ADVERTISEMENT

ಪರಮೇಶ್ವರ್‌, ಸಚಿವ ಜಾರ್ಜ್‌ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2015, 20:18 IST
Last Updated 29 ಮಾರ್ಚ್ 2015, 20:18 IST
ದೇವರಾಜ ಅರಸು ಭವನದಲ್ಲಿ ಭಾನುವಾರ ಇಂಟಕ್‌ ರಾಜ್ಯ ಘಟಕದಿಂದ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪ್ರದೇಶ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಮಂಜುಳಾ ನಾಯ್ಡು ಅವರು ಮಹಿಳಾ ಕಾರ್ಯಕರ್ತರೊಬ್ಬರಿಗೆ ಹಸ್ತಲಾಘವ ನೀಡಿದರು. ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ಅಧ್ಯಕ್ಷೆ ಆರ್. ಕಮಲಾಕ್ಷಿ, ಇಂಟಕ್‌ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಫ್ರಾನ್ಸಿನಾ ಇದ್ದರು –ಪ್ರಜಾವಾಣಿ ಚಿತ್ರ
ದೇವರಾಜ ಅರಸು ಭವನದಲ್ಲಿ ಭಾನುವಾರ ಇಂಟಕ್‌ ರಾಜ್ಯ ಘಟಕದಿಂದ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪ್ರದೇಶ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಮಂಜುಳಾ ನಾಯ್ಡು ಅವರು ಮಹಿಳಾ ಕಾರ್ಯಕರ್ತರೊಬ್ಬರಿಗೆ ಹಸ್ತಲಾಘವ ನೀಡಿದರು. ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ಅಧ್ಯಕ್ಷೆ ಆರ್. ಕಮಲಾಕ್ಷಿ, ಇಂಟಕ್‌ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಫ್ರಾನ್ಸಿನಾ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಿಗದಿತ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹಾಗೂ ಸಚಿವ ಕೆ.ಜೆ. ಜಾರ್ಜ್‌ ವಿರುದ್ಧ  ರಾಷ್ಟ್ರೀಯ ಮಜ್ದೂರು ಕಾಂಗ್ರೆಸ್‌ (ಇಂಟಕ್‌) ರಾಜ್ಯ ಘಟಕವು ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯ ಇಂಟಕ್‌ ವಿಭಾಗದ ವತಿ ಯಿಂದ ಭಾನುವಾರ ಇಲ್ಲಿನ ದೇವರಾಜ ಅರಸು ಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ  ಏರ್ಪಡಿಸಲಾ ಗಿತ್ತು.  ಈ ಇಬ್ಬರೂ ನಾಯಕ­ರನ್ನು ಕಾರ್ಯಕ್ರಮದ ಅತಿಥಿಗಳನ್ನಾಗಿ ಆಹ್ವಾನಿಸ ಲಾಗಿತ್ತು.

ಆದರೆ ಪರಮೇಶ್ವರ್‌ ಮತ್ತು ಜಾರ್ಜ್‌ ಗೈರು ಹಾಜರಾಗಿದ್ದ ಕಾರಣ ಸಭೆಯಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಮಜ್ದೂರ್‌ ಕಾಂಗ್ರೆಸ್‌ನ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಾಂತಕುಮಾರ್‌ ಹಾಗೂ ಹಿರಿಯ ಮುಖಂಡ ಕೆ.ಜಯಪ್ರಕಾಶ್‌ ಹೆಗ್ಡೆ ತೀವ್ರ ಬೇಸರ ಹೊರಹಾಕಿದರು.
‘ನಮಗೆ ನಿಮ್ಮ ಸ್ಥಾನಮಾನ ಬೇಕಿಲ್ಲ. ಕಾರ್ಯಕರ್ತರ ವಿಶ್ವಾಸ ಉಳಿಸಿಕೊಳ್ಳಿ. ಕಾರ್ಯಕರ್ತರು ಮಾತ್ರವೇ ನಿಮ್ಮ   ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡ ಬಲ್ಲರು. ಸಂಘಟನೆ ಬಲವಾದ್ರೆ ಮಾತ್ರ ಎಲ್ಲರೂ ನಿಮ್ಮನ್ನು ಹುಡುಕಿ ಕೊಂಡು ಬರ್ತಾರೆ. ಇಲ್ಲದಿದ್ದರೆ ಕಷ್ಟ’ ಎಂದರು.

‘ನಮ್ಮ ಈ ಅಸಮಾಧಾವನ್ನು ಉಭಯ ನಾಯಕರಿಗೆ ತಲುಪಿಸಿ’ ಎಂದೂ ಶಾಂತಕುಮಾರ್‌ ಸಭೆಯಲ್ಲಿ ಹಾಜರಿದ್ದ ಮೋಟಮ್ಮ ಅವರನ್ನು ಒತ್ತಾ ಯಿಸಿದರು. ಇಂಟಕ್‌ ರಾಜ್ಯ ಘಟಕದ ಅಧ್ಯಕ್ಷ ಎನ್‌.ಎಂ.ಅಡ್ಯಂತಾಯ, ಇಂಟಕ್‌ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮುತಕಿ  ಉತ್ತಯ್ಯ, ಕೆ.ಬಿ.ರಮ್ಯಾ ಹಾಗೂ ವಿವಿಧ ಜೆಲ್ಲೆಗಳಿಂದ ಬಂದಿದ್ದ ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.

*ಇವತ್ತು ನಾಯಕರು ರಾಜಕಾರಣಕ್ಕಾಗಿ ಹೋರಾಟ ಮಾಡ್ತಿದ್ದಾರೆ. ಗೊತ್ತು ಗುರಿ ಯಿಲ್ಲದೆ ದಿಢೀರ್‌ ಎಂದು ಯಾರೋ ಕರೆದರು ಅಂತಾ ಹೋರಾಟಕ್ಕೆ ಇಳಿದರೆ ನಿಮ್ಮ ಪ್ರಯತ್ನ ವ್ಯರ್ಥವಾಗುತ್ತದೆ.
ಕೆ.ಜಯಪ್ರಕಾಶ್‌ ಹೆಗ್ಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT