ADVERTISEMENT

ಎಂಬಿಎ, ಎಂಸಿಎ ಕೋರ್ಸ್‌ಗಳಿಗೆ ಅಂತಿಮ ಕೌನ್ಸೆಲಿಂಗ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST

ಬೆಂಗಳೂರು: ಎಂ.ಬಿ.ಎ, ಎಂ.ಸಿ.ಎ, ಎಂ.ಸಿ.ಎ ಲ್ಯಾಟರಲ್ ಎಂಟ್ರಿ, ಎಂ.ಇ ಹಾಗೂ ಎಂ.ಟೆಕ್ ಕೋರ್ಸ್‌ಗಳಿಗೆ ಎರಡನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆ ಕೌನ್ಸೆಲಿಂಗ್ ಶುಕ್ರವಾರದಿಂದ ಆರಂಭವಾಗಿದೆ.

ಆನ್‌ಲೈನ್‌ ಮೂಲಕ ಆಯ್ಕೆಗಳನ್ನು ದಾಖಲಿಸಲು (ಆಪ್ಷನ್ ಎಂಟ್ರಿ) ಇದೇ 25ರ ಬೆಳಿಗ್ಗೆ 10ರವರೆಗೆ ಅವಕಾಶವಿದೆ. ಅಂದು ಸಂಜೆ 6ಕ್ಕೆ ಸೀಟು ಹಂಚಿಕೆ ಮಾಡಲಾಗುತ್ತದೆ.

ಸೀಟು ಆಯ್ಕೆ ದೃಢೀಕರಿಸಿ ಶುಲ್ಕ ಪಾವತಿಸಲು ಇದೇ 27ರವರೆಗೆ ಅವಕಾಶ ಇದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.