ADVERTISEMENT

ಪಾಲಿಕೆ ಮುಂದೆ ಲಕ್ಷ್ಮೀದೇವಮ್ಮ ಪ್ರತಿಮೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 20:06 IST
Last Updated 16 ಮಾರ್ಚ್ 2017, 20:06 IST
ಪಾಲಿಕೆ ಮುಂದೆ ಲಕ್ಷ್ಮೀದೇವಮ್ಮ ಪ್ರತಿಮೆ
ಪಾಲಿಕೆ ಮುಂದೆ ಲಕ್ಷ್ಮೀದೇವಮ್ಮ ಪ್ರತಿಮೆ   

ಬೆಂಗಳೂರು: ‘ಕೆಂಪೇಗೌಡರ ಸೊಸೆ ಲಕ್ಷ್ಮೀದೇವಮ್ಮ ಅವರ ಪ್ರತಿಮೆಯನ್ನು ಪಾಲಿಕೆಯ ಕೇಂದ್ರ ಕಚೇರಿ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡುತ್ತೇವೆ’ ಎಂದು ಮೇಯರ್‌ ಜಿ.ಪದ್ಮಾವತಿ ಅವರು ತಿಳಿಸಿದರು.

ಶಿಲ್ಪಿ ಜಗದೀಶ್ ಅವರು ನಿರ್ಮಿಸುತ್ತಿರುವ ಪ್ರತಿಮೆಯನ್ನು ಗುರುವಾರ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರೊಂದಿಗೆ ಮಾತನಾಡಿದರು.

‘ಲಕ್ಷ್ಮೀದೇವಮ್ಮ ನಾಡಿಗಾಗಿ ಪ್ರಾಣವನ್ನು ಮುಡಿಪಾಗಿಟ್ಟ ಮಹಾತ್ಯಾಗಿ. ಅವರ ಪ್ರತಿಮೆಯನ್ನು ಬಿಬಿಎಂಪಿ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಿದ್ದೇವೆ.

ಪ್ರತಿಮೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಅದರಲ್ಲಿ ಕೆಲವೊಂದು ಬದಲಾವಣೆ ಮಾಡುವಂತೆ ಕಲಾವಿದರಿಗೆ ಸೂಚಿಸಿದ್ದೇನೆ. ಕೆಂಪೇಗೌಡ ದಿನಾಚರಣೆಗೂ ಮುನ್ನ ಪ್ರತಿಮೆ ಪ್ರತಿಷ್ಠಾಪನೆ ಮಾಡುತ್ತೇವೆ’ ಎಂದು ಅವರು ತಿಳಿಸಿದರು.

‘ಸಾರ್ವಜನಿಕರಿಗೆ ಲಕ್ಷ್ಮಿದೇವಮ್ಮ ಅವರ ಪರಿಚಯ ಮಾಡಿಸಬೇಕು. ಅವರ ತ್ಯಾಗ-ಬಲಿದಾನಗಳನ್ನು ಪ್ರತಿದಿನ ಸ್ಮರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಪ್ರತಿಮೆ ಸ್ಥಾಪಿಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT