ADVERTISEMENT

ಆನ್‌ಲೈನ್ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 20:05 IST
Last Updated 7 ಡಿಸೆಂಬರ್ 2017, 20:05 IST

ಉಚಿತ ತರಬೇತಿ

ಭಾರತೀಯ ಕೌಶಲ ಅಭಿವೃದ್ಧಿ ನಿಗಮದ (ಎನ್‌ಎಸ್‌ಡಿಸಿ) ಅನುದಾನದಲ್ಲಿ ಯುವ ಪರಿವರ್ತನಾ ಅಕಾಡೆಮಿಯು ಉಚಿತವಾಗಿ ಉದ್ಯೋಗಾಧಾರಿತ ತರಬೇತಿ ಶಿಬಿರ ನಡೆಸಲಿದೆ. ಸಂಪರ್ಕಕ್ಕೆ: ಧನಲಕ್ಷ್ಮಿ 9880832391.

ಜೈಪುರ ಕಾಲು ಶಿಬಿರ

ADVERTISEMENT

ಕರ್ನಾಟಕ ಮಾರ್ವಾಡಿ ಸಮಾಜವು ಭಗವಾನ್‌ ಮಹಾವೀರ ಅಂಗವಿಕಲ ಸಹಾಯತಾ ಸಮಿತಿಯ ಸಹಯೋಗದಲ್ಲಿ ಕಾಲು ಇಲ್ಲದವರಿಗೆ ಉಚಿತವಾಗಿ ಕೃತಕ ಕಾಲು ನೀಡಲಿದೆ.

ಕೃತಕ ಕಾಲು ಪಡೆಯಲು ಇಚ್ಛಿಸುವವರು ಡಿ.16ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಮಾಜವು ಪ್ರಕಟಣೆಯಲ್ಲಿ ತಿಳಿಸಿದೆ.

ವಿಳಾಸ: ಮಹಾರಾಜ ಅಗ್ರಸೇನಾ ಭವನ, 2ನೇ ಅಡ್ಡರಸ್ತೆ, 1ನೇ ಹಂತ, ಅಶೋಕ ಸ್ತಂಭ ಸಮೀಪ, ಜಯನಗರ. ಸಂಪರ್ಕ: 9620000244

ಕುವೆಂಪು ಸಾಹಿತ್ಯ ಅಧ್ಯಯನ ಶಿಬಿರ

ಕುವೆಂಪು ಅವರ 114ನೇ ಜನ್ಮದಿನದ ಅಂಗವಾಗಿ ಕುಪ್ಪಳಿಯ ಕುವೆಂಪು ಪ್ರತಿಷ್ಠಾನವು ಅವಿರತ ಟ್ರಸ್ಟ್‌ ಬೆಂಗಳೂರು ಸಹಯೋಗದೊಂದಿಗೆ ಇದೇ 29, 30ರಂದು ‘ಕುವೆಂಪು ಸಾಹಿತ್ಯ ಅಧ್ಯಯನ ಶಿಬಿರ’ ಆಯೋಜಿಸಿದೆ. ಮೊದಲು ನೋಂದಾಯಿಸಿಕೊಂಡ 80 ಅಭ್ಯರ್ಥಿಗಳಿಗೆ ಅವಕಾಶ. ಉಚಿತ ಊಟ, ವಸತಿ ನೀಡಲಾಗುವುದು.

ಸಂಪರ್ಕ: contact@aviratha.org, ದೂರವಾಣಿ ಸಂಖ್ಯೆ: 9880802642

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.