ADVERTISEMENT

ಔಷಧಿ ಲಭ್ಯತೆ ವಿವರ

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:47 IST
Last Updated 27 ಮೇ 2017, 19:47 IST

ಬೆಂಗಳೂರು: ಆನ್‌ಲೈನ್‌ನಲ್ಲಿ ಔಷಧಿ ಮಾರಾಟಕ್ಕೆ ಅನುಮತಿ ನೀಡುವುದನ್ನು ವಿರೋಧಿಸಿ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘ ಇದೇ 30ರಂದು ಬಂದ್‌ಗೆ ಕರೆ ನೀಡಿದ್ದು, ರೋಗಿಗಳಿಗೆ ಸಮಸ್ಯೆ ಆಗದಂತೆ ಬದಲಿ ವ್ಯವಸ್ಥೆ ಮಾಡಲು ಔಷಧ ನಿಯಂತ್ರಣ ಇಲಾಖೆ ಮುಂದಾಗಿದೆ.

ಸರ್ಕಾರಿ ಆಸ್ಪತ್ರೆಗಳ ಆವರಣ, ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳಿಗೆ ಹೊಂದಿಕೊಂಡಿರುವ ಔಷಧಿ ಅಂಗಡಿಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ. ಸಾರ್ವಜನಿಕರು ಇಲ್ಲಿ ಔಷಧಿ ಪಡೆಯಬಹುದು ಎಂದು ಇಲಾಖೆ ತಿಳಿಸಿದೆ.

ಔಷಧ ಲಭ್ಯತೆಯ ಬಗ್ಗೆ ಮಾಹಿತಿ ನೀಡಲು  ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ನೋಡಲ್‌ ಅಧಿಕಾರಿಗಳ ವಿವರ: ಓಂಕಾರ್, ಬೆಂಗಳೂರು ವೃತ್ತ-1: ಮೊಬೈಲ್ 9845492967, 080-22341745
ಎಂ. ಸುರೇಶ್, ಬೆಂಗಳೂರು ವೃತ್ತ – 2: 9141166046, 080-22341789
ಗೋಣಿಫಕೀರಪ್ಪ,  ಬೆಂಗಳೂರು ವೃತ್ತ – 3: 9902759871, 080-22341742

ಕೆಂಪಯ್ಯ ಸುರೇಶ್, ಬೆಂಗಳೂರು ವೃತ್ತ – 4: ಮೊಬೈಲ್ ಸಂಖ್ಯೆ  9880718974, 080-22341743
ನಾರಾಯಣ ರೆಡ್ಡಿ, ಬೆಂಗಳೂರು ವೃತ್ತ –  5: ಮೊಬೈಲ್9880139146, 080-22341741
ಉಮಾಕಾಂತ್ ಪಾಟೀಲ್, ಬೆಂಗಳೂರು ವೃತ್ತ – 6: ಮೊಬೈಲ್ 9341264210, ದೂರವಾಣಿ ಸಂಖ್ಯೆ  080-22341740.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.