ADVERTISEMENT

ಪುಟ್ಟಸ್ವಾಮಿ ಬರೆದಿರುವ ಅರಸು ಲೇಖನ ಕೃತಿ ಚೌರ್ಯ

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 12:45 IST
Last Updated 26 ಜುಲೈ 2016, 12:45 IST
ಪುಟ್ಟಸ್ವಾಮಿ ಬರೆದಿರುವ ಅರಸು ಲೇಖನ ಕೃತಿ ಚೌರ್ಯ
ಪುಟ್ಟಸ್ವಾಮಿ ಬರೆದಿರುವ ಅರಸು ಲೇಖನ ಕೃತಿ ಚೌರ್ಯ   

ಬೆಂಗಳೂರು:  ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ  ಕೃತಿ ಚೌರ್ಯ ಪ್ರಕರಣಗಳು ಹೆಚ್ಚುತ್ತಿದ್ದು  ಇದೀಗ  ಲೇಖಕ ಪುಟ್ಟಸ್ವಾಮಿ ಅವರು ಬರೆದಿರುವ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಕುರಿತಾದ ಲೇಖನವೊಂದು ಯಥಾವತ್ತಾಗಿ ಕೃತಿ ಚೌರ್ಯವಾಗಿದೆ ಎಂದು ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದು ಕೊಂಡಿದ್ದಾರೆ.

1993ರಲ್ಲಿ  ಪುಟ್ಟಸ್ವಾಮಿ  ಅವರು  ಬರೆದಿದ್ದ  ‘ ಮಹಾ ಮುತ್ಸದ್ದಿ ದೇವರಾಜು ಅರಸು’ ಎಂಬ ಲೇಖನವನ್ನು  ನಳಿನ ಎಸ್‌ ಎಂಬುವರು ಶಿರ್ಷಿಕೆ ಮತ್ತು ಉಪ ಶಿರ್ಷಿಕೆ ಸಹಿತ ಸೇರಿದಂತೆ ಇಡೀ ಲೇಖನವನ್ನು ಯಥಾವತ್ತಾಗಿ ಕಾಫಿ ಮಾಡಿ ‘ಕರ್ನಾಟಕದ ಅರಸು’ ಎಂಬ  ಸಂಪಾದಿತ ಕೃತಿಯಲ್ಲಿ ಪ್ರಕಟಿಸಿದ್ದಾರೆ ಎಂದು  ಅವರು  ಫೇಸ್‌ಬುಕ್‌ನಲ್ಲಿ  ಬರೆದುಕೊಂಡಿದ್ದಾರೆ.

ಕರ್ನಾಟಕ ಅರಸು ಕೃತಿಯನ್ನು ಹಿರಿಯ ಲೇಖಕರು ಹಾಗೂ ವಿದ್ವಾಂಸರಾದ ಡಾ. ಕೃಷ್ಣಮೂರ್ತಿ ಹನೂರು ಮತ್ತು ಡಾ. ಹಿ. ಶಿ. ರಾಮಚಂದ್ರೇಗೌಡ ಅವರು ಸಂಪಾದಿಸಿದ್ದಾರೆ.

ಯಥಾವತ್ತಾಗಿ ಲೇಖನ ಪ್ರಕಟಿಸಿರುವುದಕ್ಕೆ ಮತ್ತು  ಕೃತಿ ಚೌರ್ಯದ ಬಗ್ಗೆ ಪುಟ್ಟಸ್ವಾಮಿ ತಮ್ಮ  ಫೇಸ್‌ಬುಕ್‌ನಲ್ಲಿ ಖಾತೆಯಲ್ಲಿ ಅಸಮಾದಾನ ವ್ಯಕ್ತಪಡಿಸಿದ್ದಾರೆ.

&#13;</p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT