ADVERTISEMENT

ನೈಸ್‌ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ಬಸ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 20:07 IST
Last Updated 5 ಮಾರ್ಚ್ 2015, 20:07 IST

ಬೆಂಗಳೂರು: ಸಂಚಾರ ದಟ್ಟಣೆ ತಗ್ಗಿಸುವ  ಮತ್ತು ಎಲೆಕ್ಟ್ರಾನಿಕ್‌ ಸಿಟಿಯ ಐಟಿ ಕಂಪೆನಿಗಳ ಉದ್ಯೋಗಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗ­ಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ನೈಸ್‌ ರಸ್ತೆ ಮೂಲಕ ಎಲೆಕ್ಟ್ರಾನಿಕ್‌ ಸಿಟಿಗೆ ಬಸ್‌ ಸೇವೆಯನ್ನು ಆರಂಭಿಸಿದೆ.

ಬಸ್‌ ದಿನಾಚರಣೆ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮ­ದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೈಸ್ ರಸ್ತೆ ಮೂಲಕ ಸಂಚರಿ­ಸುವ ನೂತನ ಬಸ್‌ ಸೇವೆಗೆ ಚಾಲನೆ ನೀಡಿದರು.

ನೈಸ್ ರಸ್ತೆಯಲ್ಲಿ  ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರು­ವುದರಿಂದಾಗಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ನೂತನ ಬಸ್‌­ಗಳು ನೈಸ್‌ ರಸ್ತೆ ಮೂಲಕ ಸಂಚರಿಸಿ ಎಲೆಕ್ಟ್ರಾನಿಕ್‌ 1ಮತ್ತು 2ನೇ ಹಂತ ತಲುಪಲಿವೆ. ಆರು ಬಸ್‌ಗಳು 42 ಟ್ರಿಪ್‌ ಸಂಚರಿಸಲಿವೆ.

ಎಲ್ಲಿಂದ ಸಂಚಾರ: ಜಯದೇವ (ಮಾರ್ಗ ಸಂಖ್ಯೆ–ನೈಸ್‌ 1), ಬನಶಂಕರಿ (ನೈಸ್‌–2), ಶ್ರೀನಗರ (ನೈಸ್‌–3), ವಿಜಯನಗರ ಟಿಟಿಎಂಸಿ (ನೈಸ್‌–4), ಬಿಇಎಂಎಲ್‌ 5ನೇ ಹಂತ (ನೈಸ್‌–5), ಸುಮನಹಳ್ಳಿ (ನೈಸ್‌–6), ಯಶವಂತ­ಪುರ ಟಿಟಿಎಂಸಿ (ನೈಸ್‌–7), ವಿಜಯ­ನಗರ ಟಿಟಿಎಂಸಿ (ವೋಲ್ವೊ–600­ಎನ್‌ಎಲ್‌) ಮತ್ತು ಬಸವೇಶ್ವರ­ನಗರ (ವೋಲ್ವೊ–600ಎನ್‌­ಎಲ್‌)­ದಿಂದ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.