ADVERTISEMENT

ನಾಳೆ ಬಂಗಾರಪ್ಪ ಜಯಂತಿ: ಮೂವರಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:59 IST
Last Updated 23 ನವೆಂಬರ್ 2017, 19:59 IST

ಬೆಂಗಳೂರು: ಎಸ್‌.ಬಂಗಾರಪ್ಪ ವಿಚಾರ ವೇದಿಕೆ ಹಾಗೂ ಬಂಗಾರಪ್ಪ ಫೌಂಡೇಷನ್‌ ಇದೇ 25ರಂದು ಅರಮನೆ ಮೈದಾನದ ವೈಟ್‌ ಪೆಟಲ್ಸ್‌ನಲ್ಲಿ ‘ಎಸ್‌.ಬಂಗಾರಪ್ಪ 85ನೇ ಜಯಂತಿ, ನಮನ, ಚಿಂತನ ಹಾಗೂ ಅಭಿನಂದನಾ ಕಾರ್ಯಕ್ರಮ’ ಆಯೋಜಿಸಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಗೌರವ ಅಧ್ಯಕ್ಷ ಚಂದ್ರಶೇಖರ ಕಂಬಾರ, ‘ಕಾರ್ಯಕ್ರಮದಲ್ಲಿ ಕವಿ ಚನ್ನವೀರ ಕಣವಿ ಅವರಿಗೆ ಸಾಹಿತ್ಯ ಬಂಗಾರ, ರಂಗಕರ್ಮಿ ಪ್ರಸನ್ನ ಅವರಿಗೆ ರಂಗ ಬಂಗಾರ ಹಾಗೂ ಜನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ಅವರಿಗೆ ಜಾನಪದ ಬಂಗಾರ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು ತಲಾ ₹ 1 ಲಕ್ಷ, ಪ್ರಶಸ್ತಿ ಪತ್ರ, ಸ್ಮರಣಿಕೆಗಳನ್ನು ಒಳಗೊಂಡಿದೆ’ ಎಂದರು.

‘ಜನಸಾಮಾನ್ಯರು ಮತ್ತು ತೆರಿಗೆ ನೀತಿ ಎಂಬ ವಿಚಾರಸಂಕಿರಣವನ್ನು ಆಯೋಜಿಸಿದ್ದೇವೆ. ಭೂಮಿ ಬಳಗ ತಂಡದಿಂದ ಕಾಂತ್ರಿಗೀತೆಗಳ ಗಾಯನ ಹಮ್ಮಿಕೊಂಡಿದ್ದೇವೆ. ಸಮಾರಂಭವನ್ನು ಪ್ರಕಾಶ್‌ ಅಂಬೇಡ್ಕರ್ ಉದ್ಘಾಟಿಸುತ್ತಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸುತ್ತಾರೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.