ADVERTISEMENT

ಎಂಟು ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:54 IST
Last Updated 27 ಮಾರ್ಚ್ 2015, 19:54 IST
ಟೀಯೆಸ್ಸಾರ್‌ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಈಶ್ವರ ದೈತೋಟ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ  ಅಭಿನಂದಿಸಿದರು.  (ಎಡದಿಂದ) ಡಾ. ನರೇಂದ್ರ ರೈ ದೇರ್ಲ, ಡಾ. ಸದಾನಂದ ಪೆರ್ಲ,  ಅಂಶಿ ಪ್ರಸನ್ನ ಕುಮಾರ್‌, ದೀಪಕ್‌ ಸಾಗರ್‌, ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಸಚಿವ ರೋಷನ್‌ ಬೇಗ್‌, ಎನ್‌. ಅರ್ಜುನ್‌ ದೇವ, ವಾರ್ತಾ ಇಲಾಖೆಯ  ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾದೇವಿ, ರಾಘವೇಂದ್ರ ಅರವಿಂದರಾವ್‌ ಜೋಶಿ, ವಾರ್ತಾ ಇಲಾಖೆಯ ನಿರ್ದೇಶಕ ವಿಶುಕುಮಾರ್, ಕೆ.ಬಿ. ಗಣಪತಿ    ಪ್ರಜಾವಾಣಿ ಚಿತ್ರ

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡುವ 2012 ಮತ್ತು 2013ರ ಸಾಲಿನ  ಟಿಯೆಸ್ಸಾರ್‌ ಸ್ಮಾರಕ ಪ್ರಶಸ್ತಿ, ಮೊಹರೆ ಹಣಮಂತರಾಯ  ಪ್ರಶಸ್ತಿ, ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಯನ್ನು ಸಿ.ಎಂ ಸಿದ್ದರಾಮಯ್ಯ  ಪ್ರದಾನ  ಮಾಡಿದರು.

2012ನೇ ಸಾಲಿನ ಟಿಯೆಸ್ಸಾರ್  ಪ್ರಶಸ್ತಿಯನ್ನು ಎನ್. ಅರ್ಜುನ್ ದೇವ ಅವರಿಗೆ, 2013ನೇ ಸಾಲಿನ   ಪ್ರಶಸ್ತಿಯನ್ನು ಈಶ್ವರ ದೈತೋಟ ಅವರಿಗೆ ಪ್ರದಾನ ಮಾಡಿದರು. 2012ನೇ ಸಾಲಿನ ಮೊಹರೆ ಹಣಮಂತರಾಯ ಪತ್ರಿಕೋದ್ಯಮ  ಪ್ರಶಸ್ತಿಯನ್ನು ರಾಘವೇಂದ್ರ ಅರವಿಂದರಾವ್ ಜೋಷಿ ಮತ್ತು 2013ನೇ ಸಾಲಿನ  ಪ್ರಶಸ್ತಿಯನ್ನು ಕೆ.ಬಿ. ಗಣಪತಿ ಅವರಿಗೆ ನೀಡಲಾಯಿತು.

2012ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಅಂಶಿ ಪ್ರಸನ್ನ ಕುಮಾರ್, 2013ನೇ ಸಾಲಿನ  ಪ್ರಶಸ್ತಿಯನ್ನು ಡಾ.ಸದಾನಂದ ಪೆರ್ಲ, 2012ನೇ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಯನ್ನು  ಡಾ. ನರೇಂದ್ರ ರೈ ದೇರ್ಲ ಮತ್ತು  2013ನೇ ಸಾಲಿನ  ಪ್ರಶಸ್ತಿಯನ್ನು ದೀಪಕ್ ಸಾಗರ್‌ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು  ತಲಾ ₨1ಲಕ್ಷ  ನಗದು ಒಳಗೊಂಡಿದೆ.

ಕಾರ್ಯಕ್ರಮದಲ್ಲಿ ವಾರ್ತಾ ಸಚಿವ ಆರ್.ರೋಷನ್ ಬೇಗ್‌, ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಹೈಕೋರ್ಟ್‌ನ ನಿವೃತ್ತ  ನ್ಯಾಯಾಧೀಶ ಅರಳಿ ನಾಗರಾಜ್,  ಮಾಧ್ಯಮ ಅಕಾಡಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ, ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ನಾಗಾಂಬಿಕಾ ದೇವಿ, ನಿರ್ದೇಶಕ ಎನ್.ಆರ್. ವಿಶುಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.