ADVERTISEMENT

‘ಬಯೋ ಡ್ರೈವಥಾನ್‌’ ಸಾಹಸ ಸ್ಪರ್ಧೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:43 IST
Last Updated 17 ಫೆಬ್ರುವರಿ 2017, 19:43 IST
ಬಯೋ ಡ್ರೈವಥಾನ್‌ಗೆ ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಚಾಲನೆ ನೀಡಿದರು.  ರಾಷ್ಟ್ರೀಯ ಬಯೋ ಡೀಸೆಲ್‌ ವರ್ಕಿಂಗ್‌ ಗ್ರೂಪ್‌ನ ಅಧ್ಯಕ್ಷ ವೈ.ಬಿ.ರಾಮಕೃಷ್ಣ, ಶೃಂಗೇರಿ ಮಠದ ಆಡಳಿತಾಧಿಕಾರಿ ವಿ.ಆರ್‌.ಗೌರಿಶಂಕರ್‌ ಇದ್ದರು.
ಬಯೋ ಡ್ರೈವಥಾನ್‌ಗೆ ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಚಾಲನೆ ನೀಡಿದರು. ರಾಷ್ಟ್ರೀಯ ಬಯೋ ಡೀಸೆಲ್‌ ವರ್ಕಿಂಗ್‌ ಗ್ರೂಪ್‌ನ ಅಧ್ಯಕ್ಷ ವೈ.ಬಿ.ರಾಮಕೃಷ್ಣ, ಶೃಂಗೇರಿ ಮಠದ ಆಡಳಿತಾಧಿಕಾರಿ ವಿ.ಆರ್‌.ಗೌರಿಶಂಕರ್‌ ಇದ್ದರು.   
ಬೆಂಗಳೂರು: ದೇಶದ ಪ್ರಥಮ ಬಯೋ ಡ್ರೈವಥಾನ್‌ ಸಾಹಸ ಸ್ಪರ್ಧೆಗೆ  ಶುಕ್ರವಾರ ನಗರದಲ್ಲಿ ಕೇಂದ್ರ ಸಚಿವ ಅನಂತಕುಮಾರ್‌ ಚಾಲನೆ ನೀಡಿದರು.
 
ಡೀಸೆಲ್‌ಗೆ ಜೈವಿಕ ಇಂಧನ  ಮಿಶ್ರಣ ಮಾಡಿ ಬೆಂಗಳೂರಿನಿಂದ ಶೃಂಗೇರಿಗೆ ಹೋಗಿ ವಾಪಸ್‌ ಬರುವ ಡ್ರೈವಥಾನ್‌ ಸ್ಪರ್ಧೆಯಲ್ಲಿ 35 ಕಾರುಗಳು ಭಾಗವಹಿಸಿದ್ದವು.
 
ಈ ಸಂದರ್ಭದಲ್ಲಿ ಮಾತನಾಡಿದ ಅನಂತಕುಮಾರ್‌, ಪರಿಸರ ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಜೈವಿಕ ಇಂಧನದ ಬಳಕೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
 
ದೆಹಲಿ, ಬೆಂಗಳೂರು ಮುಂತಾದ ಕಡೆ ಇರುವ ಮೆಟ್ರೊದಲ್ಲಿ ಬಯೋ ಡೀಸೆಲ್‌ ಬಳಸಲು ಯೋಜನೆ ರೂಪಿಸುವಂತೆ ಸೂಚಿಸಲಾಗುವುದು ಎಂದು ಅನಂತಕುಮಾರ್‌ ಹೇಳಿದರು.
 
ರಾಷ್ಟ್ರೀಯ ಬಯೋ ಡೀಸೆಲ್‌ ವರ್ಕಿಂಗ್‌ ಗ್ರೂಪ್‌ನ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಮಾತನಾಡಿ, ಜೈವಿಕ ಇಂಧನ ಬಳಕೆ ಕುರಿತು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಸಕಾರಾತ್ಮಕವಾಗಿವೆ ಎಂದು ಹೇಳಿದರು. 
 
 ಶೃಂಗೇರಿಯಲ್ಲಿ ಜೈವಿಕ ಇಂಧನಕ್ಕೆ ಬಳಸುವ ಸಸಿಗಳನ್ನು ನೆಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನೂ ಶನಿವಾರ ಹಮ್ಮಿಕೊಳ್ಳಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.