ADVERTISEMENT

ಅಂಬೇಡ್ಕರ್‌ ಕುರಿತ ಲೇಖನ ಆಹ್ವಾನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಬೆಂಗಳೂರು: ಡಾ.ಬಿ.ಆರ್ ಅಂಬೇಡ್ಕರ್‌ ಅವರ 125ನೇ   ಜಯಂತಿ ಅಂಗವಾಗಿ ಬೆಂಗಳೂರು ವಿಶ್ವವಿದ್ಯಾಲಯದ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಅವರ ಚಿಂತನೆಗಳ ಕುರಿತು ವಿಚಾರ ಸಂಕಿರಣಗಳು, ಕಾರ್ಯಗಾರ, ಶಿಬಿರ, ವಿಶೇಷ ಉಪನ್ಯಾಸಗಳನ್ನು ನಡೆಸಲು ಉದ್ದೇಶಿಸಿದೆ.

ಸಾಮಾಜಿಕ, ಆರ್ಥಿಕ, ರಾಜಕೀಯ ಧಾರ್ಮಿಕ ಸಾಂಸ್ಕೃತಿಕ, ಸಾಹಿತ್ಯಿಕ, ಹಾಗೂ ಪತ್ರಿಕೋದ್ಯಮಕ್ಕೆ ಸಂಬಂಧಿಸಿ ಅಂಬೇಡ್ಕರ್‌ ವಿಚಾರಧಾರೆಗಳು, ಅವರ  ಬಾಲ್ಯಜೀವನ, ಶೈಕ್ಷಣಿಕ ಜೀವನ, ಅವರ ಮೇಲೆ  ಪ್ರಭಾವ ಬೀರಿದ ಬುದ್ಧ, ಬಸವ, ಸಾಹು ಮಹಾರಾಜ್, ನಾರಾಯಣ ಗುರು, ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್ ಕುರಿತು ಸಂಶೋಧನಾ ಲೇಖನಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಲೇಖನಗಳನ್ನು  ಆಧರಿಸಿ ವಿವಿಧ  ಸಂಪುಟಗಳನ್ನು ವಿಶ್ವವಿದ್ಯಾಲಯದಿಂದ ಪ್ರಕಟಿಸಲಾಗುತ್ತದೆ.
ಆಸಕ್ತ  ಲೇಖಕರು, ಸಂಶೋಧಕರು, ಅಧ್ಯಾಪಕರು, ವಿದ್ವಾಂಸರು, ಈಗಾಗಲೇ ಪ್ರಕಟಿಸಿದ ಸಂಶೋಧನಾತ್ಮಕ ಲೇಖನಗಳನ್ನು  ಅಥವಾ  ಹೊಸ ಲೇಖನಗಳನ್ನು  ಇದೇ 31ರ ಒಳಗೆ ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.   

ವಿಳಾಸ: ಡಾ.ಸಿ.ಬಿ.ಹೊನ್ನುಸಿದ್ಧಾರ್ಥ ನಿರ್ದೇಶಕರು, ಮತ್ತು ಪ್ರಾಧ್ಯಾಪಕರು, ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಬೆಂಗಳೂರು-56. ಸಂಪರ್ಕ: 9449612469 , 080–22961099

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.