ADVERTISEMENT

ಸಂಭ್ರಮದ ಮಹಾಲಕ್ಷ್ಮಿ ಜಾತ್ರೆ

ಹತ್ತರಗಿ ದಾದಬಾನಹಟ್ಟಿ: ಗಮನಸೆಳೆದ ಟಗರಿನ ಕಾಳಗ; ವಿಜೇತರಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 10:39 IST
Last Updated 18 ಫೆಬ್ರುವರಿ 2017, 10:39 IST
ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ಹತ್ತರಗಿ- ದಾದಬಾನಹಟ್ಟಿ ಗ್ರಾಮದಲ್ಲಿ ಮಹಾಲಕ್ಷ್ಮೀ ಜಾತ್ರೆಯ ನಿಮಿತ್ತ ಲಕ್ಷ್ಮೀ ದೇವತೆಗಳಿಗೆ ಮಹಾನೈವೇದ್ಯ, ವಾಲಗ, ಉಡಿ ತುಂಬುವ ಕಾರ್ಯಕ್ರಮ ಹಾಗೂ  ದಂಡವತ ಹೀಗೆ ವಿವಿಧ ಕಾರ್ಯಕ್ರಮಗಳು ಸಡಗರದಿಂದ ನಡೆದವು.
 
ಜಾತ್ರೆಯ ನಿಮಿತ್ತ ಪ್ರತಿ ರಾತ್ರಿ 10ಕ್ಕೆ ಸಾಮಾಜಿಕ ಬಯಲಾಟ, ನಾಟಕ ರಸಮಂಜರಿ, ಟಗರಿನ ಕಾಳಗ, ಪುರುಷರ ಓಡುವ ಶರ್ಯತ್ತು, ಕುದುರೆ ಗಾಡಿಯ ಶರ್ಯತ್ತು, ಸೈಕಲ್‌ ಓಡಿಸುವ ಸ್ಪರ್ಧೆ, ವಾಲಿಬಾಲ್, ಮಲ್ಲಕಂಬ ಕಾರ್ಯಕ್ರಮ ನಡೆದವು.
 
ಹತ್ತರಗಿಯಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರು:  ಕುದುರೆ ಸ್ಪರ್ಧೆ: ವಿಜಯ ಫಾಲ್ಕ್ (ಪ್ರಥಮ), ಕುರಣಿಯ ಗ್ರಾಮದ ವಾಸು ದೂಟೆ (ದ್ವಿತೀಯ), ಸಿದ್ದಪ್ಪ ಬಸ್ಸಾಪೂರಿ (ತೃತೀಯ) ಸೈಕಲ್ ಶರ್ಯತ್ತು: ಮಹಾರಾಷ್ಟ್ರದ ಕೊರಲಿ ಗ್ರಾಮದ ಸಂತೋಷ ವಿಭೂತಿಹಳ್ಳ (ಪ್ರಥಮ), ಗೋಕಾಕದ ಬಸವರಾಜ ದಳವಾಯಿ (ದ್ವಿತೀಯ), ಕಲ್ಲೋಳಿ ಗ್ರಾಮದ ನಾಗಪ್ಪಾ ಮರಡಿ (ತೃತೀಯ).
 
ಜೋಡು ಕುದುರೆ ಗಾಡಿ ಶರ್ಯತ್ತು: ಮಾರುತಿ ಭಂಗಿ (ಪ್ರಥಮ), ಗಜಾನನ ಚವಲಗಿ (ದ್ವಿತೀಯ) ಗಣಪತಿ ಬಾಕಳಿ (ತೃತೀಯ).
ಪುರುಷರ ಓಡುವ ಸ್ಪರ್ಧೆ: ಮಹಾರಾಷ್ಟ್ರ ಬಡಗಾಂವದ ಪರಶುರಾಮ ಭೋವಿ (ಪ್ರಥಮ), ಐನಾಪುರದ ರಾಜು ನಾಯಿಕ (ದ್ವಿತೀಯ), ಶಿವಾನಂದ ದೊಡ್ಡಮನಿ (ತೃತೀಯ)
 
ದಾದಬಾನಹಟ್ಟಿ ಲಕ್ಷ್ಮೀ ದೇವಿ ಜಾತ್ರೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರು:  ಜೋಡು ಕುದುರೆ ಗಾಡಿಯ ಶರ್ಯತ್ತು: ಮಹಾರಾಷ್ಟ್ರದ ಸಾಂಗಲಿ ಪಟ್ಟಣದ ಆನಂದ ಬಡಗರ (ಪ್ರಥಮ), ಕೊಲ್ಹಾಪುರ ಜಿಲ್ಲೆಯ ಸಿಗ್ಗಾಂವ ಗ್ರಾಮದ ಸುಧೀರ ಪಾಟೀಲ (ದ್ವಿತೀಯ), ಮಹಾರಾಷ್ಟ್ರದ ಬಡಗಾಂವ ಗ್ರಾಮದ ರಮೇಶ ಘಸ್ತಿ (ತೃತೀಯ)
 
ಪುರುಷರ ಓಡುವ ಸ್ಪರ್ಧೆ: ಐನಾಪುರದ ರಾಜು ನಾಯಿಕ (ಪ್ರಥಮ), ಯಮಕನಮರಡಿ ಆರ್.ಸಿ ಗ್ರಾಮದ ವಿಜಯ ಪಾಟೀಲ (ದ್ವಿತೀಯ), ಮಹಾರಾಷ್ಟ್ರದ ಕಳವಿಕಟ್ಟಿ ಗ್ರಾಮದ ರಾಹುಲ್ ಪಾಟೀಲ (ತೃತೀಯ).
 
ಟಗರಿನ ಕಾಳಗ: ನಿಂಗಾಪುರದ ದುರ್ಗಾದೇವಿ ಟಗರು (ಪ್ರಥಮ), ತಪಸಿ ಗ್ರಾಮದ ಕಮಲಾದೇವಿ ಟಗರು (ದ್ವಿತೀಯ), ಕುರಣಿ ಗ್ರಾಮದ ಬೈರಾಯಣ್ಣ (ತೃತೀಯ)
 
ಹುಲ್ಲು ಹಚ್ಚದಿರುವ ಜೋಡು ಕುದುರೆ ಸ್ಪರ್ಧೆ: ಬೋರಗಾಂವದ ಇರ್ಫಾನ್‌ ಧೆಕ್‌ (ಪ್ರಥಮ), ಮಹಾರಾಷ್ಟ್ರದ ಲಾಟ್ ಗ್ರಾಮದ ಪೃಥ್ವಿರಾಜ ಬಿಕರೆ (ದ್ವಿತೀಯ), ಅಂಕಲಿಯ ಗಿರೀಶ ಪಾಟೀಲ (ತೃತೀಯ).
 
ಓಡುವ ಸ್ಪರ್ಧೆ: ವಾಸು ದುಟಿ ಕುರ್ಲ (ಪ್ರಥಮ), ಮಾಳಪ್ಪಾ ಶ್ರಾವನ ಬಾಗೇವಾಡಿ (ದ್ವಿತೀಯ), ವಿಜಯ ಪಾಲ್ಸ್ (ತೃತೀಯ). 
ಸೈಕಲ್‌ ಶರ್ಯತ್ತು: ಜಮಖಂಡಿಯ ಶ್ರೀಧರ ಸವನೂರ (ಪ್ರಥಮ), ಗೋಕಾಕದ ಪ್ರವೀಣ ಮಕ್ಕಳಗೇರಿ (ದ್ವಿತೀಯ), ವಿಜಯಪುರದ ಸಂದೇಶ ಉಪ್ಪಾರ (ತೃತೀಯ).
 
ವಿವಿಧ ಸ್ಪರ್ಧೆಗಳ ವಿಜೇತರಿಗೆ ಪಂಚ ಕಮಿಟಿ ಸದಸ್ಯರು ಬಹುಮಾನ ನೀಡಿದರು. ಸಿದ್ದಣ್ಣ ಹಾಲದೇವರಮಠ, ಮಲ್ಲೇಶ ಪೂಜೇರಿ, ಕೆಂಪಣ್ಣ ತವಗ, ರಾಜು ರಾಮಗೊಂಡಿ, ಶೆಟ್ಟೆಪ್ಪ ಜಮಕೋಳಿ, ಮಂಜುನಾಥ ಓಬಣ್ಣವರ, ಭೀಮಶಿ ಚನ್ನಬಸನವರ, ಕೆ.ಬಿ.ಕುಡಚಿ, ಅಜ್ಜಪ್ಪ ಶಿಳ್ಳಿ, ರಘು ಶಿಳ್ಳಿ, ಸಂಜು ಡೊಳ್ಳಿ ಹಾಗೂ ಹತ್ತರಗಿ-ದಾದಬಾನಹಟ್ಟಿ, ಸುತ್ತಲಿನ ಹಲವು ಗ್ರಾಮಗಳ ಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.