ADVERTISEMENT

ಪನಾಲಿ ವಿರುದ್ಧ ದೂರು

ಅರಣ್ಯ ಭೂಮಿ ಮಂಜೂರು ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 20:02 IST
Last Updated 29 ಆಗಸ್ಟ್ 2016, 20:02 IST

ಬೆಂಗಳೂರು: ನಗರ ವಿಶೇಷ ಜಿಲ್ಲಾಧಿಕಾರಿ ಎನ್‌.ಎಂ. ಪನಾಲಿ ಅವರು ಕೃಷ್ಣರಾಜಪುರದಲ್ಲಿ ಅರಣ್ಯ ಇಲಾಖೆ ಜಾಗವನ್ನು ಐವರು ಖಾಸಗಿ ವ್ಯಕ್ತಿಗಳ ಹೆಸರಿಗೆ ಮಂಜೂರು ಮಾಡಿದ್ದಾರೆನ್ನಲಾದ ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಭೂ ರಕ್ಷಣೆ ಸಮಿತಿ   ದೂರು ನೀಡಿದೆ.

ಕೃಷ್ಣರಾಜಪುರದ ಸರ್ವೆ ನಂ.23ರಲ್ಲಿ 72 ಎಕರೆ 22 ಗುಂಟೆ ಜಾಗ ಜಾರಕಬಂಡೆಯ 644 ಎಕರೆ ಮೀಸಲು ಅರಣ್ಯದ ಪಕ್ಕದಲ್ಲಿದೆ. ಈ ಜಾಗವನ್ನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಮಂಜೂರು ಮಾಡಿ 1988ರಲ್ಲೆ ವಿಶೇಷ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಪಿ. ಮಂಜೇಶ್‌ ದೂರಿನಲ್ಲಿ ತಿಳಿಸಿದ್ದಾರೆ.

ಈ ಜಾಗ ಖಾಸಗಿ ವ್ಯಕ್ತಿಗಳಿಗೆ ಮಂಜೂರಾಗಿರುವಯಾವುದೇ ದಾಖಲೆಗಳು ಇಲ್ಲ. ಅರಣ್ಯ ಇಲಾಖೆ ಜಾಗವಾಗಿಯೇ ಉಳಿಸಿಕೊಳ್ಳಬೇಕು ಎಂದು ಯಲಹಂಕ ತಹಸೀಲ್ದಾರ್‌ ವರದಿ ಕೂಡ ಸಲ್ಲಿಸಿದ್ದಾರೆ. ಆದರೂ ನಿಯಮಾವಳಿ ಗಾಳಿಗೆ ತೂರಿ ಐವರು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲು ಪನಾಲಿ ಆದೇಶ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಿ ಅರಣ್ಯ ಭೂಮಿ ಉಳಿಸಬೇಕು ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಪಿ. ಮಂಜೇಶ್‌ ಸೋಮವಾರ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.