ADVERTISEMENT

ಕನ್ನಡ ಜಾಗೃತಿ ಜ್ಯೋತಿ ಯಾತ್ರೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 20:08 IST
Last Updated 31 ಅಕ್ಟೋಬರ್ 2014, 20:08 IST

ಪೀಣ್ಯ ದಾಸರಹಳ್ಳಿ: ಕನ್ನಡ ಸೇನೆ ಕರ್ನಾಟಕ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡ ಜಾಗೃತಿ ಜ್ಯೋತಿ ಯಾತ್ರೆಯನ್ನು ಸಾಲು ಮರದ ತಿಮ್ಮಕ್ಕ ಉದ್ಘಾಟಿಸಿದರು.

ಉತ್ತರ ಕನ್ನಡ ಜಿಲ್ಲೆ ಭುವನಗಿರಿಯ ಭುವನೇಶ್ವರಿ ಸನ್ನಿಧಿಯಿಂದ ಆಗಮಿಸಿದ ಜ್ಯೋತಿ ಶುಕ್ರವಾರ ಬೆಳಿಗ್ಗೆ ಯಶವಂತಪುರದ ಕನ್ನಡ ಸೇನೆ ಕಚೇರಿಯಿಂದ ಮೆರವಣಿಗೆ ಹೊರಟಿತು. ಆರ್‌ಎಂಸಿ ಯಾರ್ಡ್‌, ಗೋವರ್ಧನ  ಚಿತ್ರ ಮಂದಿರ, ಕೆಂಪೇಗೌಡ ತರಕಾರಿ ಮಾರುಕಟ್ಟೆ, ಕೃಷ್ಣನಂದಾ ನಗರದಿಂದ ಕಂಠೀರವ ಸ್ಟುಡಿಯೋ, ಡಾ.ರಾಜ್‌-ಕುಮಾರ್ ಸಮಾಧಿ-ಯವರೆಗೆ ಮೆರವಣೆಗೆ ಜರುಗಿತು.

ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ಲಂಬಾಣಿ ಕುಣಿತ, ಗೊಂಬೆ ಕುಣಿತ, ಪೂಜಾ ಕುಣಿತ, ಪಟ್ಟದ ಕುಣಿತ ಇನ್ನಿತರ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.