ADVERTISEMENT

ನಂದಗಡ ವಿರಕ್ತಮಠದ ಜಾತ್ರೆ 31ರಿಂದ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 5:42 IST
Last Updated 28 ಡಿಸೆಂಬರ್ 2017, 5:42 IST

ಖಾನಾಪುರ: ತಾಲ್ಲೂಕಿನ ನಂದಗಡ ಗ್ರಾಮದ ವಿರಕ್ತಮಠದ ಜಾತ್ರಾ ಮಹೋತ್ಸವ ಇದೇ ತಿಂಗಳ 31ರಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ ಎಂದು ಜಾತ್ರಾ ಮಹೋತ್ಸವದ ಅಧ್ಯಕ್ಷ ಮಹಾಂತೇಶ ವಾಲಿ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಮಠದ ಆವರಣದಲ್ಲಿ ಧ್ವಜಾರೋಹಣ ಮತ್ತು ಕಳಸಾರೋಹಣದ ಮೂಲಕ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭಗೊಳ್ಳಲಿವೆ.

ಅದೇ ದಿನ ಸಂಜೆ ಬೆಳಗಾವಿ ತಾಲ್ಲೂಕು ಅರಳಿಕಟ್ಟಿಯ ವಿರಕ್ತಮಠದ ತೋಂಟದಾರ್ಯ ಶಿವಮೂರ್ತಿ ಸ್ವಾಮೀಜಿ ಅವರಿಂದ ಪ್ರವಚನ, ಕಿತ್ತೂರಿನ ಈಶ್ವರ ಗಡಿಬಿಡಿ ಅವರಿಂದ ಭಕ್ತಿಗೀತೆಗಳ ಗಾಯನ ಜರುಗಲಿವೆ ಎಂದಿದ್ದಾರೆ. ಜ.1ರಂದು ದೇವರಶೀಗಿಹಳ್ಳಿಯ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ, ಅರಳಿಕಟ್ಟಿ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ ಹಾಗೂ ಪಾಲಾಕ್ಷ ಸ್ವಾಮೀಜಿ ಅವರಿಂದ ಚನ್ನವೀರ ಸ್ವಾಮಿಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.