ADVERTISEMENT

ಗಾರ್ಮೆಂಟ್ಸ್‌ ಉದ್ಯೋಗಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2016, 19:47 IST
Last Updated 18 ನವೆಂಬರ್ 2016, 19:47 IST

ಬೆಂಗಳೂರು: ಗಾರ್ಮೆಂಟ್ಸ್‌ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಉದ್ಯೋಗಿ ರಾಜೇಶ್ವರಿ (26) ಎಂಬುವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.

‘ಕೆ.ಪಿ.ಅಗ್ರಹಾರ ಸಮೀಪದ ಭುವನೇಶ್ವರಿನಗರದ ನಿವಾಸಿ ರಾಜೇಶ್ವರಿ, ಐದು ವರ್ಷಗಳ ಹಿಂದೆ ಪಳನಿ ಎಂಬುವರನ್ನು ಮದುವೆ ಆಗಿದ್ದರು. ದಂಪತಿಗೆ ಒಂದು ಗಂಡು ಮಗುವಿದೆ. ಗಾರ್ಮೆಂಟ್ಸ್‌ ಕಾರ್ಖಾನೆಯೊಂದರಲ್ಲಿ ಸಂಜೆಯವರೆಗೂ ಕೆಲಸ ಮಾಡಿದ್ದ ಅವರು, ರಾತ್ರಿ ಮನೆಗೆ ಹೋಗುವಾಗ ವಿಷ ಸೇವಿಸಿದ್ದಾರೆ’ ಎಂದು ಕೆ.ಪಿ.ಅಗ್ರಹಾರ ಪೊಲೀಸರು ತಿಳಿಸಿದರು.

ನಕಲಿ ಶೂ ಮಾರಾಟ– ಬಂಧನ: ‘ನೈಕ್‌’ ಕಂಪೆನಿಯ ಸ್ಟಿಕ್ಕರ್‌ ಅಂಟಿಸಿ ನಕಲಿ ಶೂ ಮಾರಾಟ ಮಾಡುತ್ತಿದ್ದ  ನಿಯಮತ್‌ಉಲ್ಲಾ (55) ಎಂಬಾತನನ್ನು ಸಿಸಿಬಿ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

‘ಶಿವಾಜಿನಗರದಲ್ಲಿ ಅಂಗಡಿ ಇಟ್ಟುಕೊಂಡಿದ್ದ ಆರೋಪಿ, ಅಲ್ಲಿಯೇ ಶೂಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ ₹14 ಲಕ್ಷ ಮೌಲ್ಯದ ಶೂಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಆರೋಪಿಯು ನೈಕ್‌ ಕಂಪೆನಿಯ ಅಸಲಿ ಶೂ ಹೋಲಿಕೆಯಾಗುವಂತೆ ಕಳಪೆ ದರ್ಜೆಯ  ಸಾಮಗ್ರಿ ಬಳಸಿ ತಯಾರಿಸಿದ್ದ ನಕಲಿ ಶೂ ಮಾರಾಟ ಮಾಡುತ್ತಿದ್ದರು. ಆ ಮೂಲಕ ಸಾರ್ವಜನಿಕರನ್ನು ಯಾಮಾರಿಸುತ್ತಿದ್ದರು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.