ADVERTISEMENT

ಉದ್ಯಮಿ ಚಿನ್ನಸ್ವಾಮಿರಾಜು ಸ್ಮರಣೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2017, 20:08 IST
Last Updated 9 ಏಪ್ರಿಲ್ 2017, 20:08 IST
ಎ.ಎಸ್‌.ಚಿನ್ನಸ್ವಾಮಿ ರಾಜು ಅವರ ಭಾವಚಿತ್ರಕ್ಕೆ ಎ.ರಾಧಾಕೃಷ್ಣ ರಾಜು, ಕೆ.ಆರ್.ರಮೇಶ್‌ಕುಮಾರ್‌, ಸಮಿತಿಯ ಉಪಾಧ್ಯಕ್ಷ ಕೆ.ಗಂಗರಾಜು ಪುಷ್ಪ ನಮನ ಸಲ್ಲಿಸಿದರು
ಎ.ಎಸ್‌.ಚಿನ್ನಸ್ವಾಮಿ ರಾಜು ಅವರ ಭಾವಚಿತ್ರಕ್ಕೆ ಎ.ರಾಧಾಕೃಷ್ಣ ರಾಜು, ಕೆ.ಆರ್.ರಮೇಶ್‌ಕುಮಾರ್‌, ಸಮಿತಿಯ ಉಪಾಧ್ಯಕ್ಷ ಕೆ.ಗಂಗರಾಜು ಪುಷ್ಪ ನಮನ ಸಲ್ಲಿಸಿದರು   

ಬೆಂಗಳೂರು: ತೆಲುಗು ವಿಜ್ಞಾನ ಸಮಿತಿಯು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉದ್ಯಮಿ ಎ.ಎಸ್‌. ಚಿನ್ನಸ್ವಾಮಿ ರಾಜು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ, ‘ಚಿನ್ನಸ್ವಾಮಿ ಅವರು ಕಷ್ಟಪಟ್ಟು ಉದ್ಯಮಗಳನ್ನು ಬೆಳೆಸಿದರು. ಮಾದರಿ ವ್ಯಕ್ತಿಯಾಗಿದ್ದರು. ಅವರು ಇನ್ನು ಸ್ವಲ್ಪ ಕಾಲ ಬದುಕಿದ್ದರೆ ಸಮಾಜಕ್ಕೆ ಮಾರ್ಗದರ್ಶನ ದೊರೆಯುತ್ತಿತ್ತು’ ಎಂದು ನುಡಿ ನಮನ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಎ.ರಾಧಾಕೃಷ್ಣರಾಜು, ‘ಶೈಕ್ಷಣಿಕ ಸೇವೆಗಾಗಿ ಅವರು ತಿರುಮಲ ವಿದ್ಯಾನಿಕೇತನ ಶಾಲೆ ಆರಂಭಿಸಿದರು. ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಕೃಷ್ಣದೇವರಾಯ ಸಭಾಂಗಣ ಕಟ್ಟಲು ನೆರವಾದರು. ಸಮುದಾಯದ ಜನ ಮತ್ತು ಭಾಷೆಯನ್ನು ಬೆಳೆಸಲು ಶ್ರಮಿಸಿದರು’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.