ADVERTISEMENT

ತತ್ವಾದರ್ಶ ಮೈಗೂಡಿಸಿಕೊಳ್ಳಿ: ಸಲಹೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 19:44 IST
Last Updated 22 ಸೆಪ್ಟೆಂಬರ್ 2014, 19:44 IST

ಬೆಂಗಳೂರು: ‘ಯುವಕರು ಗಾಂಧೀಜಿ ಯವರ ಪುಸ್ತಕಗಳನ್ನು ಓದುವುದರ ಮೂಲಕ ಅವರ ತತ್ವ ಮತ್ತು ಆದ ರ್ಶಗಳನ್ನು ಮೈಗೂಡಿಸಿಕೊಂಡು ಸುಸಂ ಸ್ಕೃತ ವ್ಯಕ್ತಿಗಳಾಗಿ ಬದುಕಬೇಕು’ ಎಂದು   ಕರ್ನಾಟಕ ಗಾಂಧಿ  ಸ್ಮಾರಕ ನಿಧಿಯ ಅಧ್ಯಕ್ಷ ಹೊ.ಶ್ರೀನಿವಾಸಯ್ಯ ಹೇಳಿದರು.

ಜ್ಞಾನಭಾರತಿ ಆವರಣದ ಎನ್ಎಸ್ ಎಸ್ ಭವನದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯ­ಕ್ರಮವನ್ನು ಉದ್ಘಾಟಿಸಿ ಅವರು ಮಾತ­ನಾಡಿದರು.

ಬೆಂಗಳೂರು ವಿವಿ ಕುಲಪತಿ ಡಾ.ಬಿ.ತಿಮ್ಮೆಗೌಡ ಮಾತನಾಡಿ, ‘ಈ ರೀತಿಯ ಶಿಬಿರಗಳನ್ನು ಆಯೋಜಿಸುವ ಮೂಲಕ ಎನ್ಎಸ್ಎಸ್ ಸ್ವಯಂ­ಸೇವಕರು ಅತ್ಯುತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮುತ್ತಾರೆ. 

ಈ ಒಂದು ಅಂಶವನ್ನು ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈ ವರ್ಷದಿಂದ ಶೈಕ್ಷಣಿಕ ಪಠ್ಯದಲ್ಲಿ ಪಠ್ಯೇತರ ಚಟವಟಿಕೆ ಗಳಿಗೆ ಗ್ರೇಡಿಂಗ್ ಅಂಕ ನೀಡುವ ಪದ್ಧತಿಯನ್ನು ಜಾರಿಗೆ ತರಲಾಗಿದೆ’ ಎಂದರು. ಶಿಬಿರದಲ್ಲಿ  ರಾಷ್ಟ್ರದ  ವಿವಿಧ ರಾಜ್ಯ­ಗಳಿಂದ 130 ಎನ್ಎಸ್ಎಸ್ ಸ್ವಯಂ­ಸೇವಕರು ಮತ್ತು 20 ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.