ADVERTISEMENT

‘ಹುಕ್ಕೇರಿ–ಸಂಕೇಶ್ವರ ಪಟ್ಟಣಕ್ಕೆ ನಿರಂತರ ನೀರು’

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 9:14 IST
Last Updated 23 ಜುಲೈ 2017, 9:14 IST

ಹುಕ್ಕೇರಿ: ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬ ಕಾರ್ಯಕರ್ತರು ಬಿಜೆಪಿ ಪರ ವಾತಾವ ರಣ ನಿರ್ಮಿಸಬೇಕಾಗಿದೆ. ಈ ಸಂಬಂಧ ದಲ್ಲಿ ಕೇಂದ್ರ ಹಾಗೂ ರಾಜ್ಯ ಮಟ್ಟದ ಮಹತ್ವಾಕಾಂಕ್ಷಿ ಯೋಜನೆ ಮನವರಿಕೆ ಮಾಡಿಕೊಡಬೇಕಾದ ಅವಶ್ಯಕತೆ ಇದೆ ಎಂದು ಚಿಕ್ಕೋಡಿ ವಿಭಾಗದ ವಿಸ್ತಾರಕ ಪ್ರಚಾರ ಪ್ರಮುಖ, ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿದರು.

ಅವರು ಸ್ಥಳೀಯ ಸಾಯಿಭವನದಲ್ಲಿ ಆಯೋಜಿಸಿದ್ದ ವಿಸ್ತಾರಕ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಶೂನ್ಯದಿಂದ 100ರ ಅಂಕಿಗಿಂತ ಹೆಚ್ಚು ಬಿಜೆಪಿ ಶಾಸಕ ರನ್ನು ಆಯ್ಕೆ ಮಾಡುವಲ್ಲಿ ಭಾರತೀಯ ಜನತಾ ಪಕ್ಷ ಅಭಿವೃದ್ಧಿ ಯೋಜನೆ ಪೂರಕವಾಗಿವೆ ಎಂದರು.

ಶಾಸಕ ಉಮೇಶ್ ಕತ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸರ್ಕಾರದ ವಿವಿಧ ಸಾಧನೆಗಳನ್ನು ತಿಳಿಸಿದರಲ್ಲದೇ ರಾಜ್ಯದಲ್ಲಿ ಹಿಂದಿನ ಬಿ.ಜೆ.ಪಿ.ಸರ್ಕಾರ ಹುಕ್ಕೇರಿ ಹಾಗೂ ಸಂಕೇಶ್ವರ ನಗರಗಳಲ್ಲಿ ಮಂಜೂರಾತಿ ನೀಡಿದ ನಿರಂತರ ಕುಡಿಯುವ ನೀರಿನ ಯೋಜನೆಯ (24x7) ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದರು.

ADVERTISEMENT

ಹಿರಣ್ಯಕೇಶಿ ನದಿಯಿಂದ ತಾಲ್ಲೂಕಿನ 18 ಗ್ರಾಮಗಳು ಹಾಗೂ ಚಿಕ್ಕೋಡಿ ತಾಲೂಕಿನ 4 ಕೆರೆಗಳಿಗೆ ನೀರು ತುಂಬುವ ಯೋಜನೆಯ ಕಾಮ ಗಾರಿ ಮುಕ್ತಾಯ ಹಂತದಲ್ಲಿದ್ದು, ಪ್ರಸಕ್ತ ವರ್ಷದಲ್ಲಿ ಕೆರೆಗಳಿಗೆ ನೀರು ತುಂಬಿಸ ಲಾಗುವುದು. ಅಂತರ್ಜಲ ಮಟ್ಟ ಹೆಚ್ಚಳವಾಗಿ ಕೃಷಿ ಸೇರಿದಂತೆ ರೈತಾಪಿ ವರ್ಗಕ್ಕೆ ಅನುಕೂಲವಾಗಲಿದೆ ಎಂದರು.

ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ನಾಯಿಕ ಮಾತನಾಡಿ, ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಿಂದ ಪ್ರತಿ ಬಿಪಿಎಲ್ ಕುಟುಂಬಕ್ಕೂ ಗ್ಯಾಸ್ ವಿತರಿಸುವ ಕಾರ್ಯಕ್ರಮ ಚಾಲನೆಯ ಲ್ಲಿದ್ದು, ಉಜ್ವಲ್ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಕೊಡುಗೆಯಾಗಿದೆ. ಪ್ರತಿ ಗ್ರಾಮವನ್ನು ಹೊಗೆ ರಹಿತ ಗ್ರಾಮವಾಗಿಸಲು ಪಣ ತೊಟ್ಟಿದ್ದಾರೆ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ, ಹಿರಾಶುಗರ್ ಅಧ್ಯಕ್ಷ ಅಪ್ಪಾ ಸಾಹೇಬ ಶಿರಕೋಳಿ, ಪುರಸಭಾಧ್ಯಕ್ಷೆ ಧನಶ್ರೀ ಕೋಳೇಕರ, ಉಪಾಧ್ಯಕ್ಷ ಅಪ್ಪಾ ಸಾಹೇಬ ಹೆದ್ದೂರಶೆಟ್ಟಿ, ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಶಿವನಾಯಿಕ ನಾಯಿಕ, ಗಜಾನನ ಕ್ವಳ್ಳಿ, ಅಮರ ನಲವಡೆ, ಶಿವಶಂಕರ ಢಂಗ, ಗುರುರಾಜ ಕುಲಕರ್ಣಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮರಡಿ, ಟಿಎಪಿಸಿ ಎಂಎಸ್ ಅಧ್ಯಕ್ಷ ಈರಣ್ಣ ಹಾಲದೇವರ ಮಠ, ಎಪಿಎಂಸಿ ಅಧ್ಯಕ್ಷ ಪ್ರಶಾಂತ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.