ADVERTISEMENT

ವೇತನ ತಾರತಮ್ಯ ನಿವಾರಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 5:51 IST
Last Updated 24 ಏಪ್ರಿಲ್ 2017, 5:51 IST

ಚಿಕ್ಕೋಡಿ: ‘ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ನೌಕರರಿಗೆ ಸರ್ಕಾರದಿಂದ ಸಂಬಳ ನೀಡುವ ಮಾದರಿಯಲ್ಲಿಯೇ ಗ್ರಾಮ ಪಂಚಾಯ್ತಿ ನೌಕರರಿಗೂ ವೇತನ ನೀಡಬೇಕು’ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ವಿ.ಪಿ.ಕುಲಕರ್ಣಿ ಆಗ್ರಹಿಸಿದರು. ಪಟ್ಟಣದ ಪರಟಿನಾಗಲಿಂಗೇಶ್ವರ ಸಭಾಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘ ಹಮ್ಮಿಕೊಂಡಿದ್ದ ನಾಲ್ಕನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯ್ತಿ ನೌಕರರ ಸಮಸ್ಯೆಗಳ ಬಗ್ಗೆ ಕನಿಷ್ಠ ವೇತನ, ಭವಿಷ್ಯನಿಧಿ, ವೇತನಕ್ಕಾಗಿ ಪ್ರತ್ಯೇಕ ಅನುದಾನ ಮಂಜೂರಾತಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುತ್ತಿರುವ ಗ್ರಾಮ ಪಂಚಾಯ್ತಿ ನೌಕರರನ್ನು ಸಂಘಟಿಸಿ ಸುಮಾರು 30 ವರ್ಷಗಳಿಂದ ಹೋರಾಟ ಮಾಡುತ್ತ ಬರಲಾಗುತ್ತಿದ್ದು, ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ  ಗ್ರಾಮ ಪಂಚಾಯ್ತಿ ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

ಚಿಕ್ಕೋಡಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಪಾಟೀಲ ಮಾತನಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೈಬು ಎಂ. ಜೈನೇಖಾನ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ದೊಡ್ಡವ್ವಾ ಪೂಜಾರಿ, ಕಾರ್ಯದರ್ಶಿ ಗೋದಾವರಿ ರಾಜಾಪೂರೆ, ಹುಕ್ಕೇರಿ ತಾಲ್ಲೂಕು ಸಿಐಟಿಯು ಅಧ್ಯಕ್ಷ ಸಿ.ಎಸ್.ಮಗದುಮ್ಮ, ಚಿಕ್ಕೋಡಿ ತಾಲ್ಲೂಕು ಸಿಐಟಿಯು ಕಾರ್ಯದರ್ಶಿ ಶೈಲಜಾ ಮಾಳಿ, ಚಿಕ್ಕೋಡಿ ತಾಲ್ಲೂಕು ಬಿಸಿಯೂಟ ನೌಕರರ ಸಂಘದ ಕಾರ್ಯದಶರ್ಶಿ ಶಕುಂತಲಾ ಉರಣೆ, ಅಂಗವಿಕಲರ ಪುನರ್‌ವಸತಿ ಕಾರ್ಯಕರ್ತರ ಚಿಕ್ಕೋಡಿ ತಾಲ್ಲೂಕು ಅಧ್ಯಕ್ಷ ಎ.ಎಲ್. ಬಾಳಪ್ಪಗೋಳ, ಕಟ್ಟಡ ಕಾರ್ಮಿಕರ ಸಂಘದ ಮುಖಂಡ ದೀಲಿಪ ವಾರಕೆ, ಸಿಐಟಿಯು ಮುಖಂಡ ಅನೀಲ ಡೇಕಣೆ, ಅಥಣಿ ತಾಲ್ಲೂಕು ಸಂಘದ ಅಧ್ಯಕ್ಷ ಬಿ.ಕೆ. ಕಟ್ಟಿ, ದತ್ತಾ ಸಾವಂತ, ಮಾರುತಿ ತಳವಾರ ಉಪಸ್ಥಿತರಿದ್ದರು.

ADVERTISEMENT

ಪದಾಧಿಕಾರಿಗಳ ಆಯ್ಕೆ: ಸಂಘದ ಅಧ್ಯಕ್ಷ ಟಿ.ಎ.ಭಬಗೌಡ ಕರಡು ವರದಿ ಮಂಡಿಸಿದರು.ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ಚಿಕ್ಕೋಡಿ ತಾಲ್ಲೂಕು ಸಮಿತಿಗೆ ಮುಂದಿನ ಮೂರು ವರ್ಷಗಳವರೆಗೆ ಅಧ್ಯಕ್ಷರಾಗಿ ಟಿ.ಎ. ಭಬಗೌಡ ಅವರನ್ನು ಮರು ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ದುಂಡಪ್ಪ ಭಜನಾಯಿಕ, ಬಾಳು ಮೋಕಾಶಿ, ಹಾಗು ಬಾಬಾಸಾಹೇಬ ಬೀರನಾಳೆ, ಕಾರ್ಯದರ್ಶಿಯಾಗಿ- ಸಿಕಂದರ್ ಸಯ್ಯದ್, ಸಹ ಕಾರ್ಯದರ್ಶಿಯಾಗಿ- ಸುಧಾಕರ ಮಗದುಮ್ಮ, ಸಂಜಯ ಪಾಟೀಲ, ರವೀಂದ್ರ ಚೌಗಲಾ, ಖಜಾಂಚಿಯಾಗಿ- ಮಲ್ಲೇಶ ಗಿಂಡೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ 16 ಜನರನ್ನು ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.