ADVERTISEMENT

ಚರಂಡಿ ನೀರಿನಿಂದ ಕಲುಷಿತಗೊಂಡ ನದಿ

ಬೇಸಿಗೆ ಆರಂಭಕ್ಕೆ ಮುನ್ನವೇ ಪಂಚ ನದಿಗಳ ನಾಡಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 13:01 IST
Last Updated 6 ಮಾರ್ಚ್ 2017, 13:01 IST
ಚರಂಡಿ ನೀರಿನಿಂದ ಕಲುಷಿತಗೊಂಡ ನದಿ
ಚರಂಡಿ ನೀರಿನಿಂದ ಕಲುಷಿತಗೊಂಡ ನದಿ   
ಚಿಕ್ಕೋಡಿ: ಬೇಸಿಗೆ ಆರಂಭ ಆಗುತ್ತಿದ್ದಂತೆಯೇ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ದೂಧಗಂಗಾ, ವೇದಗಂಗಾ ನದಿಗಳಲ್ಲಿ ನೀರು ಬತ್ತುತ್ತಿದೆ. ಜನ–ಜಾನುವಾರುಗಳ ಕುಡಿಯುವ ನೀರಿನ ಕೊರತೆಯ ಆತಂಕ ಎದುರಾಗುತ್ತಿದೆ. ಅದಕ್ಕೂ ಮಿಗಿಲಾಗಿ ಇರುವ ಅಲ್ಪಸ್ವಲ್ಪ ನೀರಿನಲ್ಲೂ ನದಿದಂಡೆಯ ಗ್ರಾಮಗಳ ಚರಂಡಿ ನೀರು ನದಿ ನೀರಿಗೆ ಸೇರು ತ್ತಿದ್ದು, ನದಿ ನೀರು ಕಲುಷಿತಗೊಳ್ಳುತ್ತಿದೆ.
 
ತಾಲ್ಲೂಕಿನಲ್ಲಿ ಒಟ್ಟು 103 ಗ್ರಾಮಗಳಿದ್ದು, ಹಿರಿಹೊಳೆ ಕೃಷ್ಣೆ ಸೇರಿದಂತೆ ಐದು ನದಿಗಳು  ಹರಿದಿದೆ. ಒಟ್ಟು 36 ಗ್ರಾಮಗಳ ಈ ನದಿಗಳ ದಂಡೆಯಲ್ಲಿವೆ. ತಾಲ್ಲೂಕಿನ 50ಕ್ಕೂ ಹೆಚ್ಚು ಗ್ರಾಮಗಳು ಈ ನದಿಗಳ ನೀರನ್ನೇ ಅವಲಂಬಿಸಿವೆ. ಆದರೆ, ನದಿದಂಡೆಯ ಹಲವು ಗ್ರಾಮಗಳ ಚರಂಡಿ ನೀರು ನೇರವಾಗಿ ನದಿ ನೀರನ್ನೇ ಸೇರುತ್ತಿದ್ದು, ಇದರಿಂದ ನದಿ ನೀರು ಕಲುಷಿತ ಗೊಳ್ಳುತ್ತಿದೆ. ಈ ಕುರಿತು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಗಮನ ಹರಿಸದೇ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 
 
ಜಿಲ್ಲೆಯಲ್ಲಿಯೇ ಭೌಗೋಳಿಕವಾಗಿ ಮತ್ತು ಜನಸಂಖ್ಯೆ ದೃಷ್ಟಿಯಿಂದ ದೊಡ್ಡ ದಾಗಿರುವ ಚಿಕ್ಕೋಡಿ ತಾಲ್ಲೂಕಿನಲ್ಲಿ ಚಿಕೋತ್ರ, ವೇದಗಂಗಾ, ಪಂಚಗಂಗಾ, ದೂಧಗಂಗಾ, ಮತ್ತು ಕೃಷ್ಣಾ ನದಿಗಳು ಹರಿಯುತ್ತಿವೆ. ದೂಧಗಂಗಾ ನದಿಯ ದಂಡೆಯ ಮೇಲೆ ಕೊಗನೊಳಿ, ಮಾಂಗುರ, ಮಲಿಕವಾಡ, ಶಿರದವಾಡ, ಜನವಾಡ, ಸದಲಗಾ, ಯಕ್ಸಂಬಾ ಬೇಡಿಕಿಹಾಳ, ಶಮನೆವಾಡಿ ಮತ್ತು ಬೋರಗಾಂವ ಗ್ರಾಮಗಳಿವೆ. ಕೃಷ್ಣಾ ನದಿಯ ದಂಡೆಯ ಮೇಲೆ ಕಲ್ಲೋಳ, ಯಡೂರ, ಯಡೂರವಾಡಿ, ಚಂದೂರ, ಮಾಂಜರಿ, ಅಂಕಲಿ ಮತ್ತು ಇಂಗಳಿ ಗ್ರಾಮಗಳು ಬರುತ್ತವೆ.
 
ಪಂಚ ನದಿಗಳ ಮೇಲೆ ತಾಲ್ಲೂಕಿನ ಸುಮಾರು 50 ಗ್ರಾಮಗಳು ನದಿ ನೀರಿನ ಮೆಲೆ ಅವಲಂಬಿಸಿವೆ. ನದಿಗಳಲ್ಲಿನ ನೀರು ಬತ್ತಿ ಹೋದ ಸಂದರ್ಭದಲ್ಲಿ ರೈತರಿಗೆ ಮತ್ತು ಜನ-ಜಾನುವಾರುಗಳಿಗೆ ತುಂಬಾ ತೊಂದರೆ ಅನುಭವಿಸುವ ಪ್ರಸಂಗ ಬಂದೊದಗುತ್ತದೆ. ಮಳೆಗಾಲ ದಲ್ಲಿ ಪ್ರವಾಹ ಬಂದೇರಗಿದಾಗ ನೀರು ಹರಿದು ಹೊಗುತ್ತವೆ ಇದರಿಂದ ತ್ಯಾಜ್ಯ ನೀರಿನ ಪರಿನಾಮ ಅಷ್ಟೋಂದು ಆಗುವುದಿಲ್ಲಾ, ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ನೀರು ಹರೀದು ಹೋಗು ವುದು ಕಡಿಮೆಯಾದಾಗ ತ್ಯಾಜ್ಯ ನೀರು ಕೂಡಿ ನದಿಯ ನೀರು ಕಲುಷಿತಗೊ ಳ್ಳುತ್ತದೆ. ಇದರಿಂದ ಕಾಯಿಲೆಗಳು ಉಲ್ಬಣಗೊಳ್ಳಲು ಪ್ರಾರಂಭವಾಗುತ್ತವೆ.
 
ನದಿಗಳು ರೈತರ ಜೀವನಾಡಿಯಾಗಿದ್ದು, ಪ್ರತಿಯೊಬ್ಬರೂ ಸ್ವಚ್ಚತೆ ಕಾಪಾಡಲು ಮುಂದಾಗಬೇಕು. ಅದರಂತೆ ಸಂಬಂಧಪಟ್ಟ ಇಲಾಖೆಗಳು ನದಿಗಳ ಸ್ವಚ್ಛತೆ ಕುರಿತು ಯೋಜನೆ ಗಳನ್ನು ರೂಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ ಹುಕ್ಕೇರಿ ಆಗ್ರಹಿಸುತ್ತಾರೆ. 
 
‘ನಗರ ಮತ್ತು ಪಟ್ಟಣ ಪ್ರದೇಶಗಳ ಚರಂಡಿ ನೀರನ್ನು ಹಳ್ಳ ಅಥವಾ ನದಿಗಳಿಗೆ ಬಿಡುವ ವಿಷಯವಾಗಿ ಈಗಾಗಲೇ ಗೋಕಾಕ ಮತ್ತು ನಿಪ್ಪಾಣಿ ಮಹಾನಗರ ಪಾಲಿಕೆ ಹಾಗೂ ಸಂಕೇಶ್ವರ ಪುರಸಭೆ ವಿರುದ್ದ ಪ್ರಕರಣ ದಾಖಲಿಸಲಾಗಿದ್ದು, ಗ್ರಾಮ ಪಂಚಾಯ್ತಿಗಳು ತಮ್ಮ ಕಚೇರಿ ನಿಯಂತ್ರಣಕ್ಕೆ ಬರುವುದಿಲ್ಲ. ಹೀಗಾಗಿ ಪಂಚಾಯತ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಈ ಕುರಿತು ಕ್ರಮ ಜರುಗಿಸಬಹುದಾಗಿದೆ’ ಎಂಬುದು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಚಿಕ್ಕೋಡಿ ಪ್ರಾದೇಶಿಕ ಕಚೇರಿ ಅಧಿಕಾರಿ ಎಂ.ಎ.ಮನಿಯಾರ್ ಹೇಳುತ್ತಾರೆ.
 
* ನದಿಗಳಲ್ಲಿ ತ್ಯಾಜ್ಯ ನೀರು ಹೋಗದಂತೆ ಮತ್ತು ನೈರ್ಮಲ್ಯ ಕಾಪಾಡಲು  ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು
-ಚಂದ್ರಕಾಂತ ಹುಕ್ಕೇರಿ, ಸಾಮಾಜಿಕ ಕಾರ್ಯಕರ್ತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.