ADVERTISEMENT

‘ಶಕ್ತಿ ದೇವತೆ ಆರಾಧನೆಯಿಂದ ನೆಮ್ಮದಿ’

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 8:37 IST
Last Updated 21 ಏಪ್ರಿಲ್ 2017, 8:37 IST

ಬೈಲಹೊಂಗಲ: ‘ಮಠ ಮಂದಿರಗಳು ಸಂಸ್ಕಾರ ಕೇಂದ್ರಗಳಿದ್ದಂತೆ, ಮಾನವನ ಸಂಸ್ಕಾರಕ್ಕೆ ಪರೋಕ್ಷವಾಗಿ ಶ್ರಮಿಸುತ್ತವೆ. ನಮ್ಮ ಭಾರತೀಯ ಪರಂಪರೆಯಲ್ಲಿ ಶಕ್ತಿ ಪೀಠಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಶಕ್ತಿಪೀಠಗಳು ಇದ್ದ ಕ್ಷೇತ್ರ ಜಾಗೃತಗೊಂಡಿವೆ. ಶಕ್ತಿ ಆರಾಧನೆ ಬಹಳ ಹಿಂದಿನ ಕಾಲದಿಂದ ನಡೆದುಕೊಂಡು ಬಂದ ಪರಂಪರೆಯಾಗಿದೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ ಹೇಳಿದರು.

ತಾಲ್ಲೂಕಿನ ಮದನಬಾವಿ ಗ್ರಾಮ ದಲ್ಲಿ ನೂತನವಾಗಿ ನಿರ್ಮಿಸಿದ ದುರ್ಗಾ ದೇವಿ ಮಂದಿರದ ಉದ್ಘಾಟಿಸಿ ಅವರು ಮಾತನಾಡಿದರು.‘ಪ್ರತಿಯೊಬ್ಬರೂ ಕಾಯಾ, ವಾಚಾ, ಮನಸಾ ಶುದ್ಧರಾಗಿ ದೇವರ ಪ್ರಾರ್ಥನೆ ಮಾಡಬೇಕು. ಭಗವಂತನ ಮೇಲೆ ನಂಬಿಕೆ ಇಟ್ಟು ಪ್ರತಿ ಹಂತದಲ್ಲೂ ಕೆಲಸ ಮಾಡಬೇಕು. ಆಧ್ಯಾತ್ಮ, ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಜ್ಞಾನ ಸಂಪಾದಿಸಿಕೊಳ್ಳಬೇಕು. ದಾನ, ಧರ್ಮ ದಿಂದ ಜೀವನ ಪಾವನಗೊಳಿಸಿಕೊಳ್ಳ ಬೇಕು’ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಫ್.ಎಸ್.ದೊಡಗೌಡರ ಮಾತನಾಡಿ, ‘ಮದನಭಾವಿ ಗ್ರಾಮಕ್ಕೆ ಇತಿಹಾಸವಿದೆ. ಗ್ರಾಮಸ್ಥರ ಬಹು ದಿನದ ಬೇಡಿಕೆಯಂತೆ ಗ್ರಾಮದಲ್ಲಿ ದುರ್ಗಾದೇವಿ ನೂತನ ಮಂದಿರ ನಿರ್ಮಿಸಲಾಗಿದೆ. ಭಕ್ತರು ಮಂದಿರಕ್ಕೆ ಬಂದು ದೇವಿ ಕೃಪೆಗೆ ಪಾತ್ರ ರಾಗಬೇಕು. ಈ ನಾಡಿನ ಜನರಿಗೆ, ರೈತರಿಗೆ ದೇವಿಯು ಒಳ್ಳೆಯದು ಮಾಡಲಿ’ ಎಂದು ಪ್ರಾರ್ಥಿಸಿದರು.ಬಿ.ಎಫ್.ಕೊಳದೂರ, ಕುಮಾರ ಗೌಡ ಪಾಟೀಲ, ಮಹಾಂತೇಶ ಗುಜ ನಾಳ, ಬಸನಗೌಡ ಸಿದ್ರಾಮನಿ ಪ್ರಕಾಶ ಹೊಸಮನಿ, ಪ್ರಕಾಶ ಹರಿಜನ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.