ADVERTISEMENT

ಖಾಸಗಿ ಭೂಮಿ ಬೆಲೆ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 20:20 IST
Last Updated 29 ಜೂನ್ 2016, 20:20 IST

ಬೆಂಗಳೂರು: ವಸತಿ ಯೋಜನೆ  ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಖಾಸಗಿ ಭೂಮಿಗೆ ನಿಗದಿ ಮಾಡಿದ್ದ ಬೆಲೆಯನ್ನು ಪರಿಷ್ಕರಿಸಲು ಸಂಪುಟ ಸಭೆ ತೀರ್ಮಾನಿಸಿದೆ.

ಸರ್ಕಾರಿ ಭೂಮಿ ಸಿಗದೇ ಇದ್ದಾಗ ಖಾಸಗಿ ಭೂಮಿ ಖರೀದಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಸರ್ಕಾರ ನಿಗದಿಪಡಿಸಿದ ಬೆಲೆ ಕಡಿಮೆ ಇದ್ದುದರಿಂದ ಯಾರೂ ಭೂಮಿ ನೀಡಲು ಮುಂದೆ ಬರುತ್ತಿರಲಿಲ್ಲ. ಪ್ರತೀ ಎಕರೆಗೆ ಗ್ರಾಮೀಣ ಪ್ರದೇಶದಲ್ಲಿ ₹6 ಲಕ್ಷದಿಂದ 9 ಲಕ್ಷ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 8 ಲಕ್ಷದಿಂದ 12 ಲಕ್ಷ, ಪುರಸಭೆ ವ್ಯಾಪ್ತಿಯಲ್ಲಿ ₹10 ಲಕ್ಷದಿಂದ 15 ಲಕ್ಷ, ನಗರಸಭೆ ವ್ಯಾಪ್ತಿಯಲ್ಲಿ ₹15 ಲಕ್ಷದಿಂದ 22.5 ಲಕ್ಷ, ಪಾಲಿಕೆ ವ್ಯಾಪ್ತಿಯಲ್ಲಿ ₹22ಲಕ್ಷದಿಂದ 37.5 ಲಕ್ಷ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ₹ 55 ಲಕ್ಷದಿಂದ 75 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಯುಕೆಪಿಗೆ ₹ 940 ಕೋಟಿ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುದ್ದೇಬಿಹಾಳ ಹಾಗೂ ಸಿಂದಗಿ ತಾಲ್ಲೂಕುಗಳ 20,243 ಹೆಕ್ಟೇರ್‌ ಪ್ರದೇಶಕ್ಕೆ ₹ 840 ಕೋಟಿ ವೆಚ್ಚದಲ್ಲಿ ಬೂದಿಹಾಳ–ಪೀರಾಪುರ ಏತನೀರಾವರಿ ಯೋಜನೆಯ ಮೂಲಕ  ಹನಿ ನೀರಾವರಿ ಮೂಲಕ ನೀರಾವರಿ ಕಲ್ಪಿಸುವ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ–1 ಮತ್ತು 2 ರ ಅಡಿಯಲ್ಲಿ ನಿರ್ಮಿಸಲಾಗಿರುವ 106 ಪುನರ್‌ವಸತಿ ಕೇಂದ್ರಗಳ ಮುಂದುವರಿದ ಕಾಮಗಾರಿಗಳಿಗೆ ₹ 100 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಜಯಚಂದ್ರ ಹೇಳಿದರು.

ನಿರ್ಣಯಗಳು

- ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತಳಕಲ್‌ ಗ್ರಾಮದಲ್ಲಿ ₹ 100 ಕೋಟಿ ವೆಚ್ಚದಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆ.
- ಆನೆ ಕಾರಿಡಾರ್‌ ಸ್ಥಾಪನೆಗಾಗಿ ಅರಣ್ಯ ಪ್ರದೇಶದ ಖಾಸಗಿ ಜಮೀನು ಖರೀದಿಸಲು ₹ 20 ಕೋಟಿ ವೆಚ್ಚ ಮಾಡಲು ಅನುಮತಿ.
-ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ನಬಾರ್ಡ್‌ನಿಂದ ₹ 1555

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.