ADVERTISEMENT

ಜಲ ಮಂಡಳಿಯಿಂದಲೂ ವಿಜಯಭಾಸ್ಕರ್‌ ವರ್ಗ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:42 IST
Last Updated 28 ಏಪ್ರಿಲ್ 2016, 19:42 IST
ಜಲ ಮಂಡಳಿಯಿಂದಲೂ ವಿಜಯಭಾಸ್ಕರ್‌ ವರ್ಗ
ಜಲ ಮಂಡಳಿಯಿಂದಲೂ ವಿಜಯಭಾಸ್ಕರ್‌ ವರ್ಗ   

ಬೆಂಗಳೂರು: ಐಎಎಸ್‌ ಅಧಿಕಾರಿ ಟಿ.ಎಂ. ವಿಜಯ ಭಾಸ್ಕರ್‌ ಅವರನ್ನು ಬೆಂಗ ಳೂರು ಜಲಮಂಡಳಿ ಅಧ್ಯಕ್ಷ ಹುದ್ದೆಯಿಂದಲೂ ಸ್ಥಳಾಂತರಿಸಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಅವರಿಗೆ ಜಲಮಂಡಳಿ ಅಧ್ಯಕ್ಷರ ಹೊಣೆ ವಹಿಸಲಾಗಿದೆ.

ವಿಜಯಭಾಸ್ಕರ್‌ ಅವರನ್ನು ಅರಣ್ಯ , ಪರಿಸರ  ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ಕಳೆದ ವಾರವಷ್ಟೇ ವರ್ಗ ಮಾಡಲಾಗಿತ್ತು.  ನಂತರವೂ ಅವರನ್ನು ಬೆಂಗಳೂರು ಜಲಮಂಡಳಿಯ ಅಧ್ಯಕ್ಷರಾಗಿ ಮುಂದುವರಿಸಲಾಗಿತ್ತು. ಮಹೇಂದ್ರ ಜೈನ್‌ ಅವರು ಶನಿವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮಂಡಳಿಮೂಲಗಳು ತಿಳಿಸಿವೆ.

ವಿಜಯಭಾಸ್ಕರ್ ಏಳು ತಿಂಗಳ ಹಿಂದೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.  ಬೆಳಿಗ್ಗೆ 6 ಗಂಟೆಯಿಂದಲೇ ಕಚೇರಿಗಳಿಗೆ ಹಠಾತ್‌ ಭೇಟಿ ನೀಡುವ ಮೂಲಕ ಅಧಿಕಾರಿಗಳಲ್ಲಿ ಚುರುಕು ಮುಟ್ಟಿಸಿದ್ದರು.ಅನಧಿಕೃತ ಸಂಪರ್ಕಗಳ ವಿರುದ್ಧ ಡಿಸೆಂಬರ್‌ನಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು. ನೀರಿನ ಶುಲ್ಕ ಬಾಕಿ ವಸೂಲಾತಿ ಆಂದೋಲನವನ್ನೂ ಶುರು ಮಾಡಿದ್ದರು. ಇದರಿಂದಾಗಿ ಮೂರು ತಿಂಗಳ ಅವಧಿಯಲ್ಲಿ ₹50 ಕೋಟಿಗೂ ಅಧಿಕ ಬಾಕಿ ವಸೂಲಿ ಆಗಿತ್ತು. 

ನಗರದಲ್ಲಿ ನೀರಿನ ಸಂಪರ್ಕ ಪಡೆದಿರುವವರು 8.5 ಲಕ್ಷದಷ್ಟಿದ್ದರೆ, ಅನಧಿಕೃತ ನೀರಿನ ಸಂಪರ್ಕ ಪಡೆದವರ ಸಂಖ್ಯೆ 2 ಲಕ್ಷಕ್ಕೂ ಅಧಿಕ ಇತ್ತು. ಎಲ್ಲ ಎಂಜಿನಿಯರ್‌ಗಳು ವಾರಕ್ಕೆ ಎರಡು ಸಲ ವಲಯಗಳಿಗೆ ಭೇಟಿ ನೀಡಿ ಅಕ್ರಮ ಸಂಪರ್ಕಗಳನ್ನು ಪತ್ತೆ ಹಚ್ಚಬೇಕು ಎಂದು ನಿರ್ದೇಶನ ನೀಡಿದ್ದರು. 80 ಸಾವಿರಕ್ಕೂ ಅಧಿಕ ಅನಧಿಕೃತ ಸಂಪರ್ಕ ಪತ್ತೆ ಹಚ್ಚಲಾಗಿತ್ತು. ಈ ಪೈಕಿ ಹೆಚ್ಚಿನವು  ಸಕ್ರಮಗೊಂಡಿವೆ.

ಆಡಳಿತಾತ್ಮಕ ನಿರ್ಧಾರ
‘ಜಲಮಂಡಳಿ  ಅಧ್ಯಕ್ಷರಾಗಿದ್ದ ವಿಜಯಭಾಸ್ಕರ್‌ ಹಾಗೂ ಬಿಬಿ ಎಂಪಿ ಜಾಹೀರಾತು ವಿಭಾಗದ ಸಹಾಯಕ ಆಯುಕ್ತರಾಗಿದ್ದ ಮಥಾಯಿ  ಅವರ ವರ್ಗಾವಣೆಯಲ್ಲಿ ನನ್ನ ಪಾತ್ರ ಇಲ್ಲ. ವಿಜಯಭಾಸ್ಕರ್‌ ಅವರು ಉತ್ತಮ ಅಧಿಕಾರಿ. ಅವರ ವರ್ಗಾವಣೆ ಆಡಳಿ ತಾತ್ಮಕ ನಿರ್ಧಾರ. ಮುಖ್ಯ ಮಂತ್ರಿ ಅವರೇ ಈ ನಿರ್ಧಾರ ಕೈಗೊಂಡಿದ್ದಾರೆ’  ಎಂದು ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

‘ವಿಜಯಭಾಸ್ಕರ್‌ ಅವರೇ ಮಥಾಯಿ ವಿರುದ್ಧ ಕ್ರಮ ಕೈಗೊಳ್ಳು ವಂತೆ ಸೂಚಿಸಿದ್ದರು. ಅವರು ನೀಡಿದ ವರದಿಯ ಆಧಾರದಲ್ಲೇ ಮಥಾಯಿ ವರ್ಗ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT