ADVERTISEMENT

ಕೆರೆ ನೀರು ಕಲುಷಿತವಾಗದಂತೆ ನೋಡಿಕೊಳ್ಳಲು ಕಿವಿಮಾತು

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 20:39 IST
Last Updated 28 ಜೂನ್ 2017, 20:39 IST
ಮಹಿಳೆಯರಿಗೆ ಬೀಜದುಂಡೆಗಳನ್ನು ವಿತರಿಸಿದ ಶ್ರದ್ಧಾ ಅಮಿತ್
ಮಹಿಳೆಯರಿಗೆ ಬೀಜದುಂಡೆಗಳನ್ನು ವಿತರಿಸಿದ ಶ್ರದ್ಧಾ ಅಮಿತ್   

ದಾಬಸ್‌ಪೇಟೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನೆಲಮಂಗಲ ತಾಲ್ಲೂಕು  ಬುಗಡಿಹಳ್ಳಿ/ ಕೆರೆಪಾಳ್ಯದಲ್ಲಿ ಪುನಶ್ಚೇತನಗೊಳಿಸಿದ್ದ ಕೆರೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಮಗಳು ಶ್ರದ್ಧಾ ಅಮಿತ್ ಬುಧವಾರ ವೀಕ್ಷಿಸಿದರು.

ಕೆರೆಯಲ್ಲಿ ಹೂಳು ತೆಗೆದು, ರಾಜಕಾಲುವೆ ದುರಸ್ತಿ ಮಾಡಿ ಅಂರ್ತಜಲ ಹೆಚ್ಚಿಸುವುದಕ್ಕೆ ಇಂಗು ಗುಂಡಿಗಳನ್ನು ನಿರ್ಮಿಸಿರುವುದು ಹಾಗೂ ಸುತ್ತಲೂ ಗಿಡಗಳನ್ನು ನೆಟ್ಟಿರುವುದನ್ನು ಕಂಡು ಶ್ರದ್ಧಾ ಸಂತೋಷಪಟ್ಟರು.

‘ಕೆರೆ ನೀರು ಕಲುಷಿತವಾಗದಂತೆ ನೋಡಿಕೊಳ್ಳಬೇಕು’ ಎಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು. ಗ್ರಾಮಕ್ಕೆ ಭೇಟಿ ನೀಡಿದ ನೆನಪಿಗಾಗಿ ಕೆರೆ ದಡದಲ್ಲಿ ಅರಳಿ ಗಿಡವನ್ನು ನೆಟ್ಟರು. ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹7 ಲಕ್ಷ ಹಾಗೂ ಸ್ಥಳೀಯ ಮೂಲಗಳಿಂದ ₹8 ಲಕ್ಷ ಸೇರಿ ₹15 ಲಕ್ಷ ವೆಚ್ಚದಲ್ಲಿ 12 ಎಕರೆ 33 ಗುಂಟೆ ವಿಸ್ತೀರ್ಣದ  ಕೆರೆಯ ಪುನಶ್ಚೇತನ ಕಾರ್ಯ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.