ADVERTISEMENT

ಕುಶಲಕರ್ಮಿಗಳ ಕೈಯಲ್ಲರಳಿದ ದೇಸಿ ಚಿತ್ತಾರ

ಕೈಮಗ್ಗ, ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2014, 19:30 IST
Last Updated 1 ಆಗಸ್ಟ್ 2014, 19:30 IST
ಜಯನಗರ 4ನೇ ಟಿ ಹಂತದಲ್ಲಿರುವ ‘ಗ್ರಾಮೀಣ ಅಂಗಡಿ’ ಆಯೋಜಿಸಿರುವ ಗ್ರಾಮೀಣ ಕರಕುಶಲಕರ್ಮಿಗಳ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಮಾರಾಟ ಹಾಗೂ ಪ್ರದರ್ಶನ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಹಾಗೂ ರಂಗಕರ್ಮಿ ಲಕ್ಷ್ಮೀ ಚಂದ್ರಶೇಖರ್‌ ಅವರು ವಸ್ತುಗಳನ್ನು ವೀಕ್ಷಿಸಿದರು	–ಪ್ರಜಾವಾಣಿ ಚಿತ್ರ
ಜಯನಗರ 4ನೇ ಟಿ ಹಂತದಲ್ಲಿರುವ ‘ಗ್ರಾಮೀಣ ಅಂಗಡಿ’ ಆಯೋಜಿಸಿರುವ ಗ್ರಾಮೀಣ ಕರಕುಶಲಕರ್ಮಿಗಳ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಮಾರಾಟ ಹಾಗೂ ಪ್ರದರ್ಶನ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಹಾಗೂ ರಂಗಕರ್ಮಿ ಲಕ್ಷ್ಮೀ ಚಂದ್ರಶೇಖರ್‌ ಅವರು ವಸ್ತುಗಳನ್ನು ವೀಕ್ಷಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಒಳಗೆ ಕಾಲಿಡುತ್ತಿದ್ದಂತೆ ಲಾವಂಚದ ಘಮ. ಎಲ್ಲಿ ನೋಡಿದರಲ್ಲಿ ಶುದ್ಧ ದೇಸಿ ವಸ್ತುಗಳ ಸೊಬಗು. ಕರ­ಕುಶ­ಲ­ಕರ್ಮಿಗಳ ಕೈಯಲ್ಲರಳಿದ ದೇಸಿ ಸೊಗ­ಡಿನ ಉಡುಪುಗಳು. ಬಿದಿರಿನ ಹಸೆ­ಕಲೆ ಚಿತ್ತಾರ, ಸಾವಯವ ಸಾಬೂನು­ಗಳು, ರಾಸಾಯನಿಕ ರಹಿತ ನೈಸರ್ಗಿಕ ಅಗರ ಬತ್ತಿಗಳು...
–‘ಗ್ರಾಮೀಣ ಅಂಗಡಿ’ ಒಳಗಿನ ದೃಶ್ಯ­ಗಳಿವು. ಜಯನಗರ 4ನೇ ಟಿ ಹಂತದಲ್ಲಿ­ರುವ ‘ಗ್ರಾಮೀಣ ಅಂಗಡಿ’ ಆಯೋಜಿಸಿ­ರುವ ಗ್ರಾಮೀಣ ಕರಕುಶಲಕರ್ಮಿಗಳ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು­ಳ ಮಾರಾಟ ಹಾಗೂ ಪ್ರದರ್ಶನ ಮೇಳಕ್ಕೆ ಶುಕ್ರವಾರ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಹಾಗೂ ರಂಗಕರ್ಮಿ ಲಕ್ಷ್ಮೀ ಚಂದ್ರಶೇಖರ್‌ ಚಾಲನೆ ನೀಡಿದರು.

ವರಮಹಾಲಕ್ಷ್ಮೀ–ಗೌರಿ ಹಬ್ಬದ ಸಡ­ಗರ ಹಾಗೂ ಸ್ವಾತಂತ್ರ್ಯೋತ್ಸವ ಮಾಸಾ­ಚ­­ರಣೆ ಅಂಗವಾಗಿ ಇಲ್ಲಿ ಕೈಮಗ್ಗ, ಖಾದಿ ಹಾಗೂ ಗ್ರಾಮೋದ್ಯೋಗ ವಸ್ತುಗಳ ಪ್ರದ­ರ್ಶನ 31ರವರೆಗೆ ನಡೆಯಲಿದೆ.

ಉದ್ಘಾಟನೆ ಬಳಿಕ ಮಾತನಾಡಿದ ಎಚ್‌.ಎಸ್‌. ದೊರೆಸ್ವಾಮಿ, ‘ರಾಜ್ಯದ ಕೆಲವೆಡೆ ಬಡತನ ತಾಂಡವ ವಾಡುತ್ತಿದೆ. ಆದರೆ, ಮಂತ್ರಿಗಳು, ಶಾಸಕರು ಅಧಿ­ವೇಶ­­ನದಲ್ಲಿ ಒಂದು ದಿನವೂ ಬಡತನದ ವಿಷಯದ ಬಗ್ಗೆ ಚರ್ಚಿಸಲಿಲ್ಲ. ಅದಕ್ಕೆ ಬದ­ಲಾಗಿ ಭೂ ಕಬಳಿಕೆ, ತಲೆದಂಡದ ವಿಷಯಗಳ ಬಗ್ಗೆಯೇ ಕಿತ್ತಾಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.

ಲಕ್ಷ್ಮೀ ಚಂದ್ರಶೇಖರ್‌ ಮಾತನಾಡಿ, ‘ಗ್ರಾಮೀಣ ಹೆಣ್ಣು ಮಕ್ಕಳಲ್ಲಿ ಅದ್ಭುತ ಪ್ರತಿಭೆ ಅಡಗಿದೆ. ಇಂಥವರನ್ನು ಗುರು­ತಿಸಿ ಪ್ರೋತ್ಸಾಹಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.