ADVERTISEMENT

ನಾಗರಿಕ ಸೌಲಭ್ಯದ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST
ಬಡಾವಣೆಯ ಸಮಸ್ಯೆಗಳ ಕುರಿತು ಪಾಲಿಕೆ ಸದಸ್ಯ ಹನುಮಂತಯ್ಯ ಅವರಿಗೆ ಮೋಹನ್‌, ಚಂದ್ರಶೇಖರ್‌, ಸತೀಶ್‌ ಅವರು ವಿವರ ನೀಡಿದರು
ಬಡಾವಣೆಯ ಸಮಸ್ಯೆಗಳ ಕುರಿತು ಪಾಲಿಕೆ ಸದಸ್ಯ ಹನುಮಂತಯ್ಯ ಅವರಿಗೆ ಮೋಹನ್‌, ಚಂದ್ರಶೇಖರ್‌, ಸತೀಶ್‌ ಅವರು ವಿವರ ನೀಡಿದರು   

ಬೆಂಗಳೂರು:  ಬನಶಂಕರಿ 6ನೆ ಹಂತ 2ನೆ ಬಡಾವಣೆಯ ನಿವಾಸಿಗಳು ಎದುರಿಸುತ್ತಿರುವ ಮೂಲ ಸೌಕರ್ಯ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸುವುದಾಗಿ ಮಹಾನಗರ ಪಾಲಿಕೆ ಸದಸ್ಯ   ಹನುಮಂತಯ್ಯ  ಭರವಸೆ ನೀಡಿದ್ದಾರೆ.

ಭಾನುವಾರ ಬೆಳಿಗ್ಗೆ ಬಡಾವಣೆಗೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಕುಂದುಕೊರತೆ ಆಲಿಸಿದ ನಂತರ ಅವರು ಈ ವಾಗ್ದಾನ ನೀಡಿದರು. ನಿವಾಸಿಗಳ  ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಬೀದಿ ದೀಪ, ಒಳಚರಂಡಿ, ಕಸ ಸಂಗ್ರಹ, ನೀರು ಪೂರೈಕೆ ಮತ್ತಿತರ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದರು.

‘ಲಿಂಗಧೀರನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಿಂದ ಸುತ್ತಮುತ್ತಲ ನಿವಾಸಿಗಳು ಎದುರಿಸುತ್ತಿರುವ  ದುರ್ವಾಸನೆ ಕುರಿತು ಮನವರಿಕೆಯಾಗಿದೆ. ಅದನ್ನು ಸ್ಥಗಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.