ಗಳನ್ನು ತಡೆಯಲಿದೆ.
 
ಹೊರ ರೋಗಿಗಳು ಮತ್ತು ಒಳರೋಗಿಗಳು ಆರೋಗ್ಯ ಸೇವೆಗಾಗಿ ಕಾಯುವ ಸಮಯವನ್ನು ಕಡಿಮೆ ಮಾಡಲಿದೆ. ರೋಗಿಗಳ/ ಸಂಬಂಧಿಕರ ಹಾಗೂ ಆಸ್ಪತ್ರೆ ಸಿಬ್ಬಂದಿ ಕುಂದುಕೊರತೆಗಳನ್ನು ನಿವಾರಿಸಲು ಕೇಂದ್ರ ಸಹಕಾರಿಯಾಗಲಿದೆ. ಸಾರ್ವ ಜನಿಕರು ತಮ್ಮ ಆರೋಗ್ಯ ಸೇವೆಗಳಿಗಾಗಿ ಕೇಂದ್ರದ ಸಿಬ್ಬಂದಿಯನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದುಕೊಳ್ಳ ಬಹುದಾಗಿದೆ’ ಎಂದರು.
 
ಬೆಳಗಾವಿಯ ಯುನೈಟೆಡ್‌ ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಬಿ.ಓ.ತಿಪ್ಪೇ ಸ್ವಾಮಿ ಅವರು, ‘ಸರ್ಕಾರ ಸಾರ್ವಜನಿ ಕರಿಗೆ ಆರೋಗ್ಯ ಸೇವೆಗಳನ್ನು ಸುರಳಿತ ಗೊಳಿಸಲು ಸಹಾಯವಾಣಿ ಕೇಂದ್ರವನ್ನು ತೆರೆದಿದ್ದು, 24X7 ರೀತಿಯಲ್ಲಿ ಕೇಂದ್ರವು ಕೆಲಸ ಮಾಡಲಿದೆ’ ಎಂದರು.
 
ನಾಗರಿಕ ಸಹಾಯವಾಣಿ ಕೇಂದ್ರದ ವ್ಯವಸ್ಥಾಪಕಿ ಚಂದ್ರಲೇಖಾ ಮಾನು, ಕೇಂದ್ರದ ಫೆಸಿಲೆಟರ್ಸ್‌ ಅನಂತ ದೇವರುಷಿ, ಜಗದೀಶ ಹುಲಕುಂದ, ಬೀರಪ್ಪ ಟಾಕಳೆ, ಚಂಬವ್ವಾ   ಹಿರೇಮಠ, ಪೂಜಾ ಭಾವಿಮನಿ ಉಪಸ್ಥಿತರಿದ್ದರು.
 
ಪಿ.ಕೆ.ಪಿ.ಎಸ್.ಗೆ  ಆಯ್ಕೆ 
ಖಾನಾಪುರ: ತಾಲ್ಲೂಕಿನ ಚಿಕ್ಕಮುನ ವಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಗ್ರಾಮದ ಪ್ರಗತಿ ಪರ ರೈತ ಕಲ್ಲಪ್ಪ ಕರ್ಕಿ, ಉಪಾಧ್ಯಕ್ಷರಾಗಿ ಅಶೋಕ ನಾವಲಗಿ, ನಿರ್ದೇಶಕರಾಗಿ ತಾ.ಪಂ. ಸದಸ್ಯ ಶ್ರೀಕಾಂತ ಇಟಗಿ, ದಾನಪ್ಪ ಚವಲಗಿ, ಬಸವರಾಜ ಮಿಟ ಗಾರ, ಬಸವರಾಜ ಹೊಲೇರ ಆಯ್ಕೆ ಯಾಗಿದ್ದಾರೆ ಎಂದು ಮಾಜಿ ಶಾಸಕ ಪ್ರಹ್ಲಾದ ರೇಮಾಣಿ ತಿಳಿಸಿದರು. 
 
ನಂತರ ಮಾತನಾಡಿದ ಅವರು,  ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ನಿರ್ದೇಶಕ ರಾಜು ಅಂಕಲಗಿ, ಮತ್ತು ಎಂ,ಕೆ ಹುಬ್ಬಳ್ಳಿ ರಾಣಿ ಶುಗರ್ಸ್ ಉಪಾಧ್ಯಕ್ಷ ಮೋಹನ ಸಂಬರಗಿ ಅವರ  ಸಹಕಾರ ಕಾರಣ ಎಂದರು.
 
ರವೀಂದ್ರ ದೇವಲಾಪುರ, ರಾಜು ಗಣಾಚಾರಿ, ಈಶ್ವರ ಪಾರಿಶ್ವಾಡ, ರುದ್ರಪ್ಪ ಚವಲಗಿ, ರುದ್ರಪ್ಪ ಮಿಟಗಾರ, ಮಹಾಂ ತೇಶ ಅಗಸರ, ಸಿದ್ದಪ್ಪ ಬಾಗೇವಾಡಿ ಸೇರಿ ದಂತೆ ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.