ADVERTISEMENT

ಚುನಾವಣೆಗೆ ಸಕಲ ರೀತಿಯ ಸಿದ್ಧತೆ

ರಾಜರಾಜೇಶ್ವರಿನಗರ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 22 ಮೇ 2018, 19:52 IST
Last Updated 22 ಮೇ 2018, 19:52 IST
ರಾಜರಾಜೇಶ್ವರಿ ನಗರ ವಿಧಾನಸಭೆ ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ರಾಜರಾಜೇಶ್ವರಿ ನಗರ ಕಮಾನು ಸಮೀಪ ಬಿಬಿಎಂಪಿ ಸಿಬ್ಬಂದಿ ಮತ್ತು ಪೊಲೀಸರು ವಾಹನಗಳ ತಪಾಸಣೆ ಮಾಡಿದರು --ಪ್ರಜಾವಾಣಿ ಚಿತ್ರ
ರಾಜರಾಜೇಶ್ವರಿ ನಗರ ವಿಧಾನಸಭೆ ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ರಾಜರಾಜೇಶ್ವರಿ ನಗರ ಕಮಾನು ಸಮೀಪ ಬಿಬಿಎಂಪಿ ಸಿಬ್ಬಂದಿ ಮತ್ತು ಪೊಲೀಸರು ವಾಹನಗಳ ತಪಾಸಣೆ ಮಾಡಿದರು --ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಇದೇ 28ರಂದು ನಡೆಯಲಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ. ಮಹೇಶ್ವರ ರಾವ್‌ ತಿಳಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರಕ್ಕೆ ಒಬ್ಬರು ವೀಕ್ಷಕರು (ಸಾಮಾನ್ಯ) ಹಾಗೂ ಇಬ್ಬರು ವೀಕ್ಷಕರನ್ನು (ವೆಚ್ಚ) ಆಯೋಗ ನೇಮಕ ಮಾಡಿದೆ. ಮತಗಟ್ಟೆ ಅಧಿಕಾರಿಗಳಿಗೆ ಇದೇ 23ರಂದು ಹಲಗೆವಡೇರಹಳ್ಳಿ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ತರಬೇತಿ ನೀಡಲಾಗುತ್ತದೆ. ಮೇ 31ರಂದು ಮತ ಎಣಿಕೆ ನಡೆಯಲಿದೆ’ ಎಂದರು.

ಅತಿ ಸೂಕ್ಷ್ಮ 20 ಮತಗಟ್ಟೆಗಳಲ್ಲಿ ವೆಬ್‌ಕ್ಯಾಸ್ಟಿಂಗ್‌ ಅಳವಡಿಸಲಾಗುತ್ತದೆ. ಚುನಾವಣಾ ಕಾರ್ಯಕ್ಕೆ 10 ಸಿಪಿಎಂಎಫ್‌ ತುಕಡಿಗಳು ಹಾಗೂ 15 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗುತ್ತದೆ ಎಂದರು.

ADVERTISEMENT

‘ಚುನಾವಣಾ ಕಾರ್ಯಕ್ಕೆ ಎಂ3 ಮಾದರಿಯ ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. ನೀತಿಸಂಹಿತೆ ಜಾರಿಯಾದ ಬಳಿಕ ಕ್ಷೇತ್ರದಲ್ಲಿ 7 ಎಫ್‌ಐಆರ್‌ ದಾಖಲಾಗಿವೆ’ ಎಂದರು.

14

ಕಣದಲ್ಲಿರುವ ಅಭ್ಯರ್ಥಿಗಳು

5.65 ಲಕ್ಷ

ಕ್ಷೇತ್ರದ ಮತದಾರರು

421

ಮತಗಟ್ಟೆಗಳು

4

ಪಿಂಕ್‌ ‍ಮತಗಟ್ಟೆಗಳು

2,524

ಮತಗಟ್ಟೆ ಅಧಿಕಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.