ADVERTISEMENT

ಎಸ್‌ಬಿಎಂ ನಿಂದ ಸಲಕರಣೆ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 20:00 IST
Last Updated 14 ಮಾರ್ಚ್ 2017, 20:00 IST
ಎನ್.ಕೃಷ್ಣಮಾಚಾರಿ ಅವರು ಅಂಗವಿಕಲರಿಗೆ ಸಲಕರಣೆ ವಿತರಿಸಿದರು
ಎನ್.ಕೃಷ್ಣಮಾಚಾರಿ ಅವರು ಅಂಗವಿಕಲರಿಗೆ ಸಲಕರಣೆ ವಿತರಿಸಿದರು   

ಬೆಂಗಳೂರು: ‘ಅಸೋಸಿಯೇಷನ್‌ ಆಫ್‌ ಪೀಪಲ್‌ ವಿತ್‌ ಡಿಸೇಬಲಿಟಿಸ್‌’ ಸಂಸ್ಥೆಯು ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು’(ಎಸ್‌ಬಿಎಂ) ವತಿಯಿಂದ ಅಂಗವಿಕಲರಿಗೆ ಅವಶ್ಯಕವಿರುವ ಸಲಕರಣೆಗಳನ್ನು ವಿತರಿಸಲಾಯಿತು.

ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎನ್.ಕೃಷ್ಣಮಾಚಾರಿ ಮಾತನಾಡಿ, ‘ಅಂಗವಿಕಲರರಿಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ತರಬೇತಿ ನೀಡಬೇಕು. ಅವರು ಸಾಮಾನ್ಯರಂತೆ ಸ್ವತಂತ್ರ್ಯವಾಗಿ ಜೀವನ ನಡೆಸುವಂತೆ ಸಬಲಗೊಳಿಸಬೇಕು’ ಎಂದರು.

‘2,800 ಅಂಗವಿಕಲರನ್ನು ಬ್ಯಾಂಕಿನಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಬ್ಯಾಂಕಿನ ನೆರವಿನಿಂದ ನಗರದಲ್ಲಿ ಸ್ಥಾಪಿಸಿರುವ ಕೌಶಲ ಅಭಿವೃದ್ಧಿ ಕೇ೦ದ್ರದ ಪ್ರಯೋಜನವನ್ನು ಅಂಗವಿಕಲರನ್ನು ಸಬಲಿಕರಣಗೊಳಿಸುವ ಸಂಸ್ಥೆಗಳು ಪಡೆಯಬೇಕು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.