ADVERTISEMENT

‘ಈಗಿನ ಕವಿಗಳಿಗೆ ಪ್ರಚಾರದ ಹುಚ್ಚು ಹಿಡಿದಿದೆ’

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 20:09 IST
Last Updated 16 ಏಪ್ರಿಲ್ 2017, 20:09 IST
ಜಪಾನಂದ್‌ ಸ್ವಾಮೀಜಿ ಅವರು ಮಂಕುತಿಮ್ಮನ ಕಗ್ಗಗಳ ರಸಧಾರೆಯ ನಾಲ್ಕನೇ ಆವೃತ್ತಿ ಬಿಡುಗಡೆಗೊಳಿಸಿ, ಎಚ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರಿಗೆ ನೀಡಿದರು. ಲೇಖಕ ರವಿ ತಿರುಮಲೈ, ಗಾಯಕಿ ಆಶಾ ಜಗದೀಶ್‌, ಸಾಹಿತಿ ಹಂಪಾ ನಾಗರಾಜಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ವಿ. ದಯಾನಂದ ಹಾಜರಿದ್ದರು –ಪ್ರಜಾವಾಣಿ ಚಿತ್ರ
ಜಪಾನಂದ್‌ ಸ್ವಾಮೀಜಿ ಅವರು ಮಂಕುತಿಮ್ಮನ ಕಗ್ಗಗಳ ರಸಧಾರೆಯ ನಾಲ್ಕನೇ ಆವೃತ್ತಿ ಬಿಡುಗಡೆಗೊಳಿಸಿ, ಎಚ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರಿಗೆ ನೀಡಿದರು. ಲೇಖಕ ರವಿ ತಿರುಮಲೈ, ಗಾಯಕಿ ಆಶಾ ಜಗದೀಶ್‌, ಸಾಹಿತಿ ಹಂಪಾ ನಾಗರಾಜಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ವಿ. ದಯಾನಂದ ಹಾಜರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಇಂದಿನ ಕವಿಗಳಿಗೆ ಅನುಭವಿಲ್ಲ. ಆದರೆ, ಅವರಿಗೆ ಪ್ರಚಾರದ ಹುಚ್ಚು ಹಿಡಿದಿದೆ’ ಎಂದು ಪಾವಗಡ ರಾಮಕೃಷ್ಣ ಮಠದ ಜಪಾನಂದ್‌ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಿವಿಜಿ ಅವರ ಮಂಕುತಿಮ್ಮನ ಕಗ್ಗಗಳ ರಸಧಾರೆಯ ನಾಲ್ಕನೇ ಆವೃತ್ತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಜೀವನಾನುಭವದ ಸಾರವಾಗಿರುವ ಡಿ.ವಿ. ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗವನ್ನು ಈಗಿನ ಯುವಜನತೆ ಓದಲೇ ಬೇಕು. ಸಂದರ್ಭಗಳನ್ನು ಎದುರಿಸಲು ಒದ್ದಾಡುವ ಮನಸ್ಸುಗಳಿಗೆ ಅದೊಂದು ಆಸರೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ತುಮಕೂರಿನಲ್ಲಿ ಡಿವಿಜಿ ಅವರ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಸುತ್ತಿದ್ದೇವೆ. ಈಗಾಗಲೇ 60 ಉಪನ್ಯಾಸಗಳು ಮುಗಿದಿವೆ. ಆರಂಭದಲ್ಲಿ ಕಡಿಮೆ ಜನ ಸೇರುತ್ತಿದ್ದರು. ಆದರೆ, ಈಗ ಆ ಸಂಖ್ಯೆ ಹೆಚ್ಚಾಗಿದೆ’ ಎಂದರು.

‘ಸಾರಸ್ವತ ಲೋಕದ ಮಹಾನ್ ದಿಗ್ಗಜರಾದ ಡಿವಿಜಿ ಅವರು ತಮ್ಮ ಜೀವನದಲ್ಲಿ ಸರಳತೆ ಮೈಗೂಡಿಸಿಕೊಂಡಿದ್ದರು. ಅವರನ್ನು ನಾವು ಬ್ರಹ್ಮಾನಂದರನ್ನಾಗಿ ಕಾಣುತ್ತೇವೆ’ ಎಂದು ತಿಳಿಸಿದರು.

ಸಾಹಿತಿ  ಹಂಪಾ ನಾಗರಾಜಯ್ಯ, ‘ಡಿವಿಜಿ ಅವರು ಬರೆದ ಕಗ್ಗವೇ ಸುಲಭವಾಗಿದೆ. ರವಿ ತಿರುಮಲೈ ಅವರು ಅದನ್ನು ಇನ್ನೂ ಸರಳವಾಗಿ ವ್ಯಾಖ್ಯಾನಿಸಿದ್ದಾರೆ. ಇನ್ನಾದರೂ ಎಲ್ಲರೂ ಕಗ್ಗವನ್ನು ಓದಬೇಕು’ ಎಂದು ತಿಳಿಸಿದರು.

ಕಗ್ಗ ರಸಧಾರೆಯ ಲೇಖಕ ರವಿ ತಿರುಮಲೈ, ‘ಡಿವಿಜಿ ನನ್ನ ಪ್ರೇರಣೆ. ಬರೆಯಲು ಕಲಿಸಿದ ಕಗ್ಗವೇ ನನ್ನನ್ನು ಮುನ್ನಡೆಸಿಕೊಂಡು ಹೋಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.