ADVERTISEMENT

ರೈತರ ಅನುಕೂಲಕ್ಕಾಗಿ ಹೊಸ ವಿದ್ಯುತ್‌ ಕೇಂದ್ರ

ರಾಮದುರ್ಗದಲ್ಲಿ ಹೆಸ್ಕಾಂ ವಿಭಾಗೀಯ ಕಾರ್ಯಾಲಯ ಉದ್ಘಾಟಿಸಿದ ಶಾಸಕ ಅಶೋಕ ಪಟ್ಟಣ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 11:37 IST
Last Updated 11 ಮಾರ್ಚ್ 2017, 11:37 IST
ರೈತರ ಅನುಕೂಲಕ್ಕಾಗಿ ಹೊಸ ವಿದ್ಯುತ್‌ ಕೇಂದ್ರ
ರೈತರ ಅನುಕೂಲಕ್ಕಾಗಿ ಹೊಸ ವಿದ್ಯುತ್‌ ಕೇಂದ್ರ   
ರಾಮದುರ್ಗ: ರೈತ ಕುಲವೇ ಇಂದಿನ ದಿನಗಳಲ್ಲಿ ವಿದ್ಯುತ್ ಆಧಾರಿತ ಕ್ರಮಗಳಲ್ಲಿ ನಂಬಿಕೆ ಇಟ್ಟುಕೊಂಡು ವ್ಯವಸಾಯದಲ್ಲಿ ತೊಡಗಿಕೊಂಡಿರುವು ದರಿಂದ ರಾಮದುರ್ಗ ತಾಲ್ಲೂಕಿ ನಲ್ಲಿಯೇ ಹೆಸ್ಕಾಂನ ವಿಭಾಗೀಯ ಕಾರ್ಯಾಲಯವನ್ನು ಸ್ಥಾಪನೆ ಮಾಡಲಾಗಿದೆ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.
 
ರಾಮದುರ್ಗದಲ್ಲಿ ಆರಂಭಗೊಂಡ ಹೆಸ್ಕಾಂನ ವಿದ್ಯುತ್ ಮೀಟರ್ ವಿತರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂಚಿನ ದಿನಗಳಲ್ಲಿ ಮನೆ ನಿರ್ಮಾಣ ಮಾಡಿದ ನಂತರ ವಿದ್ಯುತ್ ಮೀಟರ್ ಅಳವಡಿಸಿಕೊಳ್ಳಲು ದೂರದ ಬೈಲಹೊಂಗಲಕ್ಕೆ ಅಲೆದಾಡುವ ಸ್ಥಿತಿ ರೈತರದ್ದಾಗಿತ್ತು. ಆದರೆ ಈ ಕೇಂದ್ರವನ್ನು ಇಲ್ಲಿಯೇ ಸ್ಥಾಪನೆ ಮಾಡಿದ್ದರಿಂದ ರೈತರು ಮೀಟರ್‌ಗಳನ್ನು ಇಲ್ಲಿಯೇ ಪಡೆದುಕೊಳ್ಳಲು ಅನುಕೂಲವಾಗಿದೆ ಎಂದು ಹೇಳಿದರು. 
 
ಅಂಡರ್ ಗ್ರೌಂಡ್ ಕೇಬಲ ಯೋಜನೆಯನ್ನು ತಾಲ್ಲೂಕು ಮಟ್ಟದಲ್ಲಿ ಅಳವಡಿಸುತ್ತಿರುವುದು ರಾಮದುರ್ಗ ಪಟ್ಟಣ ರಾಜ್ಯದಲ್ಲಿಯೇ ಪ್ರಥಮವಾಗಿದೆ. ಕಂಬಗಳಲ್ಲಿ ತಂತಿಗಳ ಮೂಲಕ ವಿದ್ಯುತ್ ಹರಿಸುವುದರಿಂದ ಅನಾಹುತಗಳನ್ನು ತಪ್ಪಿಸಲು, ಸಂಚಾರ ಸುಗಮಗೊಳಿಸಲು ಈ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗು ತ್ತಿದೆ. ಭೂಮಿಯ ಆಳದಲ್ಲಿ ಕೇಬಲ್‌ ಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದರು. 
 
ರಾಮದುರ್ಗ ಪಟ್ಟಣದಲ್ಲಿರುವ 110 ಕೆ.ವಿ. ವಿದ್ಯುತ್ ಸ್ಥಾವರವನ್ನು 220 ಕೆ.ವಿ ವಿದ್ಯುತ್ ಸ್ಥಾವರವನ್ನಾಗಿ ಪರಿವರ್ತನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಸುರೇಬಾನ, ಕಟಕೋಳ, ಹೊಸಕೋಟೆ, ಮಾಗನೂರಿನಲ್ಲಿ 110 ಕೆ.ವಿ. ವಿದ್ಯುತ್ ಸ್ಥಾವರ ಸ್ಥಾಪನೆಗೆ ಮಂಜೂರಾತಿ ದೊರೆತಿದೆ. ಇದರಿಂದ ತಾಲ್ಲೂಕಿನಲ್ಲಿ ವಿದ್ಯುತ್ ಅಭಾವ ತಲೆದೋರದು ಎಂದು ತಿಳಿಸಿದರು. 
 
ಹೆಸ್ಕಾಂನಲ್ಲಿಯ ಲೈನ್‌ಮನ್‌ಗಳು ಅತಿ ಜಾಗೃತೆಯಿಂದ ಕೆಲಸ ನಿರ್ವಹಿಸ ಬೇಕು. ನಿಷ್ಕಾಳಜಿ ವಹಿಸಿದರೆ ಜೀವಕ್ಕೆ ಆಪತ್ತು ಕಾದಿಟ್ಟಿರುತ್ತದೆ. ಲೈನ್‌ಮನ್‌ ಗಳಲ್ಲಿ ಹೊಂದಾಣಿಕೆ ಅತಿ ಅವಶ್ಯವಾಗಿದೆ ಎಂದು ತಿಳಿಸಿದರು. 
 
ತಾಲ್ಲೂಕಿನ ಗ್ರಾಮೀಣ ಪ್ರದೇಶ ಗಳಲ್ಲಿ ವಿದ್ಯುತ್ ತಂತಿಗಳು ಅಲ್ಲಲ್ಲಿ ಕೈಗೆ ತಗಲುವ ಹಂತದಲ್ಲಿವೆ. ಅಧಿಕಾರಿಗಳು ಅವುಗಳನ್ನು ಸರಿಯಾದ ಕ್ರಮದಲ್ಲಿ ಬಿಗಿಯಾಗಿ ಕಟ್ಟಿ ನಿಲ್ಲಿಸಬೇಕು ಎಂದು ಹೇಳಿದರು. 
 
ಕಾರ್ಯನಿರ್ವಾಹಕ ಎಂಜಿನಿಯರ್ ಆನಂದ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. 
 
ರಾಮದುರ್ಗ ಪುರಸಭೆ ಅಧ್ಯಕ್ಷ ಹುಸೇನ್‌ ಬಾಷಾ ಮೊರಬ, ರಾಜು ಮಾನೆ, ಸುರೇಶ ಪತ್ತೇಪೂರ, ಶಿವಯೋಗಿ ಚಿಕ್ಕೋಡಿ, ಸಂಗೀತಾ ರಾಯಭಾಗ, ಹರವಿ, ಉಮತಾರ, ಸಂಜು ನಲವಡೆ ವೇದಿಕೆ ಮೇಲಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.