ADVERTISEMENT

ನೋಟು ರದ್ದತಿ ಕ್ರಮ ಸ್ವಾಗತಾರ್ಹ: ಕೃಷ್ಣ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:48 IST
Last Updated 4 ಡಿಸೆಂಬರ್ 2016, 19:48 IST
ಡಾ. ಎನ್. ಜಗದೀಶ್‌ ಕೊಪ್ಪ (ಬಲದಿಂದ ಎರಡನೆಯವರು) ಬರೆದ ಪುಸ್ತಕ ಬಿಡುಗಡೆಗೊಳಿಸಿದ ಎಸ್‌.ಎಂ. ಕೃಷ್ಣ ಅವರು ಪ್ರತಿಯೊಂದನ್ನು ಸಂಸ್ಕೃತ ವಿವಿಯ ನಿವೃತ್ತ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆ ಹಸ್ತಾಂತರಿಸಿದರು. (ಎಡದಿಂದ) ಕತೆಗಾರರಾದ ಕೇಶವ ರೆಡ್ಡಿ ಹಂದ್ರಾಳ, ಡಾ.ಕೆ. ಸತ್ಯನಾರಾಯಣ ಹಾಗೂ ವಿಮರ್ಶಕ ಡಾ. ನಟರಾಜ ಬೂದಾಳು ಇದ್ದರು     –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಗರಿಷ್ಠ ಮುಖಬೆಲೆಯ ನೋಟು ರದ್ದತಿಯ ಕ್ರಮ ಸ್ವಾಗತಾರ್ಹವಾದದ್ದು.  ಆದರೆ, ರದ್ದತಿಗೂ ಮುನ್ನ ಸರ್ಕಾರ ಪೂರ್ವತಯಾರಿ ಮಾಡಿಕೊಳ್ಳಬೇಕಿತ್ತು’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಹೇಳಿದರು.

ವಿಕಾಸ ಪ್ರಕಾಶನದ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಎನ್. ಜಗದೀಶ್‌ ಕೊಪ್ಪ ಬರೆದ ‘ಸಂಗೀತವನದ ಕೋಗಿಲೆ ಎಂ.ಎಲ್‌. ವಸಂತಕುಮಾರಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಬಳಿಕ ಸುದ್ದಿಗಾರ ಜತೆ ಮಾತನಾಡಿದರು.

‘ದೇಶದಲ್ಲಿ ಕಪ್ಪು ಹಣ ನಿಯಂತ್ರಿಸಿ ಸುಸ್ಥಿರ ಆರ್ಥಿಕ ವ್ಯವಸ್ಥೆ ಸ್ಥಾಪಿಸಲು ಈ ಕ್ರಮ ಅಗತ್ಯವಾಗಿತ್ತು. ನೋಟು ರದ್ದತಿ ಕ್ರಮದ ಕುರಿತು ವಿರೋಧವಿಲ್ಲ. ಈ ನಿರ್ಧಾರಕ್ಕೂ ಮೊದಲು ಕನಿಷ್ಠ ಮುಖಬೆಲೆಯ ನೋಟುಗಳು ಬ್ಯಾಂಕ್‌ಗಳಲ್ಲಿ ಹೆಚ್ಚಾಗಿ ದೊರೆಯುವಂತೆ ಮಾಡಬೇಕಿತ್ತು. ಇದರಿಂದ ಸಾಮಾನ್ಯರಿಗೆ ಆಗುತ್ತಿರುವ ತೊಂದರೆ ತಪ್ಪಿಸಬಹುದಿತ್ತು’ ಎಂದು ಹೇಳಿದರು.

‘ಆದಾಯ ತೆರಿಗೆ ಇಲಾಖೆ ದಾಳಿಯಿಂದ ಅಧಿಕಾರಿಗಳ ಮನೆಯಲ್ಲಿ ದೊರೆತ ಹಣದ ಪ್ರಮಾಣ ಆಶ್ಚರ್ಯ ತರುತ್ತಿದೆ. ಆ ಹಣ ಮೂಲದ ಕುರಿತು ಸೂಕ್ತ ತನಿಖೆ ಮಾಡಬೇಕು’ ಎಂದರು. ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ರಾಜ್ಯದಲ್ಲಿ ಹಲವಾರು ಜನ ಸಂಗೀತ ದಿಗ್ಗಜರು ಆಗಿಹೋಗಿದ್ದಾರೆ. ಆದರೆ ಬೆಂಗಳೂರಿಗೆ ಕರ್ನಾಟಕ ಸಂಗೀತದ ಕೇಂದ್ರ ಎಂಬ ಖ್ಯಾತಿ ಬರಲಿಲ್ಲ. ಎಂ.ಎಲ್. ವಸಂತಕುಮಾರಿ ಅವರ ಸಾಧನೆ ಹಾಗೂ ಆದರ್ಶಗಳನ್ನು ಇಂದಿನ ಸಂಗೀತ ವಿದ್ಯಾರ್ಥಿಗಳು ಅನುಕರಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.